ಬೆಂಗಳೂರು: ವಿಧಾನ ಸಭೆಯ ವಜ್ರಮಹೋತ್ಸವದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಮಾಡಿದ ಭಾಷಣವನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಹೇಳುವ ಮೂಲಕ ರಾಷ್ಟ್ರಪತಿಗೆ ಅಗೌರವ ತೋರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧಯಮಗಳಿಗೆ ತಿಳಿಸಿದ್ದಾರೆ.



COMMERCIAL BREAK
SCROLL TO CONTINUE READING

 


ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮವು ಮೊದಲಿನಿಂದಲೂ ಒಂದಿಲ್ಲೊಂದು ಚರ್ಚೆಗೆ ಗ್ರಾಸವಾಗಿದೆ. ಇನ್ನೇನು ವಜ್ರಮಹೋತ್ಸವ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ರಾಷ್ಟ್ರಪತಿಗಳ ಜಂಟಿ ಅಧಿವೇಶನ ಕುರಿತ ಭಾಷಣ ಮತ್ತೆ ವಿವಾದದ ಸುಳಿಯಲ್ಲಿ ಸಿಕ್ಕಿದೆ. 


ರಾಷ್ಟ್ರಪತಿ ರಮಾನಾಥ್ ಕೋವಿಂದ್ ತಮ್ಮ ಭಾಷಣದಲ್ಲಿ 'ಟಿಪ್ಪು ಸುಲ್ತಾನ್' ಒಬ್ಬ ಅಪ್ರತಿಮ ವೀರ, ರಾಕೆಟ್ ತಂತ್ರಜ್ಞಾನದ ಜನಕ, ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಶೌರ್ಯ ಎಂದು ಬಣ್ಣಿಸಿದ್ದರು. 



 


'ಟಿಪ್ಪು ಜಯಂತಿ'ಯನ್ನು ವಿರೋಧಿಸುತ್ತಿದ್ದ ಬಿಜೆಪಿಗೆ ಇದರಿಂದ ಭಾರಿ ಮುಖಭಂಗ ಉಂಟಾಗಿದ್ದು, ರಾಷ್ಟ್ರಪತಿಗಳ ಭಾಷಣವನ್ನು ರಾಜ್ಯ ಸರ್ಕಾರ ತಯಾರಿಸಿ ಕೊಟ್ಟಿದೆ, ರಾಜ್ಯ ಸರ್ಕಾರ ನೀಡಿರುವ ಪ್ರತಿಯಲ್ಲಿ ಏನಿದೆಯೋ ಅದನ್ನೇ ರಾಷ್ಟ್ರಪತಿಗಳು ಹೇಳಿದ್ದಾರೆ ಎಂದು ಹೇಳುತ್ತಿದ್ದಾರೆ. 


ಇದೀಗ ಈ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು- ರಾಷ್ಟ್ರಪತಿ ಭಾಷಣವನ್ನು ರಾಜ್ಯ ಸರ್ಕಾರ ನೀಡಲು ಸಾಧ್ಯವೇ? ಬಿಜೆಪಿ ಅವರಿಗೆ ವಿವೇಚನೆ ಇಲ್ಲ. ಭಾಷಣವನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಹೇಳುತ್ತಿರುವ ಮೂಲಕ ರಾಷ್ಟ್ರಪತಿಗೆ ಅಗೌರವ ತೋರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.