ಚಿಕ್ಕಬಳ್ಳಾಪುರ: ನ್ಯಾಯಾಲಯ ಅಂದರೆ ವರ್ಷಾನು ಗಟ್ಟಲೆ, ಕೇಸ್ ನಡೆಯುತ್ತೆ ನ್ಯಾಯ ಸಿಗುತ್ತೊ ಇಲ್ವೊ ಅನ್ನೊ ಆತಂಕದಲ್ಲೆ ನ್ಯಾಯಾಲಯಗಳಿಗೆ ಹೊಗೊದು ಸಾಮಾನ್ಯ..ಆದರೆ ಇಲ್ಲೊಂದು ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆಂದು ಕೊರ್ಟಿಗೆ ಬಂದಿದ್ದ ದಂಪತಿಗಳನ್ನ ಒಂದು ಗೂಡಿಸುವ ಮೂಲಕ ಮಾದರಿಯಾಗಿದೆ. ಅದೆಲ್ಲಿ ಅದು ಯಾವ ಪ್ರಕರಣ ಅಂತೀರಾ ಹಾಗಾದರೆ ಈ ಸ್ಟೊರಿ ನೋಡಿ..


COMMERCIAL BREAK
SCROLL TO CONTINUE READING

ಹೀಗೆ ಪರಸ್ಪರ ಕಿತ್ತಡಿಕೊಂಡು ದೂರವಾಗಿ, ವಿಚ್ಚೆದನ ಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪಂತಿಗಳು ಪರಸ್ಪರ ಹೂವಿನಹಾರ ಬದಲಾಹಿಸಿಕೊಂಡು ಸಿಹಿ ತಿನ್ನಿಸಿ ಒಂದಾಗುವುದರ ಮೂಲಕ ಅಚ್ಚರಿ ಬೆಳವಣಿಗೆ ನಡೆದಿರೋದು ಚಿಕ್ಕಬಳ್ಳಾಪುರ ನಗರದ ನ್ಯಾಯಾಲಯದಲ್ಲಿ, ಹೌದು ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ವಿಚ್ಚೇದನವಾಗಬೇಕಿದ್ದ ಗಂಡ ಹೆಂಡತಿಯರನ್ನ ಮನವೊಲಿಸಿ ಮತ್ತೆ ಒಂದು ಮಾಡುವಲ್ಲಿ ನ್ಯಾಯಮೂರ್ತಿಗಳು ಯಶಸ್ವಿಯಾಗಿದ್ದಾರೆ..ಇದರಿಂದ ಮನಸ್ಸು ಬದಲಾಯಿಸಿಕೊಂಡ ದಂಪತಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಸಂತಸ ವ್ಯಕ್ತಪಡಿಸಿದರು.


ಇದನ್ನೂ ಓದಿ : ಜಿಯೋ 5G ಫೋನ್ ಬಿಡುಗಡೆಗೆ ಸಿದ್ಧ: ಇದರ ಬೆಲೆ ಇಷ್ಟೊಂದು ಕಡಿಮೆನಾ?


ನ್ಯಾಯಾಲಯ ಎಂದರೆ ನಿಧಾನ ತೀರ್ಪು, ನ್ಯಾಯಸಿಗುತ್ತೊ ಇಲ್ಲವೊ ಎನ್ನುವ ಆತಂಕ ಹೀಗೆ ನಾನಾ ರೀತಿಯಲ್ಲಿ ಅನುಮಾನದಿಂದಲೆ ಕೊರ್ಟ್ ಮೆಟ್ಟಿಲೇರುವ ದಂಪತಿಗಳಿಗೆ ಇಂದು ಅಚ್ಚರಿ ಕಾದಿತ್ತು. ಇನ್ನು  ಚಿಕ್ಕಬಳ್ಳಾಪುರ ಜಿಲ್ಲಾ ಕೊರ್ಟ್ ನಲ್ಲಿ ಲೋಕ ಅದಾಲತ್ ನಲ್ಲಿ ಮನಸ್ಸು ಮುರಿದುಕೊಂಡು ವಿಚ್ಚೆದನಕ್ಕೆಂದು ಬಂದಿದ್ದ ಮೂರು ಜೋಡಿಗಳನ್ನ ನ್ಯಾಯಾಧೀಶರಾದ ಲಕ್ಷ್ಮಿಕಾಂತ್ .ಜೆ.ಮಿಸ್ಕಿನ್ ಹಾಗು ವಿವೇಕಾನಂದ ಪಂಡಿತ್ ರವರು ಮೂರು ಜೋಡಿಗಳ ಪತಿ ಪತ್ನಿಯರನ್ನ ಮನಹೊಲಿಸಿ ಜೋಡಿಗಳನ್ನ ಒಂದಾಗುವಂತೆ ಮಾಡಿದ್ದಾರೆ. ಇತ್ತ ನ್ಯಾಯಾಧೀಶರ ಮನಹೊಲಿಕೆಗೆ ತಲೆದೂಗಿದ ಉಷ ಹಾಗು ಮುನಿರಾಜು ಜೋಡಿ, ದೀಪ ಹಾಗು ರಮೇಶ, ಆಶ ಹಾಗು ವಿನೋದ್ ಜೋಡಿ ಮತ್ತೆ ಒಂದಾಗಿ ಮಂದಹಾಸ ಬೀರಿದ್ದಾರೆ. ಈ ಬಗ್ಗೆ ಸ್ವತಃ ನ್ಯಾಯಮೂರ್ತಿ ಲಕ್ಷ್ಮಿಕಾಂತ್ ಜೆ ಮಿಸ್ಕಿನ್ ಪ್ರತಿಕ್ರಿಯೆ ನಿಡಿದ್ದು ಹೀಗೆ...


ಇದನ್ನೂ ಓದಿ : ಕೆನಡಾ ಪ್ರಜೆಯಾಗಿದ್ರೂ ಭಾರತದಲ್ಲಿ ತೆರಿಗೆ ಕಟ್ಟುತ್ತಾರೆ ಈ ಬಾಲಿವುಡ್ ಸ್ಟಾರ್!


ವಿಚ್ಚೆದನಕ್ಕೆಂದು ಕೊರ್ಟ್ ಮೆಟ್ಟಿಲೇರುವ ಬಹುತೇಕ ಪ್ರಕರಣ ಗಳಲ್ಲಿ ಸರಿಯಾದ ಮಧ್ಯಸ್ತಿಕೆಯ ವೈಪಲ್ಯದಿಂದ ವಿಚ್ಚೇದನ ಗಳ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ನ್ಯಾಯಾಲಯದಲ್ಲಿ ವಿಚ್ಚೇದನ ಕ್ಕೆ ಬಂದಿದ್ದ ಜೋಡಿಗಳನ್ನ ಮತ್ತೆ ಒಂದು ಮಾಡುವುದರ ಮೂಲಕ ಇಲ್ಲಿನ ನ್ಯಾಯಾಧೀಶರು ಮಾದರಿಯಾಗಿ ನಿಂತಿದ್ದಾರೆ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.