ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ದೊಡ್ಡ ವಾಣಿಜ್ಯ ಮತ್ತು ಅತಿ ದೊಡ್ಡದಾದ ವಿಮಾನ ಬಂದಿಳಿದಿದೆ.


COMMERCIAL BREAK
SCROLL TO CONTINUE READING

ಇದಕ್ಕು ಮೊದಲು ಘೋಷಿಸಿದ್ದಕ್ಕಿಂತ 2 ವಾರಗಳ ಮುಂಚಿತವಾಗಿಯೇ ಈ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ. ಎಮಿರೇಟ್ಸ್‌ನ ವಿಮಾನವು ದುಬೈನಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಶುಕ್ರವಾರ ಮಧ್ಯಾಹ್ನ 3:40ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ.


ಬೆಂಗಳೂರಿನಿಂದ ಐಕಾನಿಕ್ ವಿಮಾನವನ್ನು ಹತ್ತುವ ಪ್ರಯಾಣಿಕರಿಗೆ ಇದು ಮೊದಲ ಐಷಾರಾಮಿ ಹಾರಾಟದ ಅನುಭವವಾಗಲಿದ್ದು, ಐನೂರಕ್ಕು ಹೆಚ್ಚು ಆಸನಗಳನ್ನು ಹೊಂದಿದೆ.ವಿಮಾನದಲ್ಲಿ ಫಸ್ಟ್ ಕ್ಲಾಸ್, ಎಕಾನಮಿ ಹಾಗೂ ಬ್ಯುಸಿನೆಸ್ ಕ್ಲಾಸ್ ಆಸನಗಳು ಇದ್ದು, ಖಾಸಗಿ ಸೂಟ್ ಗಳು ಹಾಗೂ ಶವರ್ ಸ್ಟಾ ವ್ಯವಸ್ಥೆ ಇದೆ.


ಇದನ್ನೂ ಓದಿ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇಲ್ಲವಾದರೆ ಎದುರಾಗುವುದು ಈ ಸಮಸ್ಯೆಗಳು. !


ಎಮಿರೇಟ್ಸ್‌ ವಿಮಾನವು ದುಬೈನಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಶುಕ್ರವಾರ ಮಧ್ಯಾಹ್ನ 3:40 ರ ಸುಮಾರಿಗೆ ಬೆಂಗಳೂರಿಗೆ ಪ್ರವೇಶಿಸಿದೆ. ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಈ ಬೃಹತ್ ವಿಮಾನವನ್ನು ಬರಮಾಡಿಕೊಂಡಿದ್ದಾರೆ.ಬೆಂಗಳೂರು ದುಬೈ ಮಾರ್ಗದಲ್ಲಿ ದೈನಂದಿನ ಎ380 ವಿಮಾನಗಳು ಮೂರು ವರ್ಗದ ಸಂರಚನೆಯಲ್ಲಿ ಹಾರಾಟ ನಡೆಸುತ್ತವೆ.


ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಗೆ ಎ380 ವಿಮಾನವನ್ನು ಇಳಿಸಲು ಕೋಡ್ ಎಫ್‌ಗೆ ಅನುಗುಣವಾಗಿ ಹಲವಾರು ವರ್ಷಗಳ ಪ್ರಯತ್ನದ ನಂತರ ಇದು ಸಾಧ್ಯವಾಗಿದೆ. ಕೋಡ್ ಎಫ್ ವಿಮಾನಗಳು 65 ಮೀಟರ್‌ಗಿಂತ ಹೆಚ್ಚು ಉದ್ದವಿದೆ. ಆದರೆ 80 ಮೀಟರ್‌ಗಿಂತ ಕಡಿಮೆ ರೆಕ್ಕೆಗಳನ್ನು ಹೊಂದಿರುವ ವಿಮಾನಗಳಾಗಿವೆ.


ಇದನ್ನೂ ಓದಿ ಪುಣ್ಯಕೋಟಿ ದತ್ತು ಯೋಜನೆಗೆ ದೇಣಿಗೆ ನೀಡಿದ ಸರ್ಕಾರಿ ನೌಕರರು


ಇಂದು ಬಂದಿರುವ ಎ380 ವಿಮಾನದ ರೆಕ್ಕೆಗಳು 79.8 ಮೀಟರ್ ಉದ್ದವಾಗಿದೆ.ವಿಮಾನ ಲ್ಯಾಂಡಿಂಗ್ ಆಗಿರುವ ಭಾರತದ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಒಂದಾಗಿದೆ. ದೆಹಲಿ, ಮುಂಬೈ ಮತ್ತು ಹೈದರಾಬಾದ್ ಇದಕ್ಕೂ ಮೊದಲು ಲ್ಯಾಂಡಿಂಗ್ ಆಗಿರುವ ವಿಮಾನ ನಿಲ್ದಾಣಗಳಾಗಿವೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.