ಬೆಂಗಳೂರು: ವೈಮಾನಿಕ ತರಬೇತಿ ಶಾಲೆಗಾಗಿ ಸರ್ಕಾರದ ವತಿಯಿಂದ ಮೀಸಲಿಟ್ಟಿರುವ 214 ಎಕರೆ ಜಾಗವನ್ನು ಯಾವುದೇ ಖಾಸಗಿ ಕಂಪನಿ ಹಾಗೂ ಅಕ್ಕಪಕ್ಕದ ನಿವಾಸಿಗಳು ಒತ್ತುವರಿ ಮಾಡದಂತೆ ಕಟ್ಟೆಚ್ಚರ ವಹಿಸಬೇಕು. ಏರ್ ಕ್ರಾಫ್ಟ್‍ಗೆ ಸಂಬಂಧಿಸಿದ ಎಲ್ಲಾ ನ್ಯೂನ್ಯತೆಗಳನ್ನು ಕೂಡಲೇ ಸರಿಪಡಿಸಿ ತರಬೇತುದಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಸೂಚನೆ ನೀಡಿದರು.


COMMERCIAL BREAK
SCROLL TO CONTINUE READING

ಮಂಗಳವಾರ ಬೆಂಗಳೂರಿನ ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ಭೇಟಿ ನೀಡಿದ ಸಚಿವ ಬಿ.ನಾಗೇಂದ್ರ ಅವರು, ಅಲ್ಲಿನ 5 ಏರ್‍ಕ್ರಾಫ್ಟ್ ಹಾಗೂ ರನ್ ವೇ ಗುಣಮಟ್ಟವನ್ನು ಪರಿಶೀಲಿಸಿದರು. ದುರಸ್ತಿಯಾಗಿರುವ ಏರ್‍ಕ್ರಾಫ್ಟ್ ಗಳನ್ನು ಕೂಡಲೇ ಸರಿಪಡಿಸಿ ಒಟ್ಟು 6 ಏರ್ ಕ್ರಾಫ್ಟ್‍ಗಳ ಹಾರಾಟಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಿಬೇಕು, ಹೆಲಿಟೂರಿಸಂ ಅಭಿವೃದ್ಧಿಯಡಿ ನಿರ್ಮಾಣವಾಗುತ್ತಿರುವ ಹೆಲಿಲಾಂಜ್ ನಿರ್ಮಾಣದ ಕಾಮಗಾರಿ ವೀಕ್ಷಿಸಿ ಖಾಸಗಿ ಸಹಭಾಗೀತ್ವದಲ್ಲಿ ಮೈಸೂರು, ಕೂರ್ಗ್, ಚಿಕ್ಕಮಂಗಳೂರು ಪ್ರವಾಸಿತಾಣಗಳಿಗೆ ತೆರಳುವ ಮತ್ತು ಆಗಮಿಸುವ ಅತಿಥಿಗಳಿಗೆ ಸೂಕ್ತ ವ್ಯವಸ್ಥೆಯನ್ನು ನೀಡಬೇಕು. ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ವತಿಯಿಂದ ಬಿಲ್ಡರ್ಸ್‍ಗೆ ಅನುಕೂಲವಾಗುವಂತೆ ಕಲರ್ ಕೋಟಿಂಗ್ ಸರ್ವೇ ಮಾಡಿಸಿ ಒಂದು ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.


ಇದನ್ನೂ ಓದಿ: ಕೈ ತುಂಬಾ ಹಣ ನೀಡುವ ಕಪ್ಪು ಅರಿಶಿನ


ಇನ್ನು ಇದೇ ವೇಳೆ ಸಚಿವರಿಗೆ ಅಲ್ಲಿನ ಸಿಎಫ್‍ಐ & ಎಎಫ್‍ಐ ಪೈಲೆಟ್‍ಗಳು ತಮ್ಮ ತರಬೇತಿಯ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ನಂತರ ಸಚಿವರ ಭೇಟಿಯ ಸವಿ ನೆನಪಿಗಾಗಿ ಎಲ್ಲಾ ಸಿಬ್ಬಂದಿಗಳು ಸಚಿವರೊಂದಿಗೆ ಗುಂಪು ಫೋಟೋ ತೆಗೆಸಿಕೊಂಡರು.


ಈ ಸಂಧರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್.ಎನ್, ಆಯುಕ್ತರಾದ ಶಶಿಕುಮಾರ್, ಉಪನಿರ್ದೇಶಕರಾದ ಜಿತೇಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


ಇದನ್ನೂ ಓದಿ: ಮಾನ್ಸೂನ್ ರೋಗಗಳಿಗೆ ಬಿಸಿ ನೀರೇ ಮದ್ದು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.