ಶುದ್ಧ ಜಲವಾಗಿ ಪರಿವರ್ತನೆಗೊಳ್ಳುತ್ತಿದೆ ಬೆಂಗಳೂರಿನ ಅಪಾರ್ಟ್ಮೆಂಟ್ಗಳ ತ್ಯಾಜ್ಯ ನೀರು
ನಗರದ ಅನೇಕ ಪ್ರದೇಶಗಳಲ್ಲಿ ನೀರಿನ ಕೊರತೆಯು ನೀಗಿಸಲಾಗದ ಸಮಸ್ಯೆಯಾಗಿ ತಲೆದೋರಿದೆ. ಪರಿಣಾಮವಾಗಿ ಅನೇಕ ವಸತಿ ಸಮುಚ್ಛಯಗಳು ಬಳಸಿದ ತ್ಯಾಜ್ಯ ನೀರನ್ನು ಶುದ್ಧ ನೀರಾಗಿ ಮರುಪಡೆಯುವ ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಂಡಿವೆ. ಅವರೆಲ್ಲರೂ ಪ್ರತಿದಿನ ಲಕ್ಷಾಂತರ ಲೀಟರ್ ತ್ಯಾಜ್ಯ ನೀರನ್ನು ಶುದ್ಧ ಹಾಗೂ ಮರುಬಳಕೆ ಮಾಡಬಹುದಾದ ಜಲವಾಗಿ ಪರಿವರ್ತಿಸುತ್ತಿದ್ದಾರೆ.
ಬೆಂಗಳೂರು: ನಗರದ ಅನೇಕ ಪ್ರದೇಶಗಳಲ್ಲಿ ನೀರಿನ ಕೊರತೆಯು ನೀಗಿಸಲಾಗದ ಸಮಸ್ಯೆಯಾಗಿ ತಲೆದೋರಿದೆ. ಪರಿಣಾಮವಾಗಿ ಅನೇಕ ವಸತಿ ಸಮುಚ್ಛಯಗಳು ಬಳಸಿದ ತ್ಯಾಜ್ಯ ನೀರನ್ನು ಶುದ್ಧ ನೀರಾಗಿ ಮರುಪಡೆಯುವ ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಂಡಿವೆ. ಅವರೆಲ್ಲರೂ ಪ್ರತಿದಿನ ಲಕ್ಷಾಂತರ ಲೀಟರ್ ತ್ಯಾಜ್ಯ ನೀರನ್ನು ಶುದ್ಧ ಹಾಗೂ ಮರುಬಳಕೆ ಮಾಡಬಹುದಾದ ಜಲವಾಗಿ ಪರಿವರ್ತಿಸುತ್ತಿದ್ದಾರೆ.
ಬೆಂಗಳೂರು ನಗರ ಮೂಲದ "ಬೋಸಾನ್ ವೈಟ್ವಾಟರ್ ' ಸಂಸ್ಥೆಯು ಎಸ್ಟಿಪಿ ತ್ಯಾಜ್ಯ ನೀರನ್ನು 11 ಹಂತದ ಪ್ರಕ್ರಿಯೆ ಮೂಲಕ ಅತ್ಯಂತ ಶುದ್ಧ ಹಾಗೂ ಉತ್ತಮ ಗುಣಮಟ್ಟದ ನೀರಾಗಿ ಪರಿವರ್ತಿಸುವ ತಾಂತ್ರಿಕತೆಯನ್ನು ಹೊಂದಿದೆ. ಹೀಗಾಗಿಯೇ ಅದನ್ನು ವೈಟ್ವಾಟರ್ ಎಂದು ಹೆಸರಿಸಲಾಗಿದೆ. ಇದರ ಬಗ್ಗೆ ನಗರದ ನಿವಾಸಿಗಳ ಆಸಕ್ತಿ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರಮುಕ್ ಆಕ್ವಾ ಹೈಟ್ಸ್ ಅಪಾರ್ಟ್ಮೆಂಟ್ ಈ ತಾಂತ್ರಿಕತೆಯನ್ನು ಆಯ್ಕೆಮಾಡಿಕೊಂಡಿರುವ ನಗರದ ವಸತಿ ಸಮುಚ್ಛಯಗಳಲ್ಲಿ ಒಂದು. ಇಲ್ಲಿ 300ಕ್ಕೂ ಹೆಚ್ಚು ಫ್ಲ್ಯಾಟ್ ಗಳು ಮತ್ತು 1500 ನಿವಾಸಿಗಳಿದ್ದಾರೆ. ಈ ಅಪಾರ್ಟ್ಮೆಂಟ್ಸ್ನಲ್ಲಿ ಎಸ್ಟಿಪಿ ಸಂಸ್ಕರಿಸಿದ ನೀರು ಮಿತಿ ಮೀರಿ ಸಂಗ್ರಹವಾಗುವ ಸಮಸ್ಯೆ ಇತ್ತು. "ವೈಟ್ವಾಟರ್' ನೆರವಿನಿಂದ ಇದೀಗ ಈ ಸಮುಚ್ಛಯದಲ್ಲಿ ಪ್ರತಿದಿನ 40,000 ಲೀಟರ್ ಎಸ್ಟಿಪಿ ಸಂಸ್ಕರಿಸಿದ ನೀರನ್ನು ಶುದ್ಧ ನೀರಾಗಿ ಪರಿವರ್ತಿಸಲಾಗುತ್ತಿದೆ. ಅಪಾರ್ಟ್ಮೆಂಟ್ನ ನಿರ್ವಹಣೆ ಮತ್ತು ಉದ್ಯಾನದ ಉದ್ದೇಶಗಳಿಗಾಗಿ ಎಸ್ಟಿಪಿ ನೀರನ್ನು ಬಳಸಿದ ಬಳಿಕವೂ ಉಳಿದ ನೀರನ್ನು ಉತ್ತಮ ಗುಣಮಟ್ಟದ ನೀರಾಗಿ ಪರಿವರ್ತನೆ ಮಾಡಲಾಗುತ್ತದೆ. ಈ ಶುದ್ದ ನೀರನ್ನು ಟ್ಯಾಂಕರ್ಗಳ ಮೂಲಕ ಮೂಲಕ ಹತ್ತಿರದ ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತದೆ.
ಇದನ್ನೂ ಓದಿ- ಮಕ್ಕಳು ಬಾಲ ನಟ, ನಟಿಯಾಗಿ ನಟನಾ ಕೆಲಸ ಮಾಡಲು ಅನುಮತಿ ಕಡ್ಡಾಯ
ಸರ್ಜಾಪುರ ರಸ್ತೆಯಲ್ಲಿರುವ ಎಸ್ಜೆಆರ್ ವೆರಿಟಿ ಈ ವೈಟ್ವಾಟರ್ ಬಳಸುವ ಮತ್ತೊಂದು ಅಪಾರ್ಟ್ಮೆಂಟ್, ಇಲ್ಲಿ ಕಳೆದ ಹಲವಾರು ವರ್ಷಗಳಿಂದ ನೀರನ್ನು ಮರುಬಳಕೆ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚು ಫ್ಲ್ಯಾಟ್ ಗಳು ಮತ್ತು 1000 ಜನಸಂಖ್ಯೆಯನ್ನು ಹೊಂದಿರುವ ಎಸ್ ಜೆಆರ್ ವೆರಿಟಿ ಪ್ರತಿದಿನ 60,000 ಲೀಟರ್ ಎಸ್ ಟಿಪಿ ಸಂಸ್ಕರಿಸಿದ ನೀರನ್ನು ಶುದ್ಧ ನೀರಾಗಿ ಪರಿವರ್ತಿಸುತ್ತದೆ. ಸುತ್ತಮುತ್ತಲಿನವರಿಗೆ ನೀರನ್ನು ನೀಡಲಾಗುತ್ತಿದೆ. .
ಬೋಸಾನ್ ವೈಟ್ ವಾಟರ್ ನ ಸಿಇಒ ಹಾಗೂ ಸಹ ಸಂಸ್ಥಾಪಕ ವಿಕಾಸ್ ಬ್ರಹ್ಮಾವರ್ ಮಾತನಾಡಿ, ನಗರಗಳು ವೇಗವಾಗಿ ಬೆಳೆಯುತ್ತಿದ್ದು ನೀರಿನ ಬೇಡಿಕೆ ಹೆಚ್ಚುತ್ತಲೇ ಇರುತ್ತದೆ. ಬೇಸಿಗೆ ಬಂದಿರುವುದರಿಂದ, ನಗರವು ತೀವ್ರ ನೀರಿನ ಕೊರತೆಯನ್ನು ಅನುಭವಿಸುತ್ತಿದೆ. ನೀರಿನ ಸುಸ್ಥಿರತೆಯನ್ನು ಸಾಧಿಸಲು ನಮ್ಮ ನಗರಗಳಿಗೆ ಮುಂದಿರುವ ಏಕೈಕ ಮಾರ್ಗವೆಂದರೆ ತ್ಯಾಜ್ಯನೀರಿನಿಂದ ಕುಡಿಯುವ ಗುಣಮಟ್ಟದ ನೀರನ್ನು ಮರುಪಡೆಯುವುದು. ಪ್ರತಿ ಅಪಾರ್ಟ್ಮೆಂಟ್ನಲ್ಲಿ ಹೆಚ್ಚುವರಿ ಎಸ್ಟಿಪಿ ಸಂಸ್ಕರಿಸಿದ ನೀರು ಇರುತ್ತದೆ, ಸಾಮಾನ್ಯವಾಗಿ ಇಂಥ ನೀರನ್ನು ಉದ್ಯಾನಗಳಿಗೆ ಅಗತ್ಯಕ್ಕಿಂತ ಹೆಚ್ಚು ಹರಿಯಬಿಡಲಾಗುತ್ತದೆ. ಅದಕ್ಕೆ ಬೇಕಾದ ನಿಜವಾದ ಪ್ರಮಾಣವನ್ನು ಅರಿತುಕೊಳ್ಳದೆ ದೊಡ್ಡ ಪ್ರಮಾಣದಲ್ಲಿ ಉದ್ಯಾನಕ್ಕೆ ಹರಿಸಲಾಗುತ್ತದೆ. ಕಳೆದ ಕೆಲವು ವಾರಗಳಲ್ಲಿ, ನಮ್ಮ ತಾಂತ್ರಿಕ ಪರಿಹಾರವನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಿರುವ ಅಪಾರ್ಟ್ಮೆಂಟ್ ಸಮುಚ್ಛಯಗಳಿಂದ ಬೇಡಿಕೆ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ವಸತಿ ಸಂಕೀರ್ಣಗಳಲ್ಲಿ ನೀರಿನ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವುದು ಮತ್ತು ತ್ಯಾಜ್ಯನೀರಿನ ಬಳಕೆಯನ್ನು ಉತ್ತಮಗೊಳಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸುವುದನ್ನು ನೋಡುವುದು ಅಪ್ಯಾಯಮಾನ ಸಂಗತಿ" ಎಂದು ಹೇಳಿದರು.
ಬೋಸಾನ್ ವೈಟ್ ವಾಟರ್, ತ್ಯಾಜ್ಯ ನೀರಿನ ಮರುಬಳಕೆ ಮಾಡುವುದರ ಜತೆಗೆ ಅಪಾರ್ಟ್ ಮೆಂಟ್ ಗಳು ತಮ್ಮ ಹೆಚ್ಚುವರಿ ನೀರನ್ನು ಸುಸ್ಥಿರವಾಗಿ ನಿರ್ವಹಿಸಲು ಬೇಕಾದ ಸೂಕ್ತ ಮಾರ್ಗವನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ. ಇಂದು ಹೆಚ್ಚಿನ ಅಪಾರ್ಟ್ಮೆಂಟ್ಗಳಲ್ಲಿ ಹೆಚ್ಚುವರಿ ಸಂಸ್ಕರಿಸಿದ ನೀರನ್ನು ಹೊರಹಾಕಲು ಯಾವುದೇ ಮಾರ್ಗಗಳಿರುವುದಿಲ್ಲ. ಹೀಗಾಗಿ 'ಶೂನ್ಯ ವಿಸರ್ಜನೆ ನೀತಿ'ಯನ್ನು ಅನುಸರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿದರೂ ಅದರಲ್ಲಿ ಕೇವಲ 20% ಮಾತ್ರ ಬಳಸಲು ಸಾಧ್ಯವಾಗುತ್ತಿದೆ. ಒಂದು ಎಕರೆ ತೋಟಕ್ಕೆ ಸಾಮಾನ್ಯವಾಗಿ ದಿನಕ್ಕೆ ಸರಾಸರಿ 5,000 ಲೀಟರ್ ನೀರು ಬೇಕಾಗುತ್ತದೆ. ಆದ್ದರಿಂದ, ಸಂಸ್ಕರಿಸಿದ ಬಳಿಕವೂ ಹೆಚ್ಚುವರಿ ಎಸ್ ಟಿಪಿ ನೀರು ಉಳಿಯುತ್ತದೆ. ಹೀಗೆ ಸಂಸ್ಕರಿಸಿದ ಬಳಿಕವೂ ಬಳಕೆಯಾಗದ ಶೇಕಡಾ 80ರಷ್ಟು ನೀರನ್ನು ಉತ್ತಮ ಗುಣಮಟ್ಟದ ಕುಡಿಯುವ ನೀರಾಗಿ ಪರಿವರ್ತಿಸಬಹುದು ಹಾಗೂ ಅದನ್ನು ಹತ್ತಿರದ ಕೈಗಾರಿಕೆಗಳಿಗೆ ಪೂರೈಸಬಹುದು.
ಇದನ್ನೂ ಓದಿ- ಬಿಬಿಎಂಪಿ : ಘನತ್ಯಾಜ್ಯ ನಿರ್ವಹಣೆಗೆ ಕಾರ್ಯಕ್ಕೆ ಮತ್ತೆ ಟೆಂಡರ್
ಬೋಸಾನ್ ವೈಟ್ ವಾಟರ್ ಬಗ್ಗೆ
ಕೈಗಾರಿಕೆಗಳು, ಐಟಿ ಪಾರ್ಕ್ ಗಳು, ಮಾಲ್ ಗಳು ಮತ್ತು ಅಪಾರ್ಟ್ ಮೆಂಟ್ ಸಮುಚ್ಛಯಗಳು ತಮ್ಮ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ವಿಧಾನವನ್ನು ಬದಲಾಯಿಸುವ ಉದ್ದೇಶದಿಂದ ಬೋಸಾನ್ ವೈಟ್ ವಾಟರ್ ಎಂಬ ವಾಟರ್ ಯುಟಿಲಿಟಿ ಕಂಪನಿಯನ್ನು ಸ್ಥಾಪಿಸಲಾಗಿದೆ.. ವಿಕಾಸ್ ಬ್ರಹ್ಮಾವರ್ ಮತ್ತು ಗೌತಮ್ ದೇಸಿಂಗ್ ಅವರು 2011ರಲ್ಲಿ ಸ್ಥಾಪಿಸಿದ ಬೋಸಾನ್ ವೈಟ್ ವಾಟರ್ ಒಳಚರಂಡಿ ಸಂಸ್ಕರಣಾ ಘಟಕಗಳಿಂದ ಬರುವ ನೀರನ್ನು ಕುಡಿಯುವ ಉತ್ತಮ ಗುಣಮಟ್ಟದ ನೀರಾಗಿ ಪರಿವರ್ತಿಸುತ್ತದೆ, ಇದನ್ನು ಗೃಹ ಉದ್ದೇಶಗಳಿಗಾಗಿ, ವಾಣಿಜ್ಯ ಕಟ್ಟಡಗಳಲ್ಲಿ ಕೇಂದ್ರೀಕೃತ ಹವಾನಿಯಂತ್ರಣ ಮತ್ತು ಕುಡಿಯಲು ಸಹ ಬಳಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.