ಅದು ಸಮನ್ವಯ ಸಮಿತಿ ಅಲ್ಲ, ಸಿದ್ದರಾಮಯ್ಯ ಸಮಿತಿ: ಹೆಚ್.ವಿಶ್ವನಾಥ್ ಟೀಕೆ
ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ತಮ್ಮ ಇಷ್ಟಕ್ಕೆ ಬಂದಂತೆ ಅಧಿಕಾರ ಚಲಾಯಿಸುತಿದ್ದಾರೆ ಎಂದು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮೈಸೂರು: ಸಮ್ಮಿಶ್ರ ಸರ್ಕಾರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಮನ್ವಯ ಸಮಿತಿ ರಚಿಸಲಾಗಿದೆ. ಆದರೆ, ಈಗ ಇರುವುದು ಸಮನ್ವಯ ಸಮಿತಿ ಅಲ್ಲ. ಸಿದ್ದರಾಮಯ್ಯ ಸಮಿತಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಕಿಡಿ ಕಾರಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮವಾಯ ಸಮಿತಿಯಲ್ಲಿ ಎರಡೂ ಪಾಲುದಾರ ಪಕ್ಷಗಳು ಇರಬೇಕು. ಇಲ್ಲಿ ನಾನಾಗಲೀ ದಿನೇಶ್ ಗುಂಡೂರಾವ್ ಆಗಲೀ ಸಮಿತಿಗೆ ಹೋಗಲು ಸಾಧ್ಯವಾಗಲಿಲ್ಲ. ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ತಮ್ಮ ಇಷ್ಟಕ್ಕೆ ಬಂದಂತೆ ಅಧಿಕಾರ ಚಲಾಯಿಸುತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೈತ್ರಿ ಸರ್ಕಾರದ ವಿರುದ್ಧ ಜೆಡಿಎಸ್ ನಾಯಕರು ಮಾತನಾಡಬಾರದು. ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂಬ ಹೇಳಿಕೆ ಸಲ್ಲದು. ಕುಮಾರಸ್ವಾಮಿಯವರೇ ಐದು ವರ್ಷ ಆಡಳಿತ ನಡೆಸುತ್ತಾರೆ. ಸರ್ಕಾರ ವಿಸರ್ಜನೆಯ ಮಾತೇ ಇಲ್ಲ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.