ಬೆಂಗಳೂರು: ಜನತಾದರ್ಶನದಲ್ಲಿ ಮನೆ ಕಳೆದುಕೊಂಡು ದುಗುಡ ಹೊತ್ತು ತಂದಿದ್ದ ಗಿರಿನಗರದ ಕನ್ನಿಯಮ್ಮನ ಮೊಗದಲ್ಲಿಂದು ಮಂದಹಾಸ.

COMMERCIAL BREAK
SCROLL TO CONTINUE READING

ಪತಿ ಮಾಡಿದ ಕೈಸಾಲ ಪ್ರಾಮಾಣಿಕವಾಗಿ ತೀರಿಸುತ್ತಾ ಬಂದಿದ್ದರೂ ಊರಲ್ಲಿ ಇಲ್ಲದ ಸಂದರ್ಭದಲ್ಲಿ ಸಾಲ ಕೊಟ್ಟ ವ್ಯಕ್ತಿ ಆಕೆಯ ಮನೆಯ ಬೀಗ ಒಡೆದು ಮನೆಯನ್ನ ಸ್ವಾಧೀನ ಪಡಿಸಿಕೊಂಡು ಅಕ್ರಮವಾಗಿ ಮತ್ತೊಬ್ಬರಿಗೆ ಬಾಡಿಗೆ ಕೊಟ್ಟಿದ್ದರು. 


ಸೆಪ್ಟೆಂಬರ್1 ರಂದು ನಡೆದ ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳ ಬಳಿ ಮನೆ ವಾಪಸ್ ಕೊಡಿಸುವಂತೆ ಕನ್ನಿಯಮ್ಮ ಅಹವಾಲು ಸಲ್ಲಿಸಿದ್ದರು. ಕೂಡಲೇ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ಕರೆ ಮಾಡಿ ಮನೆ ಒತ್ತುವರಿ ತೆರವು ಗೊಳಿಸಿ ಮಹಿಳೆಗೆ ರಕ್ಷಣೆ ಒದಗಿಸುವಂತೆ ಸಿಎಂ ಸೂಚಿಸಿದ್ದರು. 


ಅದರಂತೆ ಪೊಲೀಸರು ಕ್ರಮ ವಹಿಸಿ ಕನ್ನಿಯಮ್ಮನಿಗೆ ನ್ಯಾಯ ಒದಗಿಸಿದರು. ಇದರಿಂದ ಸಂತಸಗೊಂಡ ಆಕೆ ಬುಧವಾರ ಕೃಷ್ಣಾದಲ್ಲಿ ಬಂದು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹಾಗೂ ಡಿಸಿಪಿ ಶರಣಪ್ಪ ಹಾಜರಿದ್ದರು.