ಗದಗ : ರಾಜ್ಯ ಪೊಲೀಸ್ ಇಲಾಖೆಯಲ್ಲಿ ೨೦೨೦-೨೧ನೇ ಸಾಲಿನ ಖಾಲಿ ಇರುವ ಕಾನ್ಸ್‌ಟೇಬಲ್ ವೃಂಧದ ಸಿಪಿಸಿ/ಎಪಿಸಿ/ಸ್ಪೇಆರ್‌ಪಿಸಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಈ ಹಿಂದೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ದಿನಾಂಕಗಳನ್ನು ರಾಜ್ಯದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ವಯ ವಿಸ್ತರಿಸಲಾಗಿದೆ.


COMMERCIAL BREAK
SCROLL TO CONTINUE READING

ಕಲ್ಯಾಣ ಕರ್ನಾಟಕದ ಸಿ.ಪಿ.ಸಿ/ಎಪಿಸಿ (ಪುರುಷ ಮತ್ತು ಮಹಿಳಾ) ವೃಂಧದ ಒಟ್ಟು ೧೦೦೨ ಹುದ್ದೆಗಳಿಗ ಅರ್ಜಿ ಸಲ್ಲಿಸಲು ಜು.೯ ನಿಗದಿಪಡಿಸಲಾಗಿದ್ದು, ಶುಲ್ಕ ಪಾವತಿಸಲು ಜು.೧೩ ಕೊನೆಯ ದಿನವಾಗಿದೆ. ಸಿಪಿಸಿ ಪುರುಷ ಮತ್ತು ಮಹಿಳಾ , ಎಪಿಸಿ ಪುರುಷ (ಸಿಎಆರ್/ಡಿಎಆರ್) ವೃಂಧದ ೩೦೧೨ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಜು.೧೩ ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಗೆ ಜು.೧೫ರವರೆಗೆ ನಿಗದಿಪಡಿಸಲಾಗಿದೆ.


ಅದರಂತೆ, ಸ್ಪೇಆರ್‌ಪಿಸಿ (ಪುರುಷ, ಬ್ಯಾಂಡ್ಸಮನ್, ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ವೃಂಧದಲ್ಲಿ ಒಟ್ಟು ೨೬೭೨ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜು.೦೬ ಕೊನೆಯ ದಿನವಾಗಿದ್ದು, ಜು.೦೮ರವರೆಗೆ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ತಿಳಿಸಿದ್ದಾರೆ.