ಬಾಗಲಕೋಟೆ: ಜಿಲ್ಲೆಯಲ್ಲಿನ ತೇರದಾಳ ಕ್ಷೇತ್ರದಲ್ಲಿ ಈಗ ಚುನಾವಣಾ ರಂಗು ಕಾವೇರಿದೆ, ಹೌದು ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಅತೃಪ್ತಗೊಂಡಿರುವವವರು ಈಗ ಸ್ವಾಮಿಜೀಯವರನ್ನು ಚುನಾವಣಾ ಕಣಕ್ಕೆ ನಿಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ನಿನ್ನೆ ರಾತ್ರಿ ರಬಕವಿ-ಬನಹಟ್ಟಿಯಲ್ಲಿ ನಿನ್ನೆ ರಾತ್ರಿ ಸಭೆ ನಡೆಸಿದ ವಿವಿಧ ಸಮಾಜಗಳ ಮುಖಂಡರು ಕುರುಹಿನಶೆಟ್ಟಿ ಗುರುಪೀಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಕಣಕ್ಕೆ ಇಳಿಸಲು ಮುಂದಾಗಿದ್ದಾರೆ ಈ ಹಿನ್ನೆಲೆಯಲ್ಲಿ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.ಬಿಜೆಪಿಯ ಟಿಕೆಟ್ ವಂಚಿತ ಎಂಟು ಜನ ಆಕಾಂಕ್ಷಿಗಳು, ಕಾಂಗ್ರೆಸ್ ನ ಮೂವರು ಒಟ್ಟಾಗಿ ನೇಕಾರ ಸಮುದಾಯದ ಸ್ವಾಮೀಜಿಗೆ ಬೆಂಬಲಿಸುವ ತೀರ್ಮಾನ ಮಾಡಿದ್ದಾರೆ.


ಈ ಹಿನ್ನೆಲೆಯಲ್ಲಿ ಈಗ ಚುನಾವಣಾ ಕಣಕ್ಕೆ ಸ್ವಾಮೀಜಿ ಎಂಟ್ರಿ ಕೊಟ್ಟಿರುವುದರಿಂದ ಕ್ಷೇತ್ರದಲ್ಲಿ ಪೈಪೋಟಿ ಇನ್ನೂ ತೀವ್ರಗೊಳ್ಳಲಿದೆ ಎನ್ನಲಾಗಿದೆ.ತೇರದಾಳ ಕ್ಷೇತ್ರದಲ್ಲಿ ನೇಕಾರರೆ ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಸ್ವಾಮೀಜಿ ನಿರ್ಣಾಯಕ ಸ್ಪರ್ಧೆ ಒಡ್ಡಲಿದ್ದಾರೆ ಎನ್ನಲಾಗಿದೆ.ಸದ್ಯ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಸಿದ್ದು ಸವದಿ ,ಕಾಂಗ್ರೆಸ್ ನಿಂದ ಸಿದ್ದು ಕೊನ್ನುರ,ಜೊತೆಗೆ ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಮಿಜಿ ಸ್ಪರ್ಧಿಸುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.