ಚಿತ್ರದುರ್ಗ : ಇಂದು ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿತ್ತು, ಎಲ್ಲಿ ನೋಡಿದರು ಕೇಸರಿ ಬಿಳಿ ಹಸಿರು.. ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಯಲ್ಲಿ ಅದ್ದೂರಿಯಾಗಿ  ಆಚರಿಸಲಾಗಿದೆ. ಆದರೆ ನಗರದಲ್ಲಿ ನಡೆದ ಮದುವೆಯಲ್ಲಿ ಅಕ್ಷತೆ ಜೊತೆ ಪ್ರತಿಯೊಬ್ಬರಿಗೂ "ನಮ್ಮ ಸಂವಿಧಾನ" ಎಂಬ ಪುಸ್ತಕಗಳನ್ನು ಉಚಿತವಾಗಿ ನೀಡುವ ಮೂಲಕ ನವದಂಪತಿಗಳು ಅರ್ಥಪೂರ್ಣವಾದ ಗಣರಾಜ್ಯೋತ್ಸವ ಆಚರಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ನಗರದ ಚಳ್ಳಕೆರೆ ರಸ್ತೆಯಲ್ಲಿ ಇರುವ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಇಂದು ತಾಲ್ಲೂಕಿನ ಲಕ್ಷಿಸಾಗರದ ರೇವಮ್ಮ, ಡಿ ತಿಪ್ಪೇಸ್ವಾಮಿ ಅವರ ಪುತ್ರ " ಲಿಂಗರಾಜು ಮತ್ತು ವಿ.ಪಾಳ್ಯದ ಲಕ್ಷ್ಮೀದೇವಿ ಕೃಷ್ಣಪ್ಪ ಪುತ್ರಿ ಚಂದ್ರಕಲಾ ಅವರೊಂದಿಗೆ ( ಲಿಂಗರಾಜು- ಚಂದ್ರಕಲಾ ನವದಂಪತಿ) ನಡೆದ ವಿವಾಹವು ಅತ್ಯಂತ ವಿಶೇಷ ವಾಗಿತ್ತು.‌


ಇದನ್ನೂ ಓದಿ : ʼಮೋದಿ ಪ್ರಧಾನಿಯಾಗಿದ್ದಕ್ಕೆ ನನಗೆ ʼಪದ್ಮಭೂಷಣʼ ಬಂತುʼ


ಮದುವೆಗೆ ಬಂದ ಎಲ್ಲಾ ಗಣ್ಯರು, ಬಂಧು ಮಿತ್ರರು, ಅತಿಥಿಗಳು  ಕುಟುಂಬದವರು ನಮ್ಮ ಸಂವಿಧಾನ ಪುಸ್ತಕ ಸ್ವೀಕರಿಸಿ ಅಕ್ಷತೆ ಹಾಕಿ ಹಾರೈಸಿದರು. ಕಲ್ಯಾಣ ಮಂಟಪದಲ್ಲಿ ಇದ್ದ ಎಲ್ಲರೂ ಲಿಂಗರಾಜು ಅವರ ಕಳಕಳಿಯನ್ನು ಮೆಚ್ಚಿ ಕೊಂಡಾಡಿದ್ದಾರೆ.


ಈ ವೇಳೆ ಮಾತನಾಡಿದ ಅನೇಕರು ಸಂವಿಧಾನದ ಆಶಯಗಳನ್ನು ಅದರ ಶಕ್ತಿಯನ್ನು, ಸಂವಿಧಾನದ ಅಗತ್ಯತೆಗಳನ್ನು, ಸಂವಿಧಾನವು ಶಾಸಕಾಂಗ ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಮತ್ತು ಸಾರ್ವಜನಿಕವಾದ ಬಳಕೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : ಸಿದ್ದರಾಮಯ್ಯ ಗಂಟಲಿನಿಂದ ಮಾತಾಡ್ತಾರೆ- ಹೃದಯದಿಂದಲ್ಲ: ಸಚಿವ ಸೋಮಣ್ಣ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.