ಕಾಂಗ್ರೆಸ್ ನಿಂದಲೇ ಭಯೋತ್ಪಾದನೆ, ಗಲಭೆ- ಬೇಕಾದ್ರೆ ಸಾಬೀತು ಮಾಡ್ತೀನಿ: ಮುತಾಲಿಕ್ ಗುಡುಗು
ಕಾಂಗ್ರೆಸ್ ಓಲೈಕೆಯಿಂದ ಭಯೋತ್ಪಾದಕ ಚಟುವಟಿಕೆ ಬೆಳೆದಿದೆ. ಬೇಕಾದರೆ ಇದನ್ನು ನಾನು ದಾಖಲೆ ಸಮೇತ ಸಾಬೀತು ಪಡಿಸುತ್ತೇನೆ. ದೇಶದ್ರೋಹಿ ಚಟುವಟಿಕೆಗೆ ಮೈಸೂರು ಪ್ರಯೋಗಶಾಲೆಯಾಗಿ ಬದಲಾಗಿದೆ, ಪಿಎಫ್ಐ ನಿಷೇಧಕ್ಕೊಳಗಾದರೂ ಪಿಎಫ್ಐ ಮಾನಸಿಕ ಸ್ಥಿತಿಯ ಸಾವಿರಾರು ಮಂದಿ ಇನ್ನೂ ಇದ್ದಾರೆ ಎಂದು ಶ್ರೀರಾಮಸೇನೆ ರಾಷ್ಟೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಚಾಮರಾಜನಗರ: ಕಾಂಗ್ರೆಸ್ ನವರ ಮಾನಸಿಕತೆ ಹಾಗೂ ಓಲೈಕೆ ರಾಜಕಾರಣದಿಂದ ಗಲಭೆ, ಭಯೋತ್ಪಾದನೆ, ಗಲಾಟೆ ಆಗುತ್ತಿದೆ ಎಂದು ಶ್ರೀರಾಮಸೇನೆ ರಾಷ್ಟೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಚಾಮರಾಜನಗರದಲ್ಲಿಂದು ಗುಡುಗಿದ್ದಾರೆ.
ಚಾಮರಾಜನಗರದಲ್ಲಿ ಇಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಶ್ರೀರಾಮಸೇನೆ ರಾಷ್ಟೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಕಾಂಗ್ರೆಸ್ ಓಲೈಕೆಯಿಂದ ಭಯೋತ್ಪಾದಕ ಚಟುವಟಿಕೆ ಬೆಳೆದಿದೆ. ಬೇಕಾದರೆ ಇದನ್ನು ನಾನು ದಾಖಲೆ ಸಮೇತ ಸಾಬೀತು ಪಡಿಸುತ್ತೇನೆ. ದೇಶದ್ರೋಹಿ ಚಟುವಟಿಕೆಗೆ ಮೈಸೂರು ಪ್ರಯೋಗಶಾಲೆಯಾಗಿ ಬದಲಾಗಿದೆ, ಪಿಎಫ್ಐ ನಿಷೇಧಕ್ಕೊಳಗಾದರೂ ಪಿಎಫ್ಐ ಮಾನಸಿಕ ಸ್ಥಿತಿಯ ಸಾವಿರಾರು ಮಂದಿ ಇನ್ನೂ ಇದ್ದಾರೆ ಎಂದು ಕಿಡಿಕಾರಿದರು.
ಚಂಪಷಷ್ಟಿ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕೊಡದಿರುವ ನಿರ್ಧಾರ ಸ್ವಾಗತಾರ್ಹ. ಈ ದೇಶದಲ್ಲಿದ್ದುಕೊಂಡು, ಇಲ್ಲಿನ ಸವಲತ್ತು ಪಡೆದುಕೊಂಡು ದೇಶದ್ರೋಹಿ ಚಟುವಟಿಕೆ ನಡೆಸುವವ ಕಿಡಿಗೇಡಿಗಳು, ಭಯೋತ್ಪಾದಕರಿಂದ ಈ ನಿರ್ಬಂಧ ಎಂಬುದನ್ನು ಮೌಲ್ವಿಗಳು, ಮುಲ್ಲಾಗಳು ಅರಿಯಬೇಕು, ಭಯೋತ್ಪಾದಕ ಮನಸ್ಥಿತಿ ವಿರುದ್ಧ ಈ ಬಹಿಷ್ಕಾರ. ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ, ಪ್ರವೇಶ ನಿರ್ಬಂಧಿಸಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು.
ಇದನ್ನೂ ಓದಿ- ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಾರದೆಂದು ಜನರು ತೀರ್ಮಾನಿಸಿದ್ದಾರೆ: ಸಿಎಂ ಬೊಮ್ಮಾಯಿ
ಪೊಲೀಸ್ ಇಲಾಖೆಯ ವೈಫಲ್ಯದಿಂದಾಗಿ ತಾರೀಕ್ ನಂತವರು ಬಾಂಬ್ ಹಾಕುತ್ತಿದ್ದಾರೆ, ಯೋಗಿ ಮಾದರಿ ಸರ್ಕಾರವನ್ನು ನಮ್ಮಲ್ಲಿ ಏಕೆ ತರಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಹಿಂಪಡೆದ 200 ಕ್ಕೂ ಕೇಸ್ ಗಳನ್ನು ಸರ್ಕಾರ ಏಕೆ ಇನ್ನೂ ರೀ ಓಪನ್ ಮಾಡಿಲ್ಲ, ಚುನಾವಣೆ ಬೆನ್ನೆತ್ತಿ ರಾಜ್ಯದ ಸುರಕ್ಷತೆ ಬಗ್ಗೆ ನಿರ್ಲಕ್ಷ ತೋರಿದ್ದಾರೆ, ತಾರೀಕ್ ಲಿಂಕ್ ಈಗ ತೀರ್ಥಹಳ್ಳಿಗೆ ಬಂದಿದೆ, ಬಿಜೆಪಿಯವರ ಈ ವರ್ತನೆ ಸರಿಯಲ್ಲ ಎಂದು ಇದೇ ವೇಳೆ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಈ ಬಾರಿ ಚುನಾವಣೆಗೆ ನಿಲ್ಲುವೆ:
ಹಿಂದುತ್ವಕ್ಕಾಗಿ, ಹಿಂದೂಗಳ ಕಷ್ಟ ಆಲಿಸಲು, ಹಿಂದೂವಿನ ಧ್ವನಿಯನ್ನು ವಿಧಾನಸಭೆಯಲ್ಲಿ ಮೊಳಗಿಸಲು ಈ ಬಾರಿ ಚುನಾವಣೆಗೆ ನಿಲ್ಲುತ್ತೇನೆ, ನಿರ್ಧಾರ ಅಚಲವಾಗಿದೆ ಎಂದು ಶ್ರೀರಾಮಸೇನೆ ರಾಷ್ಟೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇದೇ ವೇಳೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ- ರಾಜಧಾನಿಯ ದಕ್ಷಿಣ ವಲಯದ ಬಹುತೇಕ ರಸ್ತೆಗುಂಡಿ ಕಾಮಗಾರಿ ಕಂಪ್ಲೀಟ್..!
24 ಮಂದಿ ಪ್ರಖರ ಹಿಂದುತ್ವವಾದಿಗಳು ಚುನಾವಣೆಗೆ ನಿಲ್ಲಲ್ಲಿದ್ದು ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ, ಡಿಸೆಂಬರ್ 2 ಇಲ್ಲವೇ 3 ನೇ ವಾರ ಕ್ಷೇತ್ರ ಘೋಷಿಸುತ್ತೇನೆ ಎಂದು ಅವರು ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.