ಮಾರುಕಟ್ಟೆಯಲ್ಲಿ ಜೋಳದ ಬೆಲೆ ಧಿಡೀರ್ ಕುಸಿತ
Price : ಈ ಬಾರಿ ಜೋಳ ಬೆಳೆ ಕಡಿಮೆಯಾದಾಗ ಪ್ರತಿ ಕ್ವಿಂಟಲ್ ಗೆ ಜೋಳದ ಬೆಲೆ ಸುಮರು 8000ವೆರೆಗೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೂ ಕಡಿಮೆ ಬೆಲೆ ನಿಗದಿಯಾಗಿದ್ದು, ರೈತರಲ್ಲಿ ನಿರಾಸೆ ಮೂಡಿಸಿದೆ.
Market has fallen : ಮಾರುಕಟ್ಟೆಯಲ್ಲಿ ಬಿಳಿ ಜೋಳದ ದರ ದಿಢೀರ್ ಇಳಿಕೆಯಾಗಿದ್ದು, ಇದರಿಂದ ಲಾಭದ ಆಶಯದಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಹಿಂಗಾರು ಹಂಗಾಮಿನ ಆರಂಭದಲ್ಲಿ ಬಿಳಿ ಜೋಳ ಕ್ವಿಂಟಾಲ್ 8000 ರೂಪಾಯಿ ಇತ್ತು. ಇದೀಗ ಅದರ ಬೆಲೆ 3,500 ರೂಪಾಯಿಗೆ ಏಕಾಎಕಿ ಕುಸಿತಗೊಂಡಿದೆ
ಕೈಕೊಟ್ಟ ಹಿಂಗಾರು: ಇಳುವರಿ ಕುಂಠಿತ ಮುಂಗಾರು ಮಳೆ ಈ ಬಾರಿ ನಿರೀಕ್ಷೆಯಷ್ಟು ಬರಲಿಲ್ಲ. ಆದರೆ ಹಿಂಗಾರು ಮಳೆ ಆಧರಿಸಿ, ಅಲ್ಲಿ ಇಲ್ಲಿ ನೀರು ಬಳಸಿ ದಾವಣಗೆರೆಯ ಹೊನ್ನಾಳಿ, ನ್ಯಾಮತಿ ರೈತರು ಜೋಳ ಬೆಳೆದಿದ್ದರು. ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಹಿಂಗಾರು ಮಳೆ ನಿರೀಕ್ಷೆಯಷ್ಟು ಬರಲಿಲ್ಲ.
ಇದನ್ನು ಓದಿ :ಮೇ 8ರಂದು ಪಿಎಸ್ಐ ಲಿಖಿತ ಪರೀಕ್ಷೆ : 402 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿ
ಜೋಳದ ಮಾರುಕಟ್ಟೆ ದರ ವಿವರ ದಿಢೀರ್ ಕುಸಿತಗೊಂಡಿರುವ ಬಿಳಿ ಜೋಳದ (ಬಳ್ಳಾರಿ-5 ತಳಿ) ಇಂದಿನ ಮಾರುಕಟ್ಟೆ ದರ ಪ್ರತಿ ಕ್ವಿಂಟಾಲ್‌ಗೆ 2,200 ರೂಪಾಯಿಯಷ್ಟಿದೆ. ಇದರಲ್ಲಿ ತುಸು ಉತ್ತಮ ಗುಣಮಟ್ಟದ ಬಿಳಿ ಜೋಳದ ಬೆಲೆ 4,000 ರೂಪಾಯಿ ಇದೆ. ಆದರೆ ರೈತರಿಂದ ಖರೀದಿಯೆ ಆಗುತ್ತಿಲ್ಲ. ಜೋಳ ಖರೀದಿಸುವವರೂ ಇಲ್ಲದಾಗಿದೆ ಎಂದು ಜಿಲ್ಲೆಯ ವ್ಯಾಪ್ತಿಯ ರೈತರೊಬ್ಬರು ಅಳಲು ತೊಂಡಿಕೊಂಡಿದ್ದಾರೆ. ಬಿತ್ತನೆ ವೇಳೆ ನೆಲ ಹಸಿ ಇದ್ದರೆ ಸಾಕು ನಂತರ ತೇವ-ತಂಪು ವಾತಾವರಣಕ್ಕೆ ಜೋಳ ಬೆಳೆಯುತ್ತದೆ. ಆದರೆ ಈ ಬಾರಿ ಬೆಳಗ್ಗೆ ಇಬ್ಬನಿ ಸಹ ಸರಿಯಾಗಿ ಬೀಳದ ಕಾರಣ ಜೋಳದ ಇಳವರಿ ಸಮರ್ಪಕವಾಗಿ ಬಂದಿಲ್ಲ. ಈ ಎಲ್ಲ ಕಾರಣಗಳು ರೈತರಿಗೆ ಹೆಚ್ಚು ಲಾಭ ಕನಸನ್ನು ನುಚ್ಚು ನೂರು ಮಾಡಿವೆ
ಈ ಬಾರಿ ಜಿಲ್ಲೆಯಲ್ಲಿ ಬಿತ್ತನೆ ಆಗಿದ್ದೆಷ್ಟು? ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ಒಟ್ಟು 6,123 ಹೆಕ್ಟೇರ್‌ನಲ್ಲಿ ಬಿಳಿ ಜೋಳ ಬಿತ್ತನೆ ಮಾಡುವ ಗುರಿ ಇತ್ತು. ಆದರೆ ಹಿಂಗಾರು ಮಳೆ ಕೊರತೆಯಿಂದ ಕೇವಲ 3,855 ಹೆಕ್ಟೇರ್ ನಲ್ಲಿ ಜೋಳ ಬೆಳೆಯಲಾಯಿತು. ಆದರೆ ಇದು ಸಹ ಉತ್ತಮವಾಗಿ ಬೆಳೆಯಲು ಬೇಕಾದ ವಾತಾವರಣ ನಿರ್ಮಾಣವಾಗಲಿಲ್ಲ.
ನ್ಯಾಮತಿ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು (2,200) ಜೋಳ ಬಿತ್ತನೆ ಆಗಿದೆ. ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ಕಡಿಮೆ (1,475) ಜೋಳ ಬಿತ್ತಲಾಗಿದೆ. ಇನ್ನೂ ಹರಿಹರ 100, ಚನ್ನಗಿರಿ ತಾಲೂಕಿನಲ್ಲಿ ಕೇವಲ 80 ಹೆಕ್ಟೇರ್ ಬಿತ್ತನೆ ಆಗಿದೆ ಎಂದು ವರದಿ ಆಗಿದೆ.
ಇದನ್ನು ಓದಿ :ಆನೆಗೊಂದಿ ಉತ್ಸವ: ಮಾರ್ಚ್ 8ರಿಂದ ಮಾ.10ರವರೆಗೆ ಕ್ರೀಡಾಕೂಟ
ಇನ್ನು ಕೆಲವು ಊರುಗಳಲ್ಲಿ ಮಳೆ ಕೊರೆಯಿಂದ ರೈತರು ಜೋಳ ಬಿತ್ತುವ ಸಾಹಸ ಮಾಡಿಲ್ಲ. ಈ ವರ್ಷ ಕರ್ನಾಟಕದಲ್ಲಿ ಮುಂಗಾರು ಮಳೆ ಆಗದ ಬರಗಾಲ ಉಂಟಾಗಿದೆ. ಮಳೆ ಕೊರತೆಯಿಂದ ಒಣಗಿದ ಬೆಳೆಯನ್ನು ರೈತರು ಹರಗಿಸಿದ್ದರು. ಆರ್ಥಿಕ ಸಂಕಷ್ಟಕ್ಕೆ ತುತ್ತಾದ ರೈತ ಹಿಂಗಾರು ಹಂಗಾಮಿನ ಬೆಳೆಯಾದ ಜೋಳ ನೆಚ್ಚಿಕೊಂಡಿದ್ದ. ಉತ್ತಮ ಲಾಭ ಸಿಗುವ ವಿಶ್ವಾಸದಲ್ಲಿದ್ದ. ಆದರೆ ಈ ಬಾರಿಯು ರೈತರಿಗೆ ನಿರೀಕ್ಷಿತ ಲಾಭ ಸಿಗುವ ವಾತಾವರಣವೇ ಇಲ್ಲದಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.