Tumakuru: ವ್ಯಕ್ತಿಯ ಪ್ರಾಣ ಉಳಿಸಲು ಬಸ್ ಸಹಿತ ಆಸ್ಪತ್ರೆಗೆ ಬಂದ ಚಾಲಕ..!
Tumakuru KSTRC bus driver: ತುಮಕೂರು ಜಿಲ್ಲೆಯ ತಿಪಟೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವೇಳೆ ಪ್ರಯಾಣಿಕ ಈಶ್ವರ್ ರೆಡ್ಡಿ ಕುಸಿದು ಬಿದಿದ್ದಾರೆ.
ತುಮಕೂರು: ಪ್ರಯಾಣದ ವೇಳೆ ಹಠಾತ್ ಆನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಯ ಪ್ರಾಣ ಉಳಿಸಲು KSRTC ಚಾಲಕನೊಬ್ಬ ಬಸ್ ಸಹಿತ ನೇರವಾಗಿ ಆಸ್ಪತ್ರೆ ಆವರಣಕ್ಕೆ ಬಂದ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವೇಳೆ ಪ್ರಯಾಣಿಕ ಈಶ್ವರ್ ರೆಡ್ಡಿ ಕುಸಿದು ಬಿದಿದ್ದಾರೆ. ಉಸಿರಾಟದ ತೊಂದರೆ, ರಕ್ತ ಸ್ರಾವದಿಂದ ಪ್ರಜ್ಞಾಹೀನರಾಗಿದನ್ನು ಕಂಡ ನಿರ್ವಾಹಕ ಓಂಕಾರ ತಕ್ಷಣವೇ ಚಾಲಕ ಪ್ರಕಾಶ್ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ: ದಲಿತ ಸಿಎಂ ವಿಚಾರದಲ್ಲಿ ಕಾಂಗ್ರೆಸ್ ಡೋಂಗಿತನ ನಿಲ್ಲಿಸಲಿ: ಬಿಜೆಪಿ ತಿರುಗೇಟು
ಕೂಡಲೇ ಚಾಲಕ ಪ್ರಕಾಶ್ ಅವರು ಬಸ್ ಅನ್ನು ಸಮೀಪದಲ್ಲೇ ಇದ್ದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡ ಬಂದಿದ್ದಾರೆ. ಸಹ ಪ್ರಯಾಣಿಕರ ನೆರವಿನಿಂದ ಈಶ್ವರ್ ರೆಡ್ಡಿಯವರನ್ನು ಚಿಕಿತ್ಸೆಗೆ ದಾಖಲಿಸಲಾಯಿತು. ಸೂಕ್ತ ಚಿಕಿತ್ಸೆಯಿಂದಾಗಿ ಈಶ್ವರ್ ರೆಡ್ಡಿಯವರು ಬದುಕುಳಿದಿದ್ದಾರೆ.
ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತಿದ್ದ ಈಶ್ವರ್ ರೆಡ್ಡಿಯವರು ಚಾಲಕ ಮತ್ತು ನಿವಾರ್ಹಹಕರ ಮಾನವೀಯತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ಮಾನವೀಯತೆ ಮರೆದ ಇಬ್ಬರ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಬಹುಪರಾಕ್ ಹೇಳಿದ್ದಾರೆ.
ಇದನ್ನೂ ಓದಿ: ಹತ್ತಿರ ಬಾರದಂತೆ ಸಂಗಾತಿಯನ್ನು ತಡೆದಿರುವ ಬೆಕ್ಕು ! ಮಜವಾಗಿದೆ ವಿಡಿಯೋ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.