ಬಸ್ ನಲ್ಲಿ ಸಿಕ್ಕ ಬಂಗಾರವನ್ನು ಠಾಣೆಗೆ ಒಪ್ಪಿಸಿದ ಬಂಗಾರದ ಮನುಷ್ಯ
ಬಸ್ ನಲ್ಲಿ ಸಿಕ್ಕಿದ ಚಿನ್ನದ ಸರವನ್ನು ಕಂಡಕ್ಟರ್ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಚಾಮರಾಜನಗರ: ಬಸ್ ನಲ್ಲಿ ಸಿಕ್ಕಿದ ಚಿನ್ನದ ಸರವನ್ನು ಕಂಡಕ್ಟರ್ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್: ಹುಬ್ಬಳ್ಳಿಯಲ್ಲಿ 44 ಮಂದಿಯ ಬಂಧನ!
ಕಂಡಕ್ಟರ್ ದೇವರಾಜು.ಎನ್ ನಿಷ್ಠೆ ಮೆರೆದ ಕಂಡಕ್ಟರ್. ಕಳೆದ ನ.5 ರಂದು ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುವಾಗ ಬಸ್ಸಿನಲ್ಲಿ ಕಂಡಕ್ಟರ್ ಗೆ 23 ಗ್ರಾಂ ನ ಚಿನ್ನದ ಸರ ಸಿಕ್ಕಿದೆ. ಅದನ್ನು ಡಿಪೋ ವಶಕ್ಕೆ ನೀಡಿದ್ದರು. ಆದರೆ, ವಾರಸುದಾರರು ಯಾರು ಬಾರದ ಕಾರಣ ಇಂದು ಸಾರಿಗೆ ಬಸ್ ಸಿಬ್ಬಂದಿ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರಿಗೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮತ್ತು ಯತೀಂದ್ರ ಕಾಸಿಗಾಗಿ ಹುದ್ದೆ ವಿಡಿಯೋ ಲೀಕ್!
ಬಸ್ಸಿನಲ್ಲಿ ಸಿಕ್ಕಿರುವ 23 ಗ್ರಾಂ ಚಿನ್ನದ ಸರವು ಅಂದಾಜು 1 ಲಕ್ಷ ಮೌಲ್ಯದ್ದಾಗಿದೆ. ಶಕ್ತಿ ಯೋಜನೆ ಪರಿಣಾಮ ಮಹಿಳೆಯರು ಬಸ್ ನಲ್ಲಿ ಕಿಕ್ಕಿರಿದಿರುವುದರಿಂದ ಯಾರೋ ಮಹಿಳೆ ಬೀಳಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.