ಸರ್ಕಾರಕ್ಕೆ ಮೊದಲೇ ಮೇಲ್ಸೇತುವೆ ನಾಮಕರಣ-ಉದ್ಘಾಟನೆ ಮುಗಿಸಿದ ಆಮ್ ಆದ್ಮಿ ಪಕ್ಷ!
ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಇನ್ನೇನು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಆದ್ರೆ ಕಳಪೆ ಕಾಮಗಾರಿ ಆರೋಪಿಸಿ ಆಮ್ ಆದ್ಮಿ ಪಕ್ಷ ಇಂದು `40% ಕಮಿಷನ್ ಮೇಲ್ಸೇತುವೆ` ಎಂದು ನಾಮಕರಣ ಮಾಡಿದೆ. ಅಲ್ಲದೆ ಉದ್ಘಾಟನೆಗೆಂದು ಕೇಕ್ ಕೂಡಾ ತರಿಸಲಾಗಿತ್ತು. ಈ ವೇಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ತಡೆದ ಪೊಲೀಸರು ವಶಕ್ಕೆ ಪಡೆದು ಪ್ರತಿಭಟನೆಯನ್ನು ತಡೆದರು.
ಬೆಂಗಳೂರು: ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಇನ್ನೇನು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಆದ್ರೆ ಕಳಪೆ ಕಾಮಗಾರಿ ಆರೋಪಿಸಿ ಆಮ್ ಆದ್ಮಿ ಪಕ್ಷ ಇಂದು "40% ಕಮಿಷನ್ ಮೇಲ್ಸೇತುವೆ" ಎಂದು ನಾಮಕರಣ ಮಾಡಿದೆ. ಅಲ್ಲದೆ ಉದ್ಘಾಟನೆಗೆಂದು ಕೇಕ್ ಕೂಡಾ ತರಿಸಲಾಗಿತ್ತು. ಈ ವೇಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ತಡೆದ ಪೊಲೀಸರು ವಶಕ್ಕೆ ಪಡೆದು ಪ್ರತಿಭಟನೆಯನ್ನು ತಡೆದರು.
ಶಿವಾನಂದ ಮೇಲ್ಸೇತುವೆಯ ಒಂದು ಭಾಗ ಮಾತ್ರ ಸಂಚಾರಕ್ಕೆ ಮುಕ್ತ ಮಾಡಲಾಗಿದ್ದು, ಇನ್ನೊಂದು ಬದಿಯಲ್ಲಿ ರಾಜಕಾಲುವೆ ಕೆಲಸ ನಡೆಯುತ್ತಿದೆ.ಈ ತಿಂಗಳಾಂತ್ಯಕ್ಕೆ ಸಂಪೂರ್ಣವಾಗಿ ಲೋಕಾರ್ಪಣೆಗೊಳಿಸಲು ಬಿಬಿಎಂಪಿ ಸಜ್ಜಾಗಿತ್ತು. ಆದ್ರೆ ಮೇಲ್ಸೇತುವೆಯ ಡಾಂಬಾರಿಕರಣ ಸೇರಿದಂತೆ ನಿರ್ಮಾಣ ಕಳಪೆ ಕಾಮಗಾರಿಯದ್ದಾಗಿದೆ. 2014 ರಿಂದ ಕಾಮಗಾರಿ ಶುರುವಾದ ಶಿವಾನಂದ ಸ್ಟೀಲ್ ಮೇಲ್ಸೇತುವೆ, ಕಾಮಗಾರಿ ಆರಂಭದಲ್ಲಿ 19 ಕೋಟಿ ರೂ.ಗಳಿಂದ ಕಾಮಗಾರಿ ವೆಚ್ಚ ಈಗ 39 ಕೋಟಿಗೆ ಏರಿಕೆಯಾಗಿದೆ. ಅಲ್ಲದೆ ಅತ್ಯಂತ ಕಳಪೆ ಕಾಮಗಾರಿ ಎಂದು ಆಪ್ ಆರೋಪಿಸಿದೆ.
ಆಪ್ ಪಕ್ಷದ ಕಾರ್ಯಕರ್ತೆ ಉಷಾ ಮೋಹನ್ ಮಾತನಾಡಿ, ಗಾಂಧಿನಗರ ಶಾಸಕರು, ಹಾಗೂ ಶಿವಾಜಿನಗರ ಶಾಸಕರು ಜೊತೆಗೆ 40% ಭ್ರಷ್ಟಾಚಾರದ ಸರ್ಕಾತ ಎಲ್ಲರೂ ಭ್ರಷ್ಟಾಚಾರದ ಕಾಮಗಾರಿಯಲ್ಲಿ ಭಾಗಿಯಾಗಿದ್ದಾರೆ. ಜನರಿಗೆ ಈ ಬಗ್ಗೆ ತಿಳುವಳಿಕೆ ನೀಡಲು ಬಂದ್ರೆ ಪೊಲೀಸರು ಕೇಕ್ ಕಿತ್ತುಕೊಂಡು ಬಂಧಿಸಿದ್ದಾರೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ