ಗದಗ : ಸಂವಿಧಾನದ ಆಶಯದಂತೆ ಎಲ್ಲರಿಗೂ ಶಿಕ್ಷಣದ ಹಕ್ಕು ಜಾರಿಯಾಗಬೇಕು.ಗುಣಾತ್ಮಕ ಶಿಕ್ಷಣ ದೊರೆತಾಗ ಮಾತ್ರ ತಳಸಮುದಾಯಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತೆಲಂಗಾಣ ರಾಜ್ಯ ಪೊಲೀಸ್ ಆಯುಕ್ತ ಹಾಗೂ ಕಾರ್ಯದರ್ಶಿ ಸಮಾಜ ಕಲ್ಯಾಣ ಮತ್ತು ಬುಡಕಟ್ಟು ಕಲ್ಯಾಣ ವಸತಿಶಾಲೆ ಶಿಕ್ಷಣ ಸಂಸ್ಥೆಗಳ ಸೊಸೈಟಿ,ಅಧ್ಯಕ್ಷ ಸ್ವೆರೋಸ್ ನೆಟ್ವರ್ಕ್ ನ ಡಾ.ಆರ್.ಎಸ್.ಪ್ರವೀಣಕುಮಾರ (IPS) ಹೇಳಿದರು.


COMMERCIAL BREAK
SCROLL TO CONTINUE READING

ಅವರು ಗದಗ (Gadagನ ಡಾ.ಬಾಬು ಜಗಜೀವನರಾಂ ಭವನದ,ಶರಣ ಮಾದಾರ ಚೆನ್ನಯ್ಯ ವೇದಿಕೆಯಲ್ಲಿ ನಡೆದ "ತಳಸಮುದಾಯಗಳ ಘನತೆಯ ಬದುಕಿಗೆ ಗುಣಾತ್ಮಕ ಶಿಕ್ಷಣದೆಡೆಗೆ ನಮ್ಮ ನಡಿಗೆ"ಎಂಬ ಘೋಷಣೆಯಡಿ ಸ್ವೆರೋಸ್ ಕರ್ನಾಟಕ ರಾಜ್ಯಮಟ್ಟದ ಮೊದಲ ಸಮಾವೇಶದ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಹೇಳಿದರು.


ಇದನ್ನೂ ಓದಿ: ಹಳ್ಳಿರಂಗ ಶಾಲೆಯ ಜಾಡು ಹಿಡಿದು..


ಏಳು ದಶಕ ಕಳೆದರೂ ಸಮುದಾಯಗಳು ಇನ್ನೂ ಅಭಿವೃದ್ಧಿಯಾಗಿಲ್ಲ.ತಳ ಸಮುದಾಯಗಳಿಗೆ ಭೂಮಿ,ಶಿಕ್ಷಣ,ಉದ್ಯೋಗ,ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ.ತಳಸಮುದಾಯದಗಳ ಅಭಿವೃದ್ಧಿಯಾಗದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ.ಆದ್ದರಿಂದ,ದೇಶದಲ್ಲಿರುವ ಎಲ್ಲ ಸಮುದಾಯಗಳಿಗೂ ಗುಣಾತ್ಮಕ ಮತ್ತು ಸಮಾನ ಶಿಕ್ಷಣ ದೊರೆಯುವಂತಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.


ಎಲ್ಲಾ ಹಂತದ ಸ್ಪರ್ಧೆಗಳನ್ನು ತಳಸಮುದಾಯಗಳ ಮಕ್ಕಳು ಸ್ಪರ್ಧಿಸಿ ಅವಕಾಶವನ್ನು ಅವರೇ ಪಡೆದುಕೊಳ್ಳುವ ರೀತಿಯಲ್ಲಿ ನಾವು ಮುಂದಿನ ಪೀಳಿಗೆಯನ್ನು ಮತ್ತು ಜನರನ್ನು ರೂಪಿಸಬೇಕಾಗಿದೆ.ಗುಣಮಟ್ಟದ ಶಿಕ್ಷಣ ದೊರೆತರೆ ಮಾತ್ರ ಅಭಿವೃದ್ಧಿ ಕಡೆ ಸಾಗಲು ಸಾಧ್ಯವಾಗುತ್ತದೆ.ಆದ್ದರಿಂದ ನಾವೆಲ್ಲ ಒಟ್ಟಾಗಿ ಆ ಪ್ರಯತ್ನ ಮಾಡಬೇಕಾಗಿದೆ.ನಮ್ಮ ನಮ್ಮ ನೆಲೆಗಳಲ್ಲಿ ಕೆಲಸ ಮಾಡುತ್ತ,ನಮ್ಮನ್ನು ನಾವು ಕಟ್ಟಿಕೊಳ್ಳುತ್ತ ಸಮುದಾಯದ ಅಭಿವೃದ್ಧಿ ಕೆಲಸ ಮಾಡಬೇಕು.ಆಗ ಮಾತ್ರ ಸಮುದಾಯ ಬದಲಾವಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.


ಇದನ್ನೂ ಓದಿ: ಗದಗ ಬಸ್ ನಿಲ್ದಾಣಕ್ಕೆ ಪಂ.ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ


'ನಮ್ಮೆಲ್ಲರ ಸಂಘಟನೆಗಳ ಗುರಿ ಒಂದೇಯಾಗಿರಲಿ.ನೀವು ಎಷ್ಟೇ ಸಂಘಟನೆಗಳನ್ನು ಕಟ್ಟಿಕೊಂಡರೂ ತಳಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣ,ಆರೋಗ್ಯ,ಆರ್ಥಿಕತೆಯ ಅಂಶಗಳನ್ನು ಕೇಂದ್ರೀಕರಿಸಿ ಗುರಿಯನ್ನು ನಿರ್ಧರಿಸಿಕೊಳ್ಳಬೇಕು.ಅದಕ್ಕಾಗಿ ಎಲ್ಲರೂ ನಿರಂತರ ಪ್ರಯತ್ನಶೀಲರಾಗಬೇಕು.ಸಮುದಾಯಗಳ ಸಹಭಾಗಿತ್ವದಲ್ಲಿ ತಳಸಮುದಾಯಗಳ ಮಕ್ಕಳಿಗೆ ದೊರೆಯುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ,ನಿರ್ಧರಿಸಲು 'ಸ್ವೆರೋಸ್ ಕರ್ನಾಟಕ' ರಾಜ್ಯಮಟ್ಟದ ಈ ಸಮಾವೇಶ ನಡೆಯುತ್ತಿದೆಯೆಂದು ಪ್ರವೀಣಕುಮಾರ ಅಭಿಪ್ರಾಯಪಟ್ಟರು.


ಸಮಾವೇಶದ ಅಧ್ಯಕ್ಷತೆಯನ್ನು ಹೊಸಪೇಟೆ ಸಖಿ ಸಂಸ್ಥೆಯ ಡಾ.ಭಾಗ್ಯಲಕ್ಷ್ಮಿ ವಹಿಸಿ ಮಾತನಾಡಿದರು.
ವೇದಿಕೆ ಮೇಲೆ ಡಾ.ಚಂದ್ರಶೇಖರ ರಾಮೇನಹಳ್ಳಿ,ವಿನಯಕುಮಾರ ಜಿ.ಬಿ,ಲಿಂಗೇಶ ಹೆಚ್.ಎಸ್.ಟಿ.ಕೆ.ದಯಾನಂದ,ಡಾ.ಕೆ.ಬಿ.ಓಬಳೇಶ,ದೇವರಾಜ ಎನ್,ಡಾ.ದಿಲೀಪಕುಮಾರ ನವಲೆ,ದಾನಪ್ಪ ಮಸ್ಕಿ,ಪ್ರೊ.ಪ್ರದೀಪ ರಮಾವತ್,ಶ್ರೀಮತಿ ಭಾಗ್ಯಲಕ್ಷ್ಮಿ,ಘನಶ್ಯಾಮ್ ಭಾಂಡಗೆ,ಡಾ.ಸಿ.ಜೆ.ಲಕ್ಷ್ಮೀಪತಿ,ಡಾ.ಶ್ರೀಧರ ಕಲಿವೀರ,ಗಂಗಾಧರ ನಾಯಕ ಇವರೆಲ್ಲರೂ ಆಸೀನರಾಗಿ,ಸಮಾವೇಶ ಕುರಿತು ಮಾತನಾಡಿದರು.


ಇದನ್ನೂ ಓದಿ: WhatsApp ಗೆ ಗುಡ್ ಬೈ ಹೇಳಿ Signal ಜೈ ಎನ್ನಲು ಈ ಟಿಪ್ಸ್ ಬಳಸಿ...!


ಮುಂಜಾನೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ ಅವರಿಂದ ಚಾಲನೆಗೊಂಡು,ಭೀಷ್ಮ ಕರೆಯ ಬಸವೇಶ್ವರ ಪ್ರತಿಮೆಯಿಂದ ಅಂಬೇಡ್ಕರ್ ಪ್ರತಿಮೆವರೆಗೆ ಮಕ್ಕಳಿಂದ "ಓದಿಗಾಗಿ ಓಟ" ಮ್ಯಾರಾಥಾನ್ ನಡೆಯಿತು.ರಾಜ್ಯದ ಬೇರೆ,ಬೇರೆ ಭಾಗಗಳ ಕಲಿಕಾ ಕೇಂದ್ರದ ನೂರಾರು ವಿದ್ಯಾರ್ಥಿಗಳು ಓಟದಲ್ಲಿ ಪಾಲ್ಗೊಂಡು ಸಮಾವೇಶದ ಘನತೆ ಹೆಚ್ಚಿಸಿದರು.


ಮಕ್ಕಳಿಂದ "ಓದಿಗಾಗಿ ಓಟ" ಮ್ಯಾರಾಥಾನ್


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.