ಬೆಂಗಳೂರು : ರಾಜ್ಯ ಸರ್ಕಾರ ಜಾರಿ ಮಾಡಿದ್ದ ವೀಕೆಂಡ್ ಕರ್ಫ್ಯೂ ನಾಳೆ ಇರುವುದಿಲ್ಲ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಕೋವಿಡ್-19 ಸಭೆ ಮುಕ್ತಾಯದ ನಂತರ  ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್ ಅಶೋಕ್, ಆಸ್ಪತ್ರೆ ಸೇರುವ ಪ್ರಮಾಣ ಶೇ.5 ರಷ್ಟಿದೆ. ಜನರು ಮಾಸ್ಕ್ ಹಾಕಿಕೊಳ್ಳಬೇಕು ಎಂದು ಜನರಲ್ಲಿ ವಿನಂತಿಕೊಂಡರು.


ಇದನ್ನೂ ಓದಿ : Fire In BMTC Bus: ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬಿಎಂಟಿಸಿ ಬಸ್


ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸುಧಿರ್ಘವಾಗಿ ಸಭೆ ನಡೆಯಿತು. ಎಲ್ಲ ತಜ್ಞರು ಅಭಿಪ್ರಾಯ ಪಡೆದಿದ್ದೇವೆ. ಹನ್ನೆರಡು ಜನ ತಜ್ಞರು ಭಾಗವಹಿಸಿದ್ರು. ಗೃಹ ಇಲಾಖೆ,ಆರೋಗ್ಯ ಇಲಾಖೆ,ಜಲಸಂಪನ್ಮೂಲ ಇಲಾಖೆಯಸಚಿವರು ಭಾಗವಹಿಸಿದ್ರು. ಸಭೆಯಲ್ಲಿ ಸರ್ಕಾರ ಜಾರಿ ಮಾಡಿದ್ದ ವೀಕೆಂಡ್ ಕರ್ಪ್ಯೂ ವಾಪಸ್ಸು ಪಡೆದಿದೆ ಎಂದು ಹೇಳಿದರು.


ಮತ್ತೆ ಸೋಂಕು ಉಲ್ಬಣವಾದ್ರೆ ಮತ್ತೆ ಕರ್ಪ್ಯೂ ಜಾರಿ ಮಾಡುತ್ತವೆ. ಆದ್ರೆ ಅದಕ್ಕೆ ಅವಕಾಶ ನೀಡಬೇಡಿ. ಕೊರೋನಾ ಮಾರ್ಗಸೂಚಿ ಪಾಲೋ ಮಾಡಿ. ರಾತ್ರಿ 10 ರಿಂದ 5ರವರೆಗೆ ಇರುವ ನೈಟ್ ಕರ್ಪ್ಯೂ ಮುಂದುವರೆಯುತ್ತೆ. ನಾಳೆಯಿಂದ ವೀಕೆಂಡ್ ಕರ್ಪ್ಯೂ ತೆರವು ಮಾಡಲಾಗುತ್ತದೆ ಎಂದು ತಿಳಿಸಿದರು. 


ಉಳಿದ ಮಾರ್ಗಸೂಚಿ ಯಥಾಸ್ಥಿತಿ ಮುಂದುವರೆಯುತ್ತೆ. ತಜ್ಞರು ವರದಿ ಮೇಲೆ ಈ ಕ್ರಮ ತೆಗೆದುಕೊಂಡಿದ್ದೇವೆ. ಈಡಿ ರಾಜ್ಯಕೆ ಒಂದೇ ಮಾರ್ಗಸೂಚಿ ತರುತ್ತುದ್ದೇವೆ. ಬೆಂಗಳೂರು ಮತ್ತು ರಾಜ್ಯಕ್ಕೆ ಬೇರೆ ಬೇರೆ ಮಾರ್ಗಸೂಚಿ ಇರಲ್ಲ. ವೈಜ್ಞಾನಿಕ ಆಧಾರದ ಮೇಲೆ ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. 


ಶಾಲೆ ಆರಂಭದ ವಿಚಾರವಾಗಿ ಮಾತನಾಡಿದ ಸಚಿವ ಆರ್ ಅಶೋಕ್, ಬೆಂಗಳೂರು ಬಿಟ್ಟು, ಬೇರೆ ಎಲ್ಲ ಕಡೆ ಅಧಿಕಾರಿಗಳ ಅಭಿಪ್ರಾಯ ಪಡೆದರು. ಪಾಸಿಟಿವ್ ರೇಟ್ ನೋಡಿಕೊಂಡು ಆರಂಭ ಅಗುತ್ತವೆ. ಬೆಂಗಳೂರಿನಲ್ಲಿ ಪಾಸಿಟಿವ್ ಜಾಸ್ತಿ ಇದೆ. ಮುಂದಿನ ಶುಕ್ರವಾರ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.


ಇದನ್ನೂ ಓದಿ : Covid-19 Case : ಕೊರೋನಾ ಮಹಾ ಸ್ಪೋಟ : ಸೆಲ್ ಫ್ಯಾಕ್ಟರಿಯಲ್ಲಿ 40 ಜನಕ್ಕೆ ಪಾಸಿಟಿವ್


ಬೆಂಗಳೂರಿನಲ್ಲಿ 5340 ಆಸ್ಪತ್ರೆ ದಾಖಲಾತಿ ಇದೆ. ಅಲ್ಲದೆ, ಐಸಿಯು ದಾಖಲಾತಿ ಸಂಖ್ಯೆ 340 ರಷ್ಟಿದೆ. ವೆಂಟಿಲೇಟರ್ ದಾಖಲಾತಿ ಸಂಖ್ಯೆ 127 ರಷ್ಟಿದೆ. ಹೀಗಾಗಿ ಒಟ್ಟು ಪಾಸಿಟಿವಿಟಿ ದರ ಶೇ.19.94 ರಷ್ಟಿದೆ. ಮಕ್ಕಳ ಪಾಸಿಟಿವಿಟಿ ದರ ಶೇ.8 ರಷ್ಟಿದೆ.


ರಾಜ್ಯದಲ್ಲಿ ರೂಲ್ಸ್ ಯಥಾವತ್ತಾಗಿ ಇರುತ್ತೆ. ವೀಕೆಂಡ್ ಕರ್ಫ್ಯು ಕ್ಯಾನ್ಸಲ್ ಆಗುತ್ತೆ ಅಷ್ಟೇ. ಜನರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಬಡವರಿಗೆ ಸಹಾಯ ಆಗಿಲ್ಲ ಎಂದು ವೀಕೆಂಡ್ ಕರ್ಫ್ಯು ತೆಗೆದುಹಾಕಿದ್ದೇವೆ. ಜನ ಹೆಚ್ಚೆತ್ತುಕೊಳ್ಳದಿದ್ರೆ ಇದಕ್ಕಿಂತ ಹೆಚ್ಚು ರೂಲ್ಸ್ ಮಾಡುತ್ತೇವೆ ಎಂದು ಹೇಳಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.