Govt School: ಮೇ.29 ರಿಂದ ನೂತನ ಶೈಕ್ಷಣಿಕ ವರ್ಷ ಆರಂಭವಾಗಿ ಮಕ್ಕಳು ಅಷ್ಟೇ ಉತ್ಸಾಹದಿಂದ ಶಾಲೆ ಕಡೆ ಹೆಜ್ಜೆ ಹಾಕ್ತಾ ಇದ್ದಾರೆ, ಹೀಗೆ ಶಾಲೆಗೆ ಬರುವ ಮಕ್ಕಳಿಗೆ ಸೂಕ್ತ ಪಠ್ಯ ಬೋಧನೆ ಜೊತೆ ಸ್ವಚ್ಛ ಸುಂದರ ಶಾಲಾ ಕೊಠಡಿ ಸಹ ಅವಶ್ಯವಾಗಿದ್ರೂ, ಹುಬ್ಬಳ್ಳಿ ಸಮೀಪದ ಕುಂದಗೋಳ ತಾಲೂಕಿನ ಎಲ್ಲೆಡೆ ಬೀಳುವ ಹಂತದ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳು ಮಕ್ಕಳನ್ನು ಕಾಡುತ್ತಲಿವೆ.  ಪಾಲಕರು ಮಕ್ಕಳು ಆತಂಕದಲ್ಲಿದ್ದಾರೆ. ‌ಆದರೆ ನಿಜಕ್ಕೂ ಅಲ್ಲಿರುವುದು ಏನು ಸಮಸ್ಯೆ ಗೊತ್ತಾ. ಹಾಗಾದರೆ ಈ ಸ್ಟೋರಿ ನೀವು ಓದಲೇಬೇಕು....


COMMERCIAL BREAK
SCROLL TO CONTINUE READING

ಧಾರವಾಡ ಜಿಲ್ಲೆಯನ್ನ ವಿದ್ಯಾಕಾಶಿ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಆ ವಿದ್ಯಾಕಾಶಿ ಪಟ್ಟಕ್ಕೆ ಕಳಂಕ ಬರ್ತಾ ಇದೆಯೇ?  ಹೀಗೊಂದು ಅನುಮಾನ ಹುಟ್ಟಿಕೊಳ್ಳಲು ಜಿಲ್ಲೆಯಲ್ಲಿ ಸರಿಯಾದ ಶಾಲಾ ಕಾಲೇಜುಗಳ ನಿರ್ವಹಣೆ ಆಗದೇ ಇರುವುದೇ ಕಾರಣವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಇದೇ ನೋಡಿ. ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಸರ್ಕಾರಿ ಅನುದಾನಿತ ಪ್ರಾಥಮಿಕ ಪ್ರೌಢ  ಶಾಲೆ ಸೇರಿ ಒಟ್ಟು 129 ಶಾಲೆಗಳಿದ್ದು ಬಹುತೇಕ ಶಾಲೆ ಕೊಠಡಿಗಳು ಮೂರ್ನಾಲ್ಕು ವರ್ಷದ ಅತಿವೃಷ್ಟಿ ಹೊಡೆತಕ್ಕೆ ನಲುಗಿ ಹೋಗಿ ಪುನಃ ಭದ್ರವಾಗಿ ನಿರ್ಮಾಣ ಆಗಬೇಕಿದೆ.


ಇದನ್ನೂ ಓದಿ- Rain Alert: ರಾಜ್ಯದಲ್ಲಿ ಮುಂದಿನ 5 ದಿನ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ


ಪ್ರಮುಖವಾಗಿ 49 ನೆಲಸಮ ಆಗಬೇಕಾದ ಕೊಠಡಿಗಳಲ್ಲಿ 6 ಕೊಠಡಿ ನೆಲಸಮ ಆದ್ರೇ 43 ಬಾಕಿ ಇವೆ, ಶಿಥಿಲಾವಸ್ಥೆ ತಲುಪಿದ 111 ಕೊಠಡಿ ಪೈಕಿ 29 ಕೊಠಡಿ ಮಂಜೂರು ಆಗಿ ಸದ್ಯ 26 ಕೊಠಡಿ ನಿರ್ಮಾಣ ಆಗ್ತಾ ಇದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಇನ್ನೂ 125 ನೂತನ ಕೊಠಡಿ ಭಾಗ್ಯ ಒದಗಿ ಬರಬೇಕಿದೆ ಎನ್ನುತ್ತಾರೆ ಕುಂದಗೋಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ವಿದ್ಯಾ ಕುಂದರಗಿ. 


ಇದನ್ನೂ ಓದಿ- ವಿಜಯವಾಡ ರೈಲ್ವೇ ಕಾಮಗಾರಿ ಹಿನ್ನೆಲೆ - ಕೆಲ ರೈಲುಗಳ ಮಾರ್ಗ ಬದಲಾವಣೆ


ಒಟ್ಟಾರೆ ಈ ವರ್ಷ ಅನಾವೃಷ್ಟಿ ಉಂಟಾಗಿ ಮಳೆ ಕಡಿಮೆ ಇರುವ ಕಾರಣ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಂಚ ತೊಂದರೆ ಕಡಿಮೆ ಆಗಿದೆಯೇ ವಿನಃ ನಾಳೆ ರಭಸದ ಮಳೆ ಗಾಳಿ ಆತಂಕ ಎದುರಾದಲ್ಲಿ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಉಂಟಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.