ಇಡೀ ಸಂಪುಟವೇ ಭ್ರಷ್ಟಾಚಾರದಲ್ಲಿ ಮುಳುಗಿದೆ: ಬಸವರಾಜ ಬೊಮ್ಮಾಯಿ ಆರೋಪ
Basavaraja Bommai: ಗದಗನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ ಎಸ್ಟಿ ಉದ್ಧಾರ ಮಾಡುತ್ತೇವೆ ಅಂತಾ ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ವಾಲ್ಮೀಕಿ ನಿಗಮದಲ್ಲಿ ಕೊಟ್ಟ ಹಣ, ಎಸ್ಟಿ ಜನಾಂಗಕ್ಕೆ ಉಪಯೋಗವಾಗಬೇಕಿತ್ತು.
ಗದಗ: ಭ್ರಷ್ಟಾಚಾರ ಪ್ರೋತ್ಸಾಹಿಸುವ, ಭ್ರಷ್ಟಚಾರದಲ್ಲಿ ಮುಳುಗಿರುವ ಸರ್ಕಾರ ರಾಜ್ಯದಲ್ಲಿದೆ. ಇಡೀ ಕ್ಯಾಬಿನೆಟ್ ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ಸಚಿವರ ರಾಜೀನಾಮೆ ಕೇಳುವ ನೈತಿಕತೆಯನ್ನು ಸಿಎಂ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.
ಗದಗನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ ಎಸ್ಟಿ ಉದ್ಧಾರ ಮಾಡುತ್ತೇವೆ ಅಂತಾ ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ವಾಲ್ಮೀಕಿ ನಿಗಮದಲ್ಲಿ ಕೊಟ್ಟ ಹಣ, ಎಸ್ಟಿ ಜನಾಂಗಕ್ಕೆ ಉಪಯೋಗವಾಗಬೇಕಿತ್ತು. ಆ ಹಣವನ್ನ ಲೂಟಿ ಮಾಡಿದ್ದಾರೆ. ಅದು ಹೇಗೆ ಬೇನಾಮಿ ಅಕೌಂಟ್’ಗಳ ಮೂಲಕ ಹಣ ವರ್ಗಾವಣೆಯಾಗಿದೆ. 14 ಅಕೌಂಟ್’ಗಳ ಮೂಲಕ ಬೇರೆ ಬೇರೆ ಕಡೆ ಹಣ ಹೋಗಿದೆ. ಚುನಾವಣೆ ಸಂದರ್ಭದಲ್ಲಿ ತೆಲಂಗಾಣ ಸಹಕಾರಿ ಸಂಘಕ್ಕೆ ಹೋಗಿದೆ. ಸಚಿವರು ಮೌಖಿಕ ಆದೇಶ ಕೊಟ್ಟಿಲ್ಲ ಅಂತಾ ಹೇಳುತ್ತಾರೆ. ನನ್ನ ಸಹಿ ನಕಲು ಆಗಿದೆ ಅಂತ ಎಂಡಿ ಹೇಳುತ್ತಾರೆ. ಇದರಲ್ಲಿ ಮೇಲಿನವರ ಶಾಮಿಲಾಗದೇ ಹಗರಣ ನಡೆಯಲು ಸಾಧ್ಯವಿಲ್ಲ ಎಂದರು.
94 ಕೋಟಿ ರೂಪಾಯಿ ಮೇಲಿನ ಆಶೀರ್ವಾದ ಇಲ್ಲದೆ ದೋಚಲು ಸಾಧ್ಯವಿಲ್ಲ. ಈಗಾಗಲೇ ಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು. ಈಶ್ವರಪ್ಪ ಅವರ ವಿಷಯ ಬಂದಾಗ, ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಕೂಗಿದ್ದೇ ಕೂಗಿದ್ದು ಈಗ ನಿಮ್ಮ ನೈತಿಕಥೆ ಎಲ್ಲಿದೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಈ ಹಗರಣವನ್ನು ಸಿಐಡಿಗೆ ತನಿಖೆಗೆ ಕೊಟ್ಟಿದ್ದಾರೆ. ಯಾವ ಹಾಲಿ ಸಚಿವರ ವಿರುದ್ಧ ಸಿಐಡಿ ತನಿಖೆ ಮಾಡಲು ಸಾಧ್ಯ. ಇದರಿಂದ ಮುಕ್ತ ತನಿಖೆ ನಡೆಯಲ್ಲ. ಹಣ ವಾಪಾಸ್ ಬರುವುದಿಲ್ಲ. ಪ್ರಕರಣದ ತನಿಖೆಯನ್ನ ಸಿಬಿಐಗೆ ಕೊಡಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ 10 ಕೋಟಿ ಗಿಂತ ಹೆಚ್ಚು ಹಣ ಅವ್ಯವಹಾರವಾಗಿದ್ದರೆ ಸಿಬಿಐಗೆ ಕೊಡಬೇಕೆಂದಿದೆ. ರಾಜ್ಯ ಅಷ್ಟೆ ಅಲ್ಲ.. ಬ್ಯಾಂಕ್ ಭಾಗಿಯಾಗಿರುವುದರಿಂದ ಸಿಬಿಐಗೆ ಕೊಡಬೇಕು ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಈ ಪ್ರಕರಣದಲ್ಲಿ ಬೇರೆ ಬೇರೆ ರಾಜ್ಯದ ಪಾತ್ರ ಇದೆ. 14 ಅಕೌಂಟ್ ಹಿಡಿದು ವಿಚಾರಿಸಿದರೆ ಎಲ್ಲ ಗೊತ್ತಾಗುತ್ತದೆ. ನೇರವಾಗಿ ಈ ಹಣ ಲೋಕಸಭಾ ಚುನಾವಣೆ ಫಂಡಿಂಗಾಗಿ ಹೋಗಿದೆ. ಮುಕ್ತವಾದ ತನಿಖೆಯಾಗಬೇಕಾದಲ್ಲಿ ಸಿಬಿಐಗೆ ಕೊಡಿ, ಮಂತ್ರಿಗಳು ರಾಜೀನಾಮೆ ಕೊಡಲಿ. ಈಶ್ವರಪ್ಪ ಕೇಸ್ ಬೇರೆ ಈ ಕೇಸ್ ಬೇರೆ ಅಂತ ಗೃಹ ಸಚಿವರು ಹೇಳುತ್ತಾರೆ. ಈಶ್ವರಪ್ಪ ಅವರ ಕೇಸ್ ಗಿಂತನೂ ಗಂಭೀರವಾದ ಕೇಸ್ ಇದು. ಯಾವ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆಗಿದೆ ಆ ಅಕೌಂಟೆಂಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಘಟನೆ ನಡೆದಿಲ್ಲವಾಗಿದ್ದರೆ ಕೇಸ್ ಹೊರಗಡೆ ಬರುತ್ತಿರಲಿಲ್ಲ. ಯಾವ ದುಡ್ಡು ಎಲ್ಲಿ ಹೋಗಿದೆ ಅಂತಾ ಕ್ಲೀಯರ್ ಆಗಿ ಬರೆದಿದ್ದಾರೆ. ಡೆತ್ ನೋಟ್ ಬಹಳ ಗಂಭೀರ ವಿಚಾರ. ಈಶ್ವರಪ್ಪ ವಿಚಾರದಲ್ಲಿ ಡೆತ್ ನೋಟ್ ಇರಲಿಲ್ಲ. ಆದರೂ, ನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದರು ಎಂದು ಹೇಳಿದರು.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದಲ್ಲೂ ಕಾಂಗ್ರೆಸ್ ಯಾವುದೇ ದಿಟ್ಟ ಕ್ರಮ ತೆಗೆದುಕೊಂಡಿಲ್ಲ. ನಾನು ಮುಖ್ಯಮಂತ್ರಿ ಇದ್ದಾಗ ಆ ಕ್ರಮ ತೆಗೆದುಕೊಂಡಿದ್ದೆ. ಎಸ್ಟಿಪಿ, ಟಿಎಸ್ಪಿ ಅಡಿ ಪರಿಶಿಷ್ಟರಿಗೆ ಇಟ್ಟ ಹಣವನ್ನ ಗ್ಯಾರಂಟಿಗೆ ಡೈವರ್ಟ್ ಮಾಡಲಾಗಿದೆ. ಕಳೆದ ವರ್ಷ 11 ಸಾವಿರ ಕೋಟಿ, ಈ ವರ್ಷ 13 ಸಾವಿರ ಕೋಟಿ ಡೈವರ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಟಿ20 ವಿಶ್ವಕಪ್’ಗೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್: ICC Rankingನಲ್ಲಿ ಭಾರತ ಅಗ್ರ
ಮೋದಿಯವರ ದೃಷ್ಟಿಕೋನ ಅರ್ಥಮಾಡಿಕೊಳ್ಳಬೇಕು:
ಇದೇ ವೇಳೆ, ಮಹಾತ್ಮಾ ಗಾಂಧಿ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಅವರು ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಅರ್ಥ ಮಾಡಿಕೊಳ್ಳಬೇಕು. ಮೋದಿ ಅವರು ಗುಜರಾತ್’ನವರು. ಅವರಿಗೆ ಗಾಂಧೀಜಿ ಬಗ್ಗೆ ಗೊತ್ತಿಲ್ಲ ಅಂತಲ್ಲ. ಅವರು ಹೇಳುವ ತಾತ್ಪರ್ಯ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಗಾಂಧಿ ಅವರನ್ನು ಪರದೆ ಹಿಂದೆ ಇಟ್ಟಿದ್ದರು. ಈ ಗಾಂಧಿ ಕುಟುಂಬ ಮುಂದೆ ಬಂದಿದೆ. ಸ್ವಾತಂತ್ರ್ಯ ನಂತರ ಎಲ್ಲಿಯೇ ಹೋದರೂ ನೆಹರು ಹೆಸರು ಬರುತ್ತಿತ್ತು. ಮಹಾತ್ಮಾ ಗಾಂಧಿ ಹಿಂದೆ ಸರೆದರು ಅನ್ನುವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ