ಹಾಸನ  : ಅರಸೀಕೆರೆ ತಾಲೂಕಿನ, ಹೊನ್ನಶೆಟ್ಟಿಹಳ್ಳಿ ಗ್ರಾಮದ ಬಳಿ ಸಾಧುಸಂತರು ಹಾಗೂ  ಸ್ವಾಮೀಜಿಗಳು ಧರಿಸುವ ಮರದ ಪಾದುಕೆ ಹಾಗೂ ದಂಡಗಳು ಪತ್ತೆಯಾಗಿವೆ. ಇಷ್ಟೊಂದು ಸಂಖ್ಯೆಯಲ್ಲಿ ಪಾದುಕೆಗಳು ಒಂದೆಡೆ ಸಿಕ್ಕಿರುವುದು ಪೊಲೀಸರಿಗೂ ದೊಡ್ಡ ತಲೆ ನೋವಾಗಿದೆ. ದೋಷ ಪರಿಹಾರ, ಮಾಟ-ಮಂತ್ರ, ಸಿನಿಮಾ ಅಥವಾ ಧಾರಾವಾಹಿ ಚಿತ್ರೀಕರಣಕ್ಕಾಗಿ ಹೀಗೆ ಮಾಡಿರಬಹುದೇನೋ ಎನ್ನುವ ಶಂಕೆ ಕೂಡಾ ಒಂದೆಡೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 


COMMERCIAL BREAK
SCROLL TO CONTINUE READING

ಜೋಡಿಸಿ  ಇಟ್ಟಿರುವ ಪಾದುಕೆ- ದಂಡ : 
ಇಲ್ಲಿ  ಮಠದ ಸ್ವಾಮೀಜಿಗಳು ಧರಿಸುವ ಹನ್ನೆರಡು ಜೊತೆ ಪಾದುಕೆಗಳು ಹಾಗೂ ಕೈಯಲ್ಲಿ ಹಿಡಿಯುವ ದಂಡಗಳನ್ನು ಜೋಡಿಸಿ ಇಡಲಾಗಿದೆ. ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಬಳಿ ರೈತರ ಜಮೀನಿನ ಪಕ್ಕದಲ್ಲಿರುವ ಹುಲ್ಲುಹಾಸಿನ ಜಾಗದಲ್ಲಿ ಈ ದೃಶ್ಯ ಕಂಡು ಬಂದಿದೆ.  ರೈತರೊಬ್ಬರು ತಮ್ಮ ಜಮೀನಿನ ಬಳಿ ಹೋದ ವೇಳೆ ಪಾದುಕೆ ಹಾಗೂ ದಂಡಗಳನ್ನು ಈ ರೀತಿಯಾಗಿ ಜೋಡಿಸಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಇದಾದ ಬಳಿಕ ಯಾರಾದರೂ ಸ್ವಾಮೀಜಿಗಳು ಇಲ್ಲಿ ಬಂದಿದ್ದಾರೆಯೇ ಎಂದು ಸುತ್ತಲೂ ಹುಡುಕಾಟ ಕೂಡಾ ನಡೆಸಲಾಗಿದೆ.


ಇದನ್ನೂ ಓದಿ : Cauvery Water Dispute: 10 ಸಾವಿರ ಕ್ಯೂಸೆಕ್ಸ್ ಒಳಹರಿವು ಇದೆ ಎಂದು ಏಕೆ ಹೇಳ್ಬೇಕಿತ್ತು?- ಬೊಮ್ಮಾಯಿ


ಯಾರದ್ದು ಈ ಪಾದುಕೆ- ದಂಡ ? : 
ಸ್ಥಳಕ್ಕೆ ಆಗಮಿಸಿದ ಅರಸೀಕೆರೆ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಮಾಟ-ಮಂತ್ರ, ವಾಮಾಚಾರ, ದೋಷ ಪರಿಹಾರಕ್ಕಾಗಿ ಈ ರೀತಿ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಪಾದುಕೆಗಳಿಗೆ ಯಾವುದೇ ಪೂಜೆ, ಪುನಸ್ಕಾರ ಮಾಡಿಲ್ಲ. ಅಲ್ಲದೇ ವಾಮಾಚಾರ, ಮಾಟ-ಮಂತ್ರಕ್ಕೆ ಬಳಸುವ ಯಾವುದೇ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿಲ್ಲ. ಹಾಗಾಗಿ ಯಾರಾದರು ಸ್ವಾಮಿಗಳ ತಂಡ‌ ಬಂದು ಬಿಟ್ಟು ಹೋಗಿದ್ದಾರೋ ಅಥವಾ ಯಾವುದಾದರೂ ಪೂಜೆಗಾಗಿ ಹೀಗೆ ಮಾಡಲಾಗಿದೆಯೋ, ಸಿನಿಮಾ, ಧಾರಾವಾಹಿ, ಕಿರುಚಿತ್ರ, ರೀಲ್ಸ್ ಮಾಡಲು ಈ ರೀತಿ ಹೊಸ ಪಾದುಕೆ ಹಾಗೂ ದಂಡಗಳನ್ನು ತಂದು ಒಂದೆ ಜೋಡಿಸಲಾಗಿದೆ ಎಂದು ಶಂಕಿಸಲಾಗಿದೆ. ಅಲ್ಲದೇ ಈ ಘಟನೆ ಬಗ್ಗೆ ಯಾರೊಬ್ಬರು ದೂರು ನೀಡದ ಕಾರಣ ಸ್ಥಳಕ್ಕೆ ಬಂದ ಪೊಲೀಸರು ಪಾದುಕೆ ಹಾಗೂ ದಂಡಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. 


ಆತಂಕದಲ್ಲಿ ಜನತೆ : 
ಹೊನ್ನಶೆಟ್ಟಿಹಳ್ಳಿ ಗ್ರಾಮದ ಸುತ್ತಮುತ್ತ ಯಾವುದೇ ಮಠಗಳಿಲ್ಲ. ಆದರೂ ಒಂದೇ ಕಡೆ ಸ್ವಾಮೀಜಿಗಳು ಧರಿಸುವ ಪಾದುಕೆಗಳು ಹಾಗೂ ದಂಡಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಇಷ್ಟೊಂದು ಪಾದುಕೆ ಹಾಗೂ ದಂಡಗಳನ್ನು ಜೋಡಿಸಿ ಇಟ್ಟಿರುವುದನ್ನು ಕಂಡು ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರು ಬೆಚ್ಚಿ ಬಿದ್ದಿರುವುದಂತು ಸುಳ್ಳಲ್ಲ.


ಇದನ್ನೂ ಓದಿ : Veerendra Patil Wife Passes Away: ಮಾಜಿ ಸಿಎಂ ವೀರೇಂದ್ರ ಪಾಟೀಲ್ ಪತ್ನಿ ಶಾರದಾ ಪಾಟೀಲ್ ನಿಧನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ