ಚಾಮರಾಜನಗರ: ಆಸ್ಪತ್ರೆಗೆ ಹೋಗಬೇಕಾದರೆ ಡೋಲಿ, ಪಡಿತರ ತರಬೇಕಾದರೇ ಹೆಗಲೇ ಗತಿ ಎಂಬ ಪರಿಸ್ಥಿತಿ ಇರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಜನರಿಗೆ 24×7 ವಾಹನ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಇಂದಿನಿಂದ ಜಾರಿಗೆ ತಂದಿದೆ‌.


COMMERCIAL BREAK
SCROLL TO CONTINUE READING

ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಏಡುಕುಂಡಲು ಅವರ ವಿಶೇಷ ಪ್ರಯತ್ನದಿಂದಾಗಿ  ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿರುವ ಕುಗ್ರಾಮಗಳ ನಿವಾಸಿಗಳ ಹಲವು ವರ್ಷಗಳ ಕನಸು ಕೊನೆಗೂ ಈಡೇರುತ್ತಿದೆ. 


ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಅಬ್ಬರ: ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆ


ಏನಿದು ಜನ ವನ ಸಾರಿಗೆ: ಮಲೆಮಹದೇಶ್ವರ ವನ್ಯಧಾಮದ ಮಹದೇಶ್ವರಬೆಟ್ಟ ಮತ್ತು ಹನೂರು ವನ್ಯಜೀವಿ ವಲಯ ವ್ಯಾಪ್ತಿಯ ಅರಣ್ಯದೊಳಗೆ ರಸ್ತೆ ಮತ್ತಿತರ ಮೂಲ ಸೌಲಭ್ಯಗಳ ಕೊರತೆ ಇರುವ ಗ್ರಾಮಗಳಿಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸೇರಿ ಕಲ್ಪಿಸಿರುವ ವಾಹನ ವ್ಯವಸ್ಥೆಯೇ ಜನವನ ಸೇತುವೆ ಸಾರಿಗೆ. 


ಅರಣ್ಯದೊಳಗಿನ ಗ್ರಾಮಗಳ ಜನರಿಗೆ ಆರೋಗ್ಯದ ತುರ್ತು ಸಂದರ್ಭಗಳಲ್ಲಿ, ಮಕ್ಕಳು ಶಾಲೆಗೆ ಹೋಗಿ ಬರಲು, ಜನರು ಪಡಿತರ ತರಲು ಸೇರಿದಂತೆ ಇತರೆ ಉದ್ದೇಶಗಳಿಗಾಗಿ  24×7 ಅವಧಿಯಲ್ಲಿಯೂ ನಾಲ್ಕು ವಾಹನಗಳು  ಸೇವೆ ನೀಡಲಿದೆ. 


ನಾಲ್ಕು ವಾಹನಗಳಿಗೆ ನಾಲ್ಕು ಮಾರ್ಗಗಳನ್ನು ನಿಗದಿ ಮಾಡಲಾಗಿದೆ. ಮೊದಲನೇ ಮಾರ್ಗವು ಮೆದಗನಾಣೆ, ಮಲೆಮಹದೇಶ್ವರಬೆಟ್ಟ, ತುಳಸಿಕೆರೆ, ಇಂಡಿಗನತ್ತ, ಎರಡನೇ ಮಾರ್ಗವು ಪಡಿಸಲನತ್ತ, ಪಾಲಾರ್, ಮಲೆಮಹದೇಶ್ವರಬೆಟ್ಟ, ಮೂರನೇ ಮಾರ್ಗ ಕೊಕ್ಕಬೆರೆ, ತೋಕೆರೆ, ದೊಡ್ಡಾಣೆ, ಮಲೆಮಹದೇಶ್ವರಬೆಟ್ಟ, ನಾಲ್ಕನೇ ಮಾರ್ಗ ಪಚ್ಚೆದೊಡ್ಡಿ, ಕಾಂಚಳ್ಳಿ, ಅಜ್ಜೀಪುರ ಭಾಗಗಳಲ್ಲಿ ವಾಹನಗಳು ಸಂಚರಿಸಲಿದೆ. 


ಕಡಿದಾದ ರಸ್ತೆಗಳಲ್ಲೂ ಸಂಚರಿಸುವ ಸಾಮರ್ಥ್ಯವಿರುವ 4x4x4 ವೀಲ್‌ ಡ್ರೈವ್‌ನ ಫೋರ್ಸ್‌ ಕಂಪನಿಯ ಗೂರ್ಖಾ ವಾಹನಗಳು ಇದಾಗಿದ್ದು  ಮಲೆ ಮಹದೇಶ್ವರ ಬೆಟ್ಟದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ ಇಂದಿನಿಂದ ಕಾರ್ಯಾರಂಭ ಮಾಡಿವೆ‌. ದಿನದ 24 ಗಂಟೆಗಳ ಕಾಲ ವಾರದ ಏಳು ದಿನಗಳೂ ಈ ವಾಹನಗಳ ಸೇವೆ ಲಭ್ಯ ಇರಲಿದೆ. 


ಇದನ್ನೂ ಓದಿ: Vastu for Money Plant: ಮನಿಪ್ಲಾಂಟ್‌ ಬಡವರನ್ನು ಸಹ ಶ್ರೀಮಂತರನ್ನಾಗಿಸುತ್ತೆ! ಮರೆತು ಕೂಡ ಈ ತಪ್ಪುಗಳನ್ನು ಮಾಡಬೇಡಿ


ಜಿಲ್ಲಾಡಳಿತವು ವಾಹನಗಳ ಖರೀದಿಗಾಗಿ ₹55 ಲಕ್ಷ ವೆಚ್ಚ ಮಾಡಿದೆ.  ಅರಣ್ಯ ಇಲಾಖೆಯ ನಿಯಂತ್ರಣದಲ್ಲಿ ವಾಹನಗಳು ಇರಲಿವೆ. ಈ ಸಾರಿಗೆ ವ್ಯವಸ್ಥೆ ಉಚಿತ ಅಲ್ಲ. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಾಗೂ ಶಾಲಾ ಮಕ್ಕಳನ್ನು ಉಚಿತವಾಗಿ ಕರೆದೊಯ್ಯಲಾಗುವುದು. ಉಳಿದ ಸಂದರ್ಭಗಳಲ್ಲಿ ಜನರು ಹಣ ನೀಡಬೇಕಾಗುತ್ತದೆ. ಕನಿಷ್ಠ ದರವನ್ನು ನಿಗದಿ ಪಡಿಸಲಾಗುತ್ತದೆ. ಈ ಮೂಲಕ ಸಂಗ್ರಹವಾಗುವ ಹಣದಲ್ಲಿ ವಾಹನಕ್ಕೆ ಇಂಧನ ಖರೀದಿಸಲಾಗುವುದು ಎಂದು ಡಿಸಿಎಫ್‌ ಏಡುಕುಂಡಲು ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.