ಬೆಂಗಳೂರು:  ಟೀಚರ್ ಹಾಗೂ ಪೋಷಕರು ಬೈದಿದಕ್ಕೆ ಕಳೆದ ವಾರ ಸಂಪಿಗೆಹಳ್ಳಿ ಹಾಗೂ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಶಾಲಾ‌ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ ಈ ಘಟನೆಗಳು ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಶಾಲಾ ಶಿಕ್ಷಕಿ ಬೈದಿದಕ್ಕೆ ವಿದ್ಯಾರ್ಥಿನಿ ಡೆತ್ ನೋಟ್ ಬರೆದು ಮನೆಯಲ್ಲಿ‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ 10ನೇ ತರಗತಿ ವಿದ್ಯಾರ್ಥಿನಿ ಅಮೃತಾ ನಿನ್ನೆ ಸಂಜೆ ಆತ್ಮಹತ್ಯೆ‌ ಮಾಡಿಕೊಂಡಿದ್ದಾಳೆ.


ಇದನ್ನೂ ಓದಿ- ಬೆಂಗಳೂರಲ್ಲಿ ಮತ್ತೊಂದು ದಾರುಣ ಘಟನೆ: ಮಗು ಕೊಂದು ತಾಯಿ‌ ಆತ್ಮಹತ್ಯೆಗೆ ಯತ್ನ


ಬಾಣಸವಾಡಿ ಮರಿಯಮ್ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅಮೃತಾಗೆ ಶಾಲೆಯಲ್ಲಿ ಓದುವ ವಿಷಯದಲ್ಲಿ ಶಾಲೆಯ ಶಿಕ್ಷಕಿ ಎಲ್ಲ ವಿದ್ಯಾರ್ಥಿಗಳ ಮುಂದೆ ಬೈದಿದ್ದರಂತೆ. ಇದರಿಂದ ಮನನೊಂದ ಅಮೃತಾ ನಿನ್ನೆ  ಸಂಜೆ ಮನೆಯಲ್ಲಿ  ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 


ಇದನ್ನೂ ಓದಿ- ಇಂಗ್ಲಿಷ್‌ ಓದಲು ಕಷ್ಟವಾಗುತ್ತೆ ಎಂದು 7 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ


ಸಾವಿಗೆ ಶರಣಾಗುವ ಮುನ್ನ  ದಯವಿಟ್ಟು ಕ್ಷಮಿಸಿ ಶಾಲೆಯಲ್ಲಿ‌ ನಡೆದ ಘಟನೆ ಮರೆಯಲು ಸಾಧ್ಯವಾಗುತ್ತಿಲ್ಲ.. ಐ ಲವ್ ಯು ಮಾಮ್ ಅಂಡ್ ಡ್ಯಾಡಿ (Mom am sorry am not able to forget in school I cannot live with this guilty) ಎಂದು ಡೆತ್ ನೋಟ್ ಬರೆದು ಅಮೃತಾ ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.