ಹುಬ್ಬಳ್ಳಿ: ಬಿಜೆಪಿ ಅಧಿಕಾರಕ್ಕೆ ಬಂದರೆ  ದಲಿತರ ಮೀಸಲಾತಿ ತೆಗೆಯುತ್ತಾರೆ. ಸಂವಿಧಾನ ಬದಲಿಸುತ್ತಾರೆ ಎಂದೆಲ್ಲಾ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಕೇಂದ್ರದ ಸಂಸದೀಯ ಸಚಿವನಾಗಿ ಹೇಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಈಗಿರುವ ದಲಿತರ ಮೀಸಲಾತಿ ತೆಗೆಯುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಘೋಷಿಸಿದರು.


COMMERCIAL BREAK
SCROLL TO CONTINUE READING

ದೇಶದಲ್ಲಿ ದಲಿತ ಸಮಾಜ ಇನ್ನಿತರ ಸಮಾಜದ ಜತೆ ಸರಿ ಸಮನಾಗಿ ಅಭಿವೃದ್ಧಿ ಹೊಂದುವವರೆಗೂ ಕೇಂದ್ರ ಸರ್ಕಾರ ಯಾವುದೇ ಕಾಲಕ್ಕೂ ಮೀಸಲಾತಿ ತೆಗೆಯುವುದಿಲ್ಲ, ಸಂವಿಧಾನ ಬದಲಿಸಲ್ಲ ಎಂದು ಸಚಿವ ಜೋಶಿ ಭರವಸೆ ನೀಡಿದರು.


ದಲಿತರನ್ನು ಬಿಜೆಪಿ ಒಂದು ಮಾನವ ಶಕ್ತಿಯಾಗಿ ನೋಡುತ್ತಿದೆ. ನರೇಂದ್ರ ಪ್ರಧಾನಿಯಾಗುತ್ತಲೇ ಸಂವಿಧಾನ ಗ್ರಂಥವನ್ನು ಮೆರವಣಿಗೆ ಮೂಲಕ ಸಂಸತ್ ಅಲ್ಲಿ ಇರಿಸಿ ಗೌರವ ಸಮರ್ಪಿಸಿದರು. "ನವೆಂಬರ್ 26ನ್ನು ಸಂವಿಧಾನ ದಿವಸ್" ಆಚರಣೆಗೆ ತಂದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 5 ಪ್ರಮುಖ ಸ್ಥಳಗಳನ್ನು ಪಂಚತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಿದರು. ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಕಿತ್ತು ಹಾಕಿ ಅಲ್ಲಿನ ದಲಿತರಿಗೆ ಸಮಾನ ಹಕ್ಕು, ಸೌಲಭ್ಯವನ್ನು ಕಲ್ಪಿಸಿದರು. ಹೀಗೆ ಬಿಜೆಪಿ ಯಾವತ್ತೂ ದಲಿತರನ್ನು ಮೇಲೆತ್ತುವ ಕೆಲಸವನ್ನೇ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.


ದಲಿತರನ್ನು ಬರೀ ವೋಟ್ ಬ್ಯಾಂಕ್ ಆಗಿ ನೋಡ್ತಿದೆ ಕಾಂಗ್ರೆಸ್: ಕಾಂಗ್ರೆಸ್ ಯಾವತ್ತೂ ದಲಿತರನ್ನು ಕೇವಲ ಒಂದು ವೋಟ್ ಬ್ಯಾಂಕ್ ಆಗಿ ಮಾತ್ರ ನೋಡುತ್ತಿದೆ. ಅಂಬೇಡ್ಕರ್, ಬಾಬು ಜಗಜೀವನ್ ರಾಂ ಸೇರಿದಂತೆ ಅನೇಕ ದಲಿತ ನಾಯಕರನ್ನು ಅಪಮಾನಿಸಿದೆ ಎಂದರು.


ಇದನ್ನೂ ಓದಿ: ರೈತರ ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಬಿ.ಎಸ್ ಯಡಿಯೂರಪ್ಪ 


ಬಾಬು ಜಗಜೀವನ್ ರಾಂ ಪ್ರಧಾನಿ ಆಗದಂತೆ ಷಡ್ಯಂತ್ರ ನಡೆಸಿತು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನ 2 ಬಾರಿ ಸೋಲಿಸಿತು. ಇವರ ವಿರುದ್ಧ ಗೆದ್ದವರಿಗೆ ಪದ್ಮ ಕೊಟ್ಟಿತು ಆದರೆ, ಅಂಬೇಡ್ಕರ್ ಗೆ ಭಾರತ ರತ್ನ ಕೊಡಲು ಸತಾಯಿಸಿತು. ವಾಜಪೇಯಿ, ಅಡ್ವಾಣಿ ಅವರ ಹೋರಾಟದ ಫಲವಾಗಿ ಕೊನೆಗೆ ಮರಣೋತ್ತರ ಭಾರತ ರತ್ನ ನೀಡಲಾಯಿತು. ಹೀಗೆ ಕಾಂಗ್ರೆಸ್ ಹೆಜ್ಜೆ ಹೆಜ್ಜೆಗೂ ಈ ದಲಿತ ನಾಯಕರನ್ನು ಅವಮಾನಿಸುತ್ತಲೆ ಬಂದಿದೆ ಎಂದು ಆರೋಪಿಸಿದರು.


ಸಂವಿಧಾನದ ಸಂರಕ್ಷಣೆ ಮಾಡುವಲ್ಲಿ ಮೋದಿ ಸರ್ಕಾರ ಸಮರ್ಥವಾಗಿ ಕಾರ್ಯ ನಿರ್ವಹಿಸಿದೆ. ಸಂವಿಧಾನದ ಪ್ರತಿಯೊಂದು ಆಶಯಗಳು ಈಡೇರಬೇಕಾದಲ್ಲಿ ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಆಡಳಿತಕ್ಕೆ ಬರಬೇಕು. ಸರ್ವರೂ ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡಿದರು.


ಸಮಾವೇಶದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಎನ್ ಮಹೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಎಸ್. ವೀರಯ್ಯ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪ್ರಮುಖರಾದ ಡಾ.ಕ್ರಾಂತಿ ಕಿರಣ, ಚಂದ್ರಶೇಖರ ಗೋಕಾಕ, ಮಹೇಂದ್ರ ಕೌತಾಳ, ಬಸವರಾಜ್ ಅಮ್ಮಿನಭಾವಿ, ವೀರಭದ್ರಪ್ಪ ಹಾಲಹರವಿ ಇದ್ದರು.


ಇದನ್ನೂ ಓದಿ: ಕುರುಬರಿಗೆ ಒಂದೂ ಟಿಕೆಟ್ ಕೊಡದ ಮೋದಿ ಕರಿ ಕಂಬಳಿ ವೇಷ ತೊಟ್ಟು ಡ್ರಾಮಾ ಆಡ್ತಾರೆ : ಸಿದ್ದರಾಮಯ್ಯ ವ್ಯಂಗ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.