ಬೆಂಗಳೂರು: ದೇಶದಲ್ಲಿ ಶಿಕ್ಷಣ, ಧರ್ಮ ಹಾಗೂ ಸಂಸ್ಕೃತಿಯ ಉಳಿಸಲು ಆಶ್ರಮಗಳು , ಮಠಗಳು  ಅಪಾರವಾಗಿ ಶ್ರಮಿಸಿವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ(Govind M Karajola) ತಿಳಿಸಿದರು.


COMMERCIAL BREAK
SCROLL TO CONTINUE READING

ನಿನ್ನೆ ಬೆಂಗಳೂರಿನಲ್ಲಿ ಪೂರ್ಣ ಪ್ರಜ್ಞ ವಿದ್ಯಾಪೀಠ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಪೀಠವು ಆಯೋಜಿಸಿದ್ದ ವಾರ್ಷಿಕೋತ್ಸವ  ಸಮಾರಂಭದಲ್ಲಿ ಸಂಸ್ಕೃತ ಭಾಷೆಯ ವಿವಿಧ ರಾಷ್ಟ್ರ ಮಟ್ಟದ  ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಹಿಂದೆ ಆಶ್ರಮಗಳಿದ್ದವು ಅವು ಬ್ರಹ್ಮ ಜ್ಞಾನ ನೀಡುವ ಉದ್ದೇಶ ಹೊಂದಿದ್ದವು. ನಂತರ ದಿನಗಳಲ್ಲಿ ಮಾನವನ ಕಲ್ಯಾಣಕ್ಕಾಗಿ, ಏಳಿಗೆಗಾಗಿ ಆಶ್ರಮಗಳು ಮಠಗಳಾದವು.


ಮಠಗಳ ಸಮಾಜ ಕಲ್ಯಾಣಕ್ಕಾಗಿ ಮಾಡುತ್ತಿರುವ ಸೇವೆ ಅಪಾರವಾಗಿದೆ‌.  ಅದರಲ್ಲೂ ಪೇಜಾವರ ಮಠವು ಸಮಾಜದ ಒಳಿತಿಗಾಗಿ, ಶಿಕ್ಷಣಕ್ಕಾಗಿ ಅಪಾರಮಿತವಾಗಿ ಶ್ರಮಿಸುತ್ತಿವೆ. 1994-95 ರಲ್ಲಿ ಭೀಮಾ ನದಿ ತೀರದ ಒಂದು ಗ್ರಾಮ ಸಂಪೂರ್ಣವಾಗಿ ಮುಳುಗಿ ಸಾರ್ವಜನಿಕರು ಸಂತ್ರಸ್ತರಾಗಿದ್ದ ಸಂದರ್ಭದಲ್ಲಿ ಶ್ರೀಗಳು ಈ ಗ್ರಾಮವನ್ನು ದತ್ತು ಪಡೆದು ಶಾಲೆ, ಅಂಗನವಾಡಿ, ದೇವಸ್ಥಾನದೊಂದಿಗೆ ಎಲ್ಲಾ ಮೂಲಭೂತ ಸೌಕರ್ಯಗಳ ನ್ನು ಒದಗಿಸಿ, ಆ ಗ್ರಾಮಕ್ಕೆ ಗೋವಿಂದ ಪುರ ಎಂದು ನಾಮಕರಣ ಮಾಡಿದರು.


ಅಂದು ಆ ಕಾರ್ಯಕ್ರಮಕ್ಕೆ ತಾವು ಸಾಕ್ಷಿಯಾಗಿದ್ದಿದ್ದಾಗಿ ತಿಳಿಸಿದ ಅವರು,  ಪೇಜಾವರ ಶ್ರೀಗಳು  ತಮಗೆ ಆರ್ಶಿರ್ವದಿಸಿದ್ದಾರೆ. ಪ್ರೀತಿಯಿಂದ ಕಂಡಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಅವರ ಆರ್ಶಿರ್ವಾದ, ಮಾರ್ಗದರ್ಶನ ಮಹತ್ತರ ಪಾತ್ರವಾಗಿದೆ. ತಾವು ಹಾಗೂ ತಮ್ಮ ಕುಟುಂಬವು ಪೇಜಾವರ ಶ್ರೀಗಳನ್ನು ಸದಾ ಸ್ಮರಿಸುತ್ತಿರುವುದಾಗಿ ತಿಳಿಸಿದರು.


ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು ಹಾಗೂ ಪೇಜಾವರ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥರು ಸಾನಿಧ್ಯವಹಿಸಿ, ಆಶೀರ್ವಚನ ನೀಡಿದರು.