ರಾಮನಗರ: ಸನ್ಯಾಸತ್ವ ಸ್ವೀಕರಿಸಿ ಮಠಾದಿಪತಿಯಾಗಿ ಎರಡು ವರ್ಷದ ಹಿಂದೆ ಪಟ್ಟಾಭಿಷೇಕ ಸ್ವೀಕರಿಸಿದ್ದ ಸ್ವಾಮೀಜಿ ಕಣ್ಮರೆಯ ಹಿಂದೆ ಹಲವು ಅನುಮಾನ‌ ಮೂಡಿದೆ.ಮಾಗಡಿ ತಾಲೂಕು ಸೋಲೂರಿನ ಗದ್ದುಗೆ ಮಠದ ಶಿವಮಹಂತಸ್ವಾಮಿ ಹರೀಶ್ ರಾತ್ರೋ ರಾತ್ರಿ ಮಠದಿಂದ‌ ಕಾಣೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : PM Narendra Modi : ಕಾಮನ್‌ವೆಲ್ತ್ ಪದಕ ವಿಜೇತರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ!


ಮಠದಲ್ಲಿ ನನಗೆ ಸನ್ಯಾಸತ್ವ ಇಷ್ಟ ಇಲ್ಲ. ಮಠ ಬಿಟ್ಟು ನಾನ್ ಹೋಗ್ತಿದ್ದೇನೆ, ನಾನು ಯಾರ ಕೈಗೂ ಸಿಗೋದಿಲ್ಲ‌ ನನ್ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಅಂತ ಶಿವಮಹಂತಸ್ವಾಮಿ ಪತ್ರ ಬರೆದಿಟ್ಟು ಮಠ ಬಿಟ್ಟು ಪರಾರಿಯಾಗಿದ್ದಾರೆ.ಇನ್ನೂ ಮೂಲ‌ ಹರೀಶ್ ಆಗಿದ್ದ ಇವ್ರು ಸನ್ಯಾಸತ್ವ ಸ್ವೀಕರಿಸಿದ ನಂತರ ಶಿವಮಹಂತಸ್ವಾಮಿಯಾಗಿ ದೀಕ್ಷೆ ಪಡೆಸಿದ್ರು.ಈ ಹಿಂದೆ ಯುವತಿಯೊಂದಿಗೆ ಪ್ರೇಮಾಂಕುರವಾಗಿ ಸದ್ಯ ಅದೇ ಹುಡುಗಿ ಜೋತೆ ಸ್ವಾಮಿಜೀ ಹೋಗಿದ್ದಾರೆ ಎನ್ನಲಾಗ್ತಿದೆ.


ಇನ್ನೂ ಆ ಯುವತಿಗೂ ಕಳೆದ ಒಂದುವರೆ ತಿಂಗಳ ಹಿಂದೆ ಮದುವೆಯಾಗಿದ್ದು ಸ್ವಾಮೀಜಿ ಜೊತೆ ಹೊಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕೂದುರು ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.