ರಾಜ್ಯದಲ್ಲಿರುವುದು ತಾಲಿಬಾನ್ ಆಡಳಿತ: ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ
ಮೈಸೂರು ವಿಶ್ವವಿದ್ಯಾಲಯದ ತಾಲಿಬಾನ್ ಮಾದರಿಯ ಆದೇಶದಿಂದ ರಾಜ್ಯ ಎತ್ತ ಸಾಗುತ್ತಿದೆ ಎಂಬ ದಿಗಿಲು ಮೂಡುತ್ತಿದೆ ಅಂತಾ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಬೆಂಗಳೂರು: ರಾಜ್ಯದಲ್ಲಿರುವುದು ಪ್ರಜಾಪ್ರಭುತ್ವ ತಳಹದಿಯ ಆಡಳಿತವಲ್ಲ, ತಾಲಿಬಾನ್(Taliban) ಆಡಳಿತ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್(Karnataka Congress)ಆಕ್ರೋಶ ವ್ಯಕ್ತಪಡಿಸಿದೆ. ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣ(Mysore Gangrape) ವಿಚಾರವಾಗಿ ಮೈಸೂರು ವಿವಿ ಹೊರಡಿಸಿರುವ ಸುತ್ತೋಲೆಯನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ವಿವಿ ಮತ್ತು ಸರ್ಕಾರದ ನಿಲುವನ್ನು ಟೀಕಿಸಿದೆ.
‘ರಾಜ್ಯದಲ್ಲಿ ಪ್ರಜಾಪ್ರಭುತ್ವ ತಳಹದಿಯ ಆಡಳಿತದ ಬದಲು ತಾಲಿಬಾನ್(Taliban) ಆಡಳಿತವಿದೆ. ಇದಕ್ಕೆ ಪೂರಕವೆಂಬಂತೆ ಹಲವು ಸಚಿವರು ಮಾತಾಡಿದ್ದರು. ಈಗ ಮೈಸೂರು ವಿಶ್ವವಿದ್ಯಾಲಯದ ತಾಲಿಬಾನ್ ಮಾದರಿಯ ಆದೇಶದಿಂದ ರಾಜ್ಯ ಎತ್ತ ಸಾಗುತ್ತಿದೆ ಎಂಬ ದಿಗಿಲು ಮೂಡುತ್ತಿದೆ. ರಾಜ್ಯ ಬಿಜೆಪಿ ಸರ್ಕಾರ(BJP Govt.)ದಿಂದ ಮಹಿಳೆಯರಿಗೆ ರಕ್ಷಣೆ ದೊರಕದು ಎಂದು ವಿವಿ ಮನಗಂಡಿದೆಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Karnataka School Reopening : 'ರಾಜ್ಯದಲ್ಲಿ 1 ರಿಂದ 8 ನೇ ತರಗತಿಗಳ ಶಾಲೆ ಪುನರಾರಂಭ ಬಗ್ಗೆ ಆ.30 ರಂದು ತೀರ್ಮಾನ'
‘ಸಂಜೆ 6.30ರ ನಂತರ ಮೈಸೂರು ವಿವಿ ಆವರಣದಲ್ಲಿ ಹೆಣ್ಣು ಮಕ್ಕಳು ಓಡಾಡಬಾರದು ಎಂಬ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಆದೇಶ ಹೊರಡಿಸಿರುವುದು ಏತಕ್ಕಾಗಿ? ಬಿಜೆಪಿ ಸರ್ಕಾರ(BJP Govt.)ದಿಂದ ರಕ್ಷಣೆ ನಿರೀಕ್ಷಿಸುವುದು ವ್ಯರ್ಥ ಎಂದೇ? ಈ ಎಲ್ಲಾ ಬೇಜವಾಬ್ದಾರಿ ಸಚಿವರನ್ನು ಕಂಡು ಕುಲಪತಿಗಳು ಹತಾಶರಾಗಿದ್ದಾರೆಯೇ?’ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮಹಾತ್ಮ ಗಾಂಧೀಜಿಯವರ ಆಶಯದ ಸ್ವತಂತ್ರ ಇದಲ್ಲ ಎಂದು ಟೀಕಿಸಿದೆ.
University Of Mysore)ದ ಮಾನಸಗಂಗೋತ್ರಿ ಆವರಣದಲ್ಲಿ ಸಂಜೆ 6.30 ನಂತರ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದನ್ನು ನಿಷೇಧಿಸಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಸುತ್ತೋಲೆ ಹೊರಡಿಸಿದ್ದರು. ಸುರಕ್ಷತಾ ದೃಷ್ಟಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಕುಕ್ಕರಹಳ್ಳಿ ಕೆರೆ(Kukkarahalli Lake) ಆವರಣಕ್ಕೆ ಯಾವುದೇ ವ್ಯಕ್ತಿ ಸಂಜೆ 6.30 ನಂತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: 1 ಕೋಟಿ ರೂ. ಮೌಲ್ಯದ ಕಾರಿನಲ್ಲಿ ಮಾಜಿ ಸಿಎಂ ಬಿಎಸ್‍ವೈ ರಾಜ್ಯ ಪ್ರವಾಸ..!
ಸರ್ಕಾರ ರಾಜ್ಯವನ್ನು ದುರಂತಕ್ಕೆ ತಳ್ಳಲಿದೆ
ತನ್ನ ಮತ್ತೊಂದು ಟ್ವೀಟ್ ನಲ್ಲಿ ‘ಕೊರೊನಾ 3ನೇ ಅಲೆ ಎದುರಿಸಲು ಲಾಕ್‌ಡೌನ್, ಕರ್ಫ್ಯೂಗಳೇ ಮದ್ದು ಎಂದುಕೊಂಡಿರುವ ಸರ್ಕಾರ ಅಗತ್ಯ ಸಿದ್ಧತೆಯೇ ನಡೆಸಿಲ್ಲ’ ಎಂದು ಕುಟುಕಿದೆ.
‘ವೈದ್ಯಕೀಯ ಕ್ಷೇತ್ರದ ಬಲವರ್ಧನೆ ಇಲ್ಲ, ವೈದ್ಯಕೀಯ ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮವಿಲ್ಲ, ಆಕ್ಸಿಜನ್ ಲಭ್ಯತೆಯ ಖಾತರಿ ಇಲ್ಲ. ಲಸಿಕೆಗಳಂತೂ ಇಲ್ಲವೇ ಇಲ್ಲ! ಬಿಜೆಪಿ ಸರ್ಕಾರ ಮತ್ತೊಮ್ಮೆ ರಾಜ್ಯವನ್ನು ದುರಂತಕ್ಕೆ ತಳ್ಳಲಿದೆ’ ಅಂತಾ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ