ಬೆಂಗಳೂರು: ಬಿಬಿಎಂಪಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವೆಟರ್ ನೀಡದೇ ವಂಚಿಸಲಾಗಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ(DSS) ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದೆ. ಈ ಮಧ್ಯೆ ಟ್ವೀಟ್ ಮೂಲಕ ಬಿಜೆಪಿ ಸರ್ಕಾರ(Karnataka BJP Govt.)ದ ವಿರುದ್ಧ ಕರ್ನಾಟಕ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ‘ಬಿಜೆಪಿ ಸರ್ಕಾರ ಹಗರಣಗಳ ಕೂಪವಾಗಿದೆ. ಬಡ ಮಕ್ಕಳ ಪಾಲಿನ ಮೊಟ್ಟೆಯಿಂದ ಸ್ವೆಟರ್‌ವರೆಗೂ ಎಲ್ಲವನ್ನೂ ತಿನ್ನುತ್ತಿದ್ದಾರೆ!’ ಅಂತಾ ಆರೋಪಿಸಿದೆ.


COMMERCIAL BREAK
SCROLL TO CONTINUE READING

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಬಿಎಂಪಿ(BBMP) ಶಾಲೆಗಳ ಸುಮಾರು 16,167 ಮಕ್ಕಳಿಗೆ ಸ್ವೆಟರ್ ನೀಡುವ ಯೋಜನೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಬಿಜೆಪಿ ವಕ್ತಾರ, ನಟ ಜಗ್ಗೇಶ್ ಅವರು ನಿಯಮ ಮೀರಿ ತಮ್ಮ ಸಹೋದರಿಗೆ ಟೆಂಡರ್ ಕೊಡಿಸಿದ್ದಾರೆ. ಮಕ್ಕಳಿಗೆ ಸ್ವೆಟರ್ ಹಂಚಿಕೆಯನ್ನೇ ಮಾಡದೆ 1.75 ಕೋಟಿ ರೂ. ಬಿಲ್ ಪಾವತಿಯಾಗಿದ್ದು ಹೇಗೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನೋಂದಣಿಯಾಗಿದ್ದ ರೋಲ್ಸ್ ರಾಯ್ಸ್ ಕಾರು ಕರ್ನಾಟಕ ಸಾರಿಗೆ ಇಲಾಖೆ ವಶಕ್ಕೆ


‘ಕೈಮಗ್ಗ ನಿಗಮದ ಟೆಂಡರ್‌ ನಿಯಮ ಮೀರಿ ನಟ ಕೋಮಲ್(Komal) ಹೆಸರಿಗೆ ಹೋಗಿದ್ದು ಹೇಗೆ? ಶಾಲೆಗಳನ್ನೇ ತೆರೆಯದೆ  ಸ್ವೆಟರ್ ಹಂಚಿಕೆ ಮಾಡಿದ್ದೇವೆ ಎನ್ನುವುದು ಸುಳ್ಳು. ಹಂಚಿಕೆಯಾಗದಿದ್ದರೂ ಹಣ ಬಿಡುಗಡೆಗೆ ಸಚಿವ ಆರ್.ಅಶೋಕ್(R.Ashok) ಅಧಿಕಾರಿಗಳಿಗೆ ಒತ್ತಡ ಹಾಕಿದ್ದೇಕೆ? ಈ ಹಗರಣದಲ್ಲಿ ಅವರದ್ದೆಷ್ಟು ಪಾಲು ಇದೆ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ‘ಈ ಪ್ರಕರಣ ನನಗೆ ಸಂಬಂಧವಿಲ್ಲವೆಂದು ನಟ ಕೋಮಲ್ ನಿರಾಕರಿಸುತ್ತಾರೆ. ಹಾಗಿದ್ದರೆ ಅವರ ಸಹೋದರ ಜಗ್ಗೇಶ್ ಏಪ್ರಿಲ್ 27ರಂದು ಕೋಮಲ್‌ರ ಬಿಬಿಎಂಪಿ ಟೆಂಡರ್ ಬಗ್ಗೆ ಪ್ರಸ್ತಾಪಿಸಿದ್ದು ಹೇಗೆ? ಬಿಜೆಪಿಯ ಆಡಳಿತ ಭ್ರಷ್ಟಾಚಾರದ ಕೂಪವಾಗಿದೆ ಎಂದು ಸ್ವತಃ ಬಿಜೆಪಿಯ ಜಗ್ಗೇಶ್ ಅವರೇ ಆರೋಪಿಸಿದ್ದಾರೆ! ಭ್ರಷ್ಟರೇ ಭ್ರಷ್ಟಾಚಾರದ ಬಗ್ಗೆ ಆರೋಪಿಸುವುದು ಹಾಸ್ಯನಟನೆ!’ ಅಂತಾ ಕಾಂಗ್ರೆಸ್ ಟೀಕಿಸಿದೆ.


ಇದನ್ನೂ ಓದಿ: NEP : 'ದೇಶದಲ್ಲಿ 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿ' ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ'


‘ಬಡ ಮಕ್ಕಳ ಮೊಟ್ಟೆ ಕದ್ದಂತೆ, ಸ್ವೆಟರ್‌ ಕದ್ದಿರುವ ಈ ಪ್ರಕರಣದ ತನಿಖೆ ನಡೆಸುವಿರಾ ಅಥವಾ ಸಚಿವೆ ಶಶಿಕಲಾ ಜೊಲ್ಲೆ(Shashikala Jolle)ಯವರಿಗೆ ಕ್ಲೀನ್ ಚಿಟ್ ಕೊಟ್ಟಂತೆ ಇದಕ್ಕೂ ಕೊಡುವಿರಾ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ‘ಈ ಹಗರಣದ ಬಗ್ಗೆ ಕೂಡಲೇ ತನಿಖೆಗೆ ವಹಿಸಿ, ಬಿಬಿಎಂಪಿ ಅಧಿಕಾರಿಗಳ ಗೋಲ್ಮಾಲ್, ಸಚಿವ ಆರ್.ಅಶೋಕ್ ಅವರ ಪಾತ್ರ, ನಟ ಜಗ್ಗೇಶ್ ಅವರ ಪ್ರಭಾವ ಎಲ್ಲವೂ ಹೊರಬರಲಿ’ ಎಂದು ಕಾಂಗ್ರೆಸ್ ಆಗ್ರಹಿಸಿದೆ.   


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.