ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ತಿದ್ದುಪಡಿಗೆ ಆದೇಶಿಸಿದ ಶಿಕ್ಷಣ ಇಲಾಖೆ
ಈ ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಈಗ ತಿದ್ದುಪಡಿಗೆ ಶಿಕ್ಷಣ ಇಲಾಖೆ ಆದೇಶಿಸಿದೆ.
ಬೆಂಗಳೂರು: ಈ ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಈಗ ತಿದ್ದುಪಡಿಗೆ ಶಿಕ್ಷಣ ಇಲಾಖೆ ಆದೇಶಿಸಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಕೂಡಲೇ ಈ ಹಿಂದೆ ಪರಿಷ್ಕರಣೆ ಮಾಡಿ ಜಾರಿಗೆ ತಂದಿದ್ದ ಪಠ್ಯಪುಸ್ತಕ ಬದಲಾವಣೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿತ್ತು,ಈ ವಿಚಾರವಾಗಿ ಅದು ಹಲವಾರು ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರ ಜೊತೆಗೆ ಮಾತುಕತೆ ನಡೆಸಿತ್ತು, ಈಗ ಕೊನೆಗೂ ತಿದ್ದುಪಡಿಗೆ ಅಸ್ತು ಎಂದಿರುವ ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಈಗ 2023-2024 ಸಾಲಿನ ಪಠ್ಯಪುಸ್ತಕದ ತಿದ್ದುಪಡಿಗೆ ಆದೇಶ ಹೊರಡಿಸಿದೆ.
ನೂತನವಾಗಿ ಸೇರಿಸಿರುವ ಪಠ್ಯಗಳು ಈ ಕೆಳಗಿನಂತಿವೆ:
ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ತಲಾ 9 ಪಾಠ ಸೇರ್ಪಡೆ,
ಸಮಾಜ ವಿಜ್ಞಾನ ಭಾಗ-೧ - 6 ನೇ ತರಗತಿ- ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ
ವೇದ ಕಾಲದ ಸಂಸ್ಕೃತಿ ಪಾಠ
ಹೊಸ ಧರ್ಮಗಳ ಉದಯ ಪಾಠ
ಸಮಾಜ ವಿಜ್ಞಾನ ಭಾಗ-2, 6 ನೇ ತರಗತಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು
ಸಮಾಜ ವಿಜ್ಞಾನ ಭಾಗ 01-7 ನೇ ತರಗತಿ ಜಗತ್ತಿನ ಪ್ರಮುಖ ಘಟನೆಗಳು
ಮೈಸೂರು ಮತ್ತು ಇತರ ಸಂಸ್ಥಾನಗಳು
ಸಮಾಜ ವಿಜ್ಞಾನ ಭಾಗ 2- ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು
ಸ್ವಾತಂತ್ರ್ಯ ಸಂಗ್ರಾಮ
ಸಮಾಜ ಭಾಗ 1 , 10 ನೇ ತರಗತಿಯ , ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು
ಕನ್ನಡ ಭಾಷೆಯಲ್ಲಿ ಹೊಸದಾಗಿ ಸೇರ್ಪಡೆ ಮಾಡಿರುವ ಪಠ್ಯ
ಕನ್ನಡ ಪ್ರಥಮ ಭಾಷೆ 6 ನೇತರಗತಿ- ನೀ ಹೋದ ಮರುದಿನ- ಕೃತಿಕಾರ- ಚೆನ್ನಣ್ಣ ವಾಲೀಕಾರ
7 ನೇ ತರಗತಿ- ಸಾವಿತ್ರಿಬಾಯಿ ಪುಲೆ- ಡಾ ಎಚ್.ಎಸ್ ಅನುಪಮ
8 ನೇ ತರಗತಿ- ಮಗಳಿಗೆ ಬರೆದ ಪತ್ರ- ಜವಾಹರಲಾಲ್ ನೆಹರು
10 ನೇ ತರಗತಿ- ಸುಕುಮಾರ ಸ್ವಾಮಿಯ ಕಥೆ- ಶಿವಕೋಟ್ಯಾಚಾರ್ಯ
10 ನೇ ತರಗತಿ- ಯುದ್ಧ- ಸಾ.ರಾ.ಅಬುಬಕ್ಕರ್
10 ನೇ ತರಗತಿ ತಾಯಿ ಭಾರತೀಯ ಅಮರಪುತ್ರರು- ಚಕ್ರವರ್ತಿ ಸೂಲಿಬೆಲೆ- ಪೂರ್ಣ ಪಾಠ ಕೈಬಿಡಲಾಗಿದೆ
ವೀರಲವ- ಲಕ್ಷ್ಮೀಶ
ಕನ್ನಡ ದ್ವಿತೀಯ ಭಾಷೆ - 8 ನೇ ತರಗತಿ ಬ್ಲಡ್ ಗ್ರೂಪ್- ಕೃತಿಕಾರರು- ವಿಜಯಮಾಲಾ
ಕನ್ನಡ ದ್ವಿತೀಯ ಭಾಷೆ 9 ನೇ ತರಗತಿ - ಉರುಸುಗಳಲ್ಲಿ ಭಾವೈಕತೆ- ದಸ್ತಗೀರ ಅಲ್ಲೀಭಾಯಿ ಪಾಠ ಸೇರ್ಪಡೆ
ಹೀಗೆ ಹೊಸದಾಗಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಶಿಕ್ಷಣ ಇಲಾಖೆ ಈಗ ಪಠ್ಯಪುಸ್ತಕವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.