ಒಂದಲ್ಲ, ಎರಡಲ್ಲ ಬರೋಬ್ಬರಿ 28 ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯೇ ಇಲ್ಲ..!
Drought In Karnataka 2023: ಮಳೆಗಾಲ ಆರಂಭವಾಗಿ 2 ತಿಂಗಳು ಸಮೀಪಿಸುತ್ತಿದ್ದರೂ ಇನ್ನು ರಾಜ್ಯದ ಕೆಲವು ಜಿಲ್ಲೆಗಳಿಗೆ ಮಳೆ ಆರಂಭ ಆಗಿಲ್ಲ. ಈ ವರುಷ ಲೇಟಾಗಿ ಮುಂಗಾರು ಮಳೆ ರಾಜ್ಯಕ್ಕೆ ಎಂಟ್ರಿ ಆದ್ದರಿಂದ ಸರ್ಕಾರವು ಬರಗಾಲ ಘೋಷಿಸುವ ಸಾಧ್ಯತೆ ಇದೆ.
ಬೆಂಗಳೂರು: ಮಳೆಗಾಲ ಆರಂಭವಾಗಿ 2 ತಿಂಗಳು ಸಮೀಪಿಸುತ್ತಿದ್ದರೂ ಇನ್ನು ರಾಜ್ಯದ ಕೆಲವು ಜಿಲ್ಲೆಗಳಿಗೆ ಮಳೆ ಆರಂಭ ಆಗಿಲ್ಲ. ಈ ವರುಷ ಲೇಟಾಗಿ ಮುಂಗಾರು ಮಳೆ ರಾಜ್ಯಕ್ಕೆ ಎಂಟ್ರಿ ಆದ್ದರಿಂದ ಸರ್ಕಾರವು ಬರಗಾಲ ಘೋಷಿಸುವ ಸಾಧ್ಯತೆ ಇದೆ.
ವರದಿ ಪ್ರಕಾರ ಒಂದಲ್ಲ, ಎರಡಲ್ಲ ಬರೋಬ್ಬರಿ 28 ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯೇ ಆಗಿಲ್ಲ. ಇನ್ನು ಜೂನ್ ತಿಂಗಳಲ್ಲಿ ಮಳೆ ಪ್ರಮಾಣ ನೋಡೊದಾದರೇ..
ಆರಂಭದಲ್ಲಿ ಬರೋಬ್ಬರಿ ಶೇ. 56ರಷ್ಟು ಮಳೆ ಕೊರತೆಯಾಗಿದ್ದು,ಜೂನ್ ತಿಂಗಳು 199 ಮಿ.ಮಿ. ಮಳೆ ಆಗಬೇಕಿತ್ತು. ಆದ್ರೆ ಮಳೆ ಆಗಿದ್ದು 87 ಮಿ.ಮೀ. ಆಗಿದೆ.
ಇದನ್ನೂ ಓದಿ: ʼನಮಸ್ಕಾರ ದೇವ್ರುʼ Dr Bro ವಿಡಿಯೋ ಮಾಡಿದ್ದಕ್ಕೆ ಅಲ್ಲಿನ ಜನ ಏನ್ ಮಾಡಿದ್ರು ನೀವೆ ನೋಡಿ..!
ದಕ್ಷಿಣ ಒಳನಾಡಿನಲ್ಲಿ ಶೇ.18ರಷ್ಟು, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 28 ,ಇದರಲ್ಲಿ ಎಂಟು ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದೆ. ಉತ್ತರ ಒಳನಾಡಿನಲ್ಲಿ ಶೇ.55,ಇದರಲ್ಲಿ ಎಲ್ಲ 13 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ.
ಇದನ್ನೂ ಓದಿ: ಇಂದಿನ ಐದು ಪ್ರಮುಖ ಸುದ್ದಿಗಳು
ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ. 77 ,ಮಲೆನಾಡಿನಲ್ಲಿ ಶೇ.74ರಷ್ಟು ,ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ. 80 ಮಳೆ ಕೊರತೆಯಾಗಿದೆ. ಇನ್ನು ರಾಜ್ಯದಲ್ಲಿ ಶೇ. 82.35 ಬಿತ್ತನೆ ಗುರಿ ಆಯೋಜನೆ ಮಾಡಲಾಗಿತ್ತು. ಆದರೆ ಜುಲೈ 7ರವರೆಗೆ ಬಿತ್ತನೆ ಆಗಿರೋದು ಶೇ.33ರಷ್ಟು ಮಳೆ ಇಲ್ಲದೆ ಬಿತ್ತನೆ ಕೊರತೆ ಆಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ