ಚುನಾವಣಾ ಹೊಸ್ತಿಲಿನಲ್ಲಿ ಜಾಗೃತವಾಗುತ್ತಿರುವ ಸರ್ಕಾರ ಸಚಿವರು, ಶಾಸಕರಿಗೆ ಮಾತ್ರವಲ್ಲ ಅಧಿಕಾರಿಗಳಿಗೂ ಕೆಲಸ ನೀಡಲು ಮುಂದಾಗಿದೆ. ಹೌದು ರಾಜ್ಯಾದ್ಯಂತ ಎಲ್ಲಾ ಅಧಿಕಾರಿಗಳಿಗೂ ಮಹತ್ತರ ಜವಾಬ್ದಾರಿಯೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಅದೇನೆಂದರೆ 'ಜನತಾ ದರ್ಶನ' ರೀತಿಯಲ್ಲೇ 'ಜನಸ್ಪಂದನ' ಕಾರ್ಯಕ್ರಮ ಮುಂದಿನ ಮಂಗಳವಾರದಿಂದ ಆರಂಭವಾಗಲಿದೆ.


COMMERCIAL BREAK
SCROLL TO CONTINUE READING

ನೂತನ ಮುಖ್ಯಕಾರ್ಯದರ್ಶಿಯಾಗಿರುವ ಕೆ. ರತ್ನಪ್ರಭಾ ಅವರಿಗೆ ಸಿಎಂ ಈ ಬಗ್ಗೆ ಸೂಚನೆ ನೀಡಿದ್ದಾರೆ. ಇದುವರೆಗೂ ಸಿಎಂ ನಡೆಸುತ್ತಿದ್ದ ಜನತಾದರ್ಶನ ಮಾದರಿಯಲ್ಲಿ ರಾಜ್ಯಾದ್ಯಂತ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಗ್ರಾಮ ಲೆಕ್ಕಿಗರಿಂದ ಹಿಡಿದು ಜಿಲ್ಲಾಧಿಕಾರಿಗಳವರೆಗೆ ಎಲ್ಲರಿಗೂ ಈ ಜವಾಬ್ದಾರಿ ಹೊರಿಸಲಾಗಿದೆ. ಪ್ರತಿ ಮಂಗಳವಾರ ಗ್ರಾಮ ಪಂಚಾಯತಿ, ತಾಲ್ಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ.


ಜನರ ಅಹವಾಲುಗಳನ್ನು ಅಧಿಕಾರಿಗಳು ಸ್ವೀಕರಿಸಬೇಕು. ಜೊತೆಗೆ ಸ್ಥಳದಲ್ಲೇ ಸಮಸ್ಯೆ ಪರಿಹರಿಸಬೇಕು. ಕಠಿಣ ಸಮಸ್ಯೆ ಇದ್ದಲ್ಲಿ ಅಂತಹ ಸಮಸ್ಯೆಗಳನ್ನು ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತರಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳ ಜೊತೆ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭ ಸಮಾಲೋಚನೆ ನಡೆಸಿದ್ದಾರೆ.