ನವ ದೆಹಲಿ: ಆಲಮಟ್ಟಿ ಜಲಾಶಯದ ಮಟ್ಟ ಎತ್ತರಿಸುವ ಯೋಜನೆಗೆ ಮತ್ತೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯಿಂದ ಕೊಕ್ಕೆ ಬಿದ್ದಿದೆ. ಉ.ಕನ್ನಡ ಜಿಲ್ಲೆಯ ಜೀವನದಿ ಕೃಷ್ಣ ನದಿಗೆ ಅಡ್ಡಲಾಗಿ ಆಲಮಟ್ಟಿಯಲ್ಲಿ ನಿರ್ಮಿಸಲಾಗಿರುವ ಲಾಲ್ ಬಹುದ್ದೂರ್ ಶಾಸ್ತ್ರೀ ಜಲಾಶಯದ ಎತ್ತರವನ್ನು ಹೆಚ್ಚಿಸುವ ಕರ್ನಾಟಕದ ಪ್ರಯತ್ನಕ್ಕೆ ಮತ್ತೆ ಹಿನ್ನೆಡೆ ಉಂಟಾಗಿದೆ. 


COMMERCIAL BREAK
SCROLL TO CONTINUE READING

ಅಣೆಕಟ್ಟೆಯ ಎತ್ತರಕ್ಕೆ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಕ್ಷೇಪ ಉಂಟಾಗಿರುವುದರಿಂದ ಇದನ್ನು ತಡೆಹಿಡಿಯಲಾಗಿದೆ ಎಂದು ಪರಿಸರ ಇಲಾಖೆ ತಿಳಿಸಿದೆ. ಇದು ಅಂತರಾಜ್ಯ ಕುರಿತ ವಿವಾದವಾಗಿರುವುದರಿಂದ ಈ ಕುರಿತು ಕೇಂದ್ರೀಯ ಜಲ ಆಯೋಗದ ಅನುಮತಿ ಪಡೆಯಬೇಕು ಎಂದು ಸರ್ಕಾರಕ್ಕೆ ಕೇಂದ್ರ ಪರಿಸರ ಇಲಾಖೆಯಿಂದ ಸೂಚನೆ ನೀಡಲಾಗಿದೆ. 


ಕಳೆದ ತಿಂಗಳ ನಡೆದ ಪರಿಸರ ಇಲಾಖೆ ಸಭೆಯಲ್ಲಿ‌ ಜಲಾಶಯದ ಮಟ್ಟ ಎತ್ತರಿಸಲು ನಿರ್ಧರಿಸಲಾಗಿತ್ತು. ಇದರನ್ವಯ ಜಲಾಶಯದ ಮಟ್ಟ ಎತ್ತರಿಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಸಿಡಬ್ಲ್ಯಸಿ ಅನುಮತಿ ಇರದ ಕಾರಣ ಕೇಂದ್ರ ಪರಿಸರ ಇಲಾಖೆಯಿಂದ ತಕರಾರು ತೆಗೆದಿದೆ. 


ಪ್ರಸ್ತಾವನೆಯಲ್ಲಿ ಜಲಾಶಯದ ಮತ್ತವನ್ನು 519.60 ರಿಂದ 524.256 ಮೀಟರ್ ಗೆ ಎತ್ತರಿಸಲು ಮನವಿ ಸಲ್ಲಿಸಲಾಗಿತ್ತು. ಇದರಿಂದಾಗಿ 907 TMC ನೀರು ಸಂಗ್ರಹಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. 17, 207 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಿ ಒಟ್ಟು 5.3ಲಕ್ಷ ಹೆಕ್ಟೇರ್ ಭೂಮಿಗೆ ನೀರು ಹರಿಸಲು ಸರ್ಕಾರ ತೀರ್ಮಾನಿಸಿತ್ತು. 


ಆದರೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಅಡ್ಡಿ ಹಿನ್ನಲೆ, ರಾಜ್ಯದ ಜನರ ಮೇಲೆ ಕೇಂದ್ರ ಸರ್ಕಾರ ಬರೆ ಎಳೆದ ಎಳೆದಂತಾಗಿದೆ. 5.3 ಲಕ್ಷ ಹೆಕ್ಟೇರಿಗೆ ನೀರು ಹರಿಸುವ ಯೋಜನೆಗೆ ಬ್ರೇಕ್ ಬಿದ್ದಿದೆ.