ಚಾಮರಾಜನಗರ : ಇಂದು ಕಾರ್ತಿಕ ಮಾಸದ ಕೊನೆಯ ಸೋಮವಾರ. ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ಹನೂರು ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಸಿದ್ದಪ್ಪಾಜಿ ದೇಗುಲದಲ್ಲಿ ಬೆಳಗ್ಗೆ ವಿಶೇಷ ಪೂಜೆ ನೆರವೇರಿದೆ. ಈ ವೇಳೆ ಕುದಿಯುವ ಎಣ್ಣೆಯಲ್ಲಿ ಅರ್ಚಕ ಕೈ ಅದ್ದಿ ಅಚ್ಚರಿ ಮೂಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹನೂರು ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಸಿದ್ದಪ್ಪಾಜಿ ದೇಗುಲದಲ್ಲಿ ಬೆಳಗ್ಗೆ ವಿಶೇಷ ಪೂಜೆ ನೆರವೇರಿದೆ. ಹೌದು, ಕಾರ್ತಿಕಮಾಸದ ಕೊನೆಯ ಸೋಮವಾರದ ಹಿನ್ನೆಲೆಯಲ್ಲಿ ಈ ಪೂಜೆ ನೆರವೇರಿಸಲಾಗಿದೆ. ಈ ಪೂಜೆಯ ಸಂದರ್ಭದಲ್ಲಿ ಒಲೆಯ ಮೇಲೆ ಕುದಿಯುತ್ತಿರುವ ಎಣ್ಣೆಗೆ ಕೈ ಹಾಕುವ ಮೂಲಕ ನೆರೆದಿದ್ದವರು ಹುಬ್ಬೇರಿಸುವಂತೆ ಮಾಡಿದ್ದಾರೆ ಸಿದ್ದಪ್ಪಾಜಿ ದೇಗುಲದ ಅರ್ಚಕ. ದೇವಾಲಯದಲ್ಲಿ ವಾದ್ಯ ಮೇಳದೊಂದಿಗೆ ಕಂಡಾಯ ಹೊತ್ತ ಅರ್ಚಕ ಸಿದ್ದರಾಜು ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಕುಣಿಯುತ್ತಾ ಬಂದು ಕುದಿಯುತ್ತಿದ್ದ ಎಣ್ಣೆಗೆ ಕೈ ಹಾಕಿ 3 ಬಾರಿ ಕಜ್ಜಾಯವನ್ನು ಎತ್ತಿದ್ದಾರೆ. 


ಇದನ್ನೂ ಓದಿ : Vegetable Price Today: ಮಾರುಕಟ್ಟೆಗೆ ತೆರಳುವ ಮುನ್ನ ಈಗಲೇ ತಿಳಿದುಕೊಳ್ಳಿ ಇಂದಿನ ತರಕಾರಿ ಬೆಲೆ


ಮಾತ್ರವಲ್ಲ, ನೆರೆದಿದ್ದ ಭಕ್ತರ ಮೇಲೂ ಕುದಿಯುವ ಎಣ್ಣೆ ಎರಚಿರುವುದು ಕಂಡು ಬಂದಿದೆ. ಕುದಿಯುವ ಎಣ್ಣೆಯಲ್ಲಿ ಕೈ ಹಾಕಿದರೂ ಒಂದು ಚೂರೂ ಕೈ ಸುಡದೇ ಇರುವುದು ಅಚ್ಚರಿ ಮೂಡಿಸಿದೆ. 


ಇದನ್ನೂ ಓದಿ : ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಗ್ರಾಮಸ್ಥರಿಂದ ಹಲ್ಲೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.