ಬೆಂಗಳೂರು : ವರಿಷ್ಠರು ರಾಜ್ಯ ಬೆಳವಣಿಗೆಯನ್ನು ಗಮನಿಸುತ್ತಿದ್ದು, ಪ್ರಸ್ತುತ ರಾಜ್ಯದ ಬೆಳವಣಿಗೆ ಬಗ್ಗೆ ರಾಜ್ಯ ನಾಯಕರ ಬಳಿ ಬಿಜೆಪಿ ಹೈಕಮಾಂಡ್ ವರದಿ ಕೇಳಿದೆ. 


COMMERCIAL BREAK
SCROLL TO CONTINUE READING

ಬಿಜೆಪಿ ನಾಯಕರು, ಕೆಲ ಶಾಸಕರು, ಯುವ ಮುಖಂಡರಿಂದಲೆ ಸರ್ಕಾರದ ವಿರುದ್ಧ ಅಪಸ್ವರ ಎತ್ತಿದ್ದಾರೆ. ಸ್ವಪಕ್ಷೀಯರೆ ಸಿಎಂ ಹಾಗೂ ಗೃಹಸಚಿವರ ರಾಜೀನಾಮೆ ಕೇಳುತ್ತಿದ್ದಾರೆ. ಇದು ಪಕ್ಷ ಹಾಗೂ ಸರ್ಕಾರದ ಇಮೇಜಿಗೆ ಡ್ಯಾಮೇಜ್ ಉಂಟು ಮಾಡುತ್ತಿದೆ. 


ಇದನ್ನೂ ಓದಿ : 'ಮೇಲ್ಸೇತುವೆ ರಸ್ತೆ ನಿರ್ಮಾಣಕ್ಕಾಗಿ 300 ಕೋಟಿ ರೂ.ಬಿಡುಗಡೆಗೆ ಕೇಂದ್ರ ತಾತ್ವಿಕ ಒಪ್ಪಿಗೆ'


ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನಪ್ರಿಯತೆ ಕುಗ್ಗುತ್ತಿದೆ, ಹೀಗಾಗಿ ಪಕ್ಷ ಸಂಘಟನೆಗೂ ತೊಡಕಾಗುವ ಆತಂಕ ಬಿಜೆಪಿಗೆ ಹೆಚ್ಚಾಗುತ್ತಿದೆ. ರಾಜ್ಯ್ದಲ್ಲಿ ಮುಂಬರಲಿರುವ ಬಿಬಿಎಂಪಿ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ, ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ವ್ಯತಿರಿಕ್ತವಾಗೋ ಪಕ್ಷ ಲೆಕ್ಕಚಾರ ಮಾಡುತ್ತಿದೆ. 


ಈ ಎಲ್ಲಾ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ಬಳಿ ಕಂಪ್ಲೀಟ್ ರಿಪೋರ್ಟ್ ಕೇಳಿದ.  ಜೊತೆಗೆ ಪ್ಯಾಚಪ್ ಹೇಗೆ ಮಾಡುತ್ತೀರಿ..? ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸೋ ಪ್ಲಾನ್ ಏನು..? ಕಾನೂನು ಸುವ್ಯವಸ್ಥೆ, ಆಡಳಿತಾತ್ಮಕ ನಿರ್ಧಾರಗಳೇನು..? ಕಳೆದುಕೊಳ್ಳುತ್ತಿರುವ ಜನಪ್ರಿಯತೆ ಮರಳಿ ಪಡೆಯೋ ತಂತ್ರಗಾರಿಕೆ ಬಗ್ಗೆಯೂ ಹೈಕಮಾಂಡ್ ವರದಿ ಕೇಳಿದೆ. ಸದ್ಯ ರಾಜ್ಯ ರಾಜಕೀಯದ ಮೇಲೆ ಬಿಜೆಪಿ ಹೈಕಮಾಂಡ್  ಹದ್ದಿನ ಕಣ್ಣಿಟ್ಟಿದೆ.


ಇದನ್ನೂ ಓದಿ : PSI Recruitment scam : ಪಿಎಸ್ಐ ಅಕ್ರಮ ಪ್ರಕರಣ : ಮತ್ತೊಬ್ಬ ಪಿಎಸ್ಐ ಸಿಐಡಿ ಬಲೆಗೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.