ಬೆಂಗಳೂರು: ಕಳೆದ ವಾರ ತಂದೆ ತಾಯಿಯನ್ನು ‌ಕಳೆದುಕೊಂಡು ಅನಾಥರಾಗಿದ್ದ ಹೆಣ್ಣು ಮಕ್ಕಳ ಬೆನ್ನಿಗೆ ಬೆಂಗಳೂರು ಪೊಲೀಸರು ನಿಂತಿದ್ದಾರೆ. ಆಸ್ಪತ್ರೆ ಬಿಲ್ ಐದು ಲಕ್ಷ  ದಾಟಿದ್ದ ಕಂಡು ಕಂಗಾಲಾಗಿದ್ದ ಅಪ್ರಾಪ್ತ ಹೆಣ್ಣು ಮಕ್ಕಳ ಪಾಲಿಗೆ ದೇವರಂತೆ ಬಂದಿದ್ದು ಟ್ರಾಫಿಕ್ ಡಿಸಿಪಿ ಕುಲದೀಪ್ ಜೈನ್, ಇನ್ಸ್‌ಪೆಕ್ಟರ್ ಲೋಹಿತ್ ಹಾಗೂ ಸಂಚಾರ ಇನ್ಸ್ಪೆಕ್ಟರ್ ರೂಪ ಹಡಗಲಿಯರವರು.


COMMERCIAL BREAK
SCROLL TO CONTINUE READING

ಸದಾ ಪ್ರಕರಣಗಳು ಅಂತಾ ಕೆಲಸ‌ ಮಾಡುವ ಪೊಲೀಸರು ಪುಟ್ಟ ಮಕ್ಕಳ ಕಣ್ಣೀರು ಕಂಡು ಮಮ್ಮುಲ ಮರುಗಿದ್ದಾರೆ. ಆಸ್ಪತ್ರೆಗೆ ಧಾವಿಸಿ 5 ಲಕ್ಷ 72 ಸಾವಿರ ರೂಪಾಯಿ ಶುಲ್ಕ ತೆಗೆದುಕೊಳ್ಳದಂತೆ ಆಸ್ಪತ್ರೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ತಮ್ಮ ವ್ಯಾಪ್ತಿಗೆ ಪ್ರಕರಣ ಬಾರದಿದ್ರು ಹೆಣ್ಣುಮಕ್ಕಳ ಕಣ್ಣೀರು ಕಂಡು ಅನ್ನಪೂರ್ಣೇಶ್ವರಿನಗರ ಇನ್ಸ್‌ಪೆಕ್ಟರ್ ಲೋಹಿತ್ ಆಸ್ಪತ್ರೆಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.


ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ಈ ಬ್ಯಾಚ್ ಪಿಎಸ್ ಐಗಳ ಮೇಲೆ ಈಗ ಸಿಐಡಿ ಕಣ್ಣು..?


ಇನ್ನೂ ಮಾತೃ ಹೃದಯದ ಬ್ಯಾಟರಾಯನಪುರ ಸಂಚಾರ ಇನ್ಸ್‌ಪೆಕ್ಟರ್ ರೂಪ ಹಡಗಲಿ ಅಪಘಾತಕ್ಕೀಡಾದ ದಂಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಅಷ್ಟು ದಿನವೂ ಆಸ್ಪತ್ರೆಗೆ ಭೇಟಿ‌ ನೀಡಿ ಆರೋಗ್ಯ ವಿಚಾರಿಸಿದ್ದಾರೆ.


ಕಳೆದ ವಾರ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ದಂಪತಿ ಯೊಗೇಂದ್ರ, ವಿಜಯ ಕಲಾ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಜಯಕಲಾ ಮತ್ತು ಯೋಗೇಂದ್ರರನ್ನ ಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಜಯಕಲಾ ಮೃತಪಟ್ಟಿದ್ದರು.


ಇದನ್ನೂ ಓದಿ: 'ನಿಮ್ಮ ತಲೆಗೆ ಹಗರಣಗಳು ಸುತ್ತಿಕೊಂಡ ಕೂಡಲೇ ನಮ್ಮ ಕಾಲದ ಹಗರಣಗಳು ನೆನಪಾಯಿತೇ?'


ನಂತರ ಯೋಗೇಂದ್ರ ಸಹ ಅಸುನೀಗಿದರು.ಒಂದು ಕಡೆ ಪೋಷಕರನ್ನ ಕಳೆದುಕೊಂಡು ಅನಾಥವಾಗಿದ್ದ ಇಬ್ಬರು ಮಕ್ಕಳು ಹಣ ಕಟ್ಟಲು ಪರದಾಡಿದ್ರೂ. ಈಗ ಪೊಲೀಸರು ಮಾನವೀಯತೆ ಮರೆದಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಶ್ಲಾಘನೆಗೆ ಪಾತ್ರವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.