ಚಾಮರಾಜನಗರ: ಮುಂದಿನ ಬಾರಿ ವಿಧಾನಸಭೆಗೆ ಯಾವ ರೀತಿ ಶಾಸಕರು ಬರ್ತಾರೆ ಅಂತಾ ಗೊತ್ತಿಲ್ಲ, ಶಾಸನಸಭೆಯಲ್ಲಿ ಹೊಡೆದಾಟ ಆಗತ್ತೆ ಎಂದು ವಾಟಾಳ್ ನಾಗರಾಜ್ ಹೇಳಿದರು.


COMMERCIAL BREAK
SCROLL TO CONTINUE READING

ನಗರದ ಜೆ.ಎಚ್‌.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದಚಾಮರಾಜನಗರದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,  ಈ ಸಾರಿ ಶಾಸನಸಭೆಯಲ್ಲಿ ಹೊಡೆದಾಟ ಆಗತ್ತೆ, ಮಂತ್ರಿಗಳಿಗೂ ಹೊಡೆಯುತ್ತಾರೆ ಹೆಚ್ಚು ಕಡಿಮೆಯಾದರೇ ಮುಖ್ಯಮಂತ್ರಿಗೂ ಹೊಡಿತಾರೆ ಆ ವೇಳೆ ಒಬ್ಬ ವಾಟಾಳ್ ನಾಗರಾಜ್ ವಿಧಾನಸಭೆಯಲ್ಲಿ ಇರಬೇಕು, ಸೋಲು-ಗೆಲುವು ಬೇರೆ ವಿಚಾರ ಈ ಬಾರಿ ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು‌ ಘೋಷಣೆ ಮಾಡಿದರು.


ತಾನು ಲೂಟಿ ಮಾಡಲು ಶಾಸಕನಾಗುವುದಿಲ್ಲ, ಚಾಮರಾಜನಗರದ ರೂಪವನ್ನೇ ಬದಲಿಸುತ್ತೇನೆ, ತನ್ನನ್ನು ಬೆಂಬಲಿಸಬೇಕು, ಹಣ, ಜಾತಿ, ಧರ್ಮ ನೋಡಬೇಡಿ ನನ್ನ ಕೆಲಸ ನೋಡಿ ಓಟು ಕೊಡಿ ಎಂದು ಮನವಿ ಮಾಡಿಕೊಂಡರು.


ಇದನ್ನೂ ಓದಿ : "ಸ್ಪೂಕಿ ಕಾಲೇಜ್" ಚಿತ್ರದ "ಮೆಲ್ಲುಸಿರೆ ಸವಿಗಾನ" ಹಾಡು ನವೆಂಬರ್ 14 ರಂದು ಬಿಡುಗಡೆ


ಇದೇ ವೇಳೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತರನ್ನು ಕಂಡು ಖುಷಿಗೊಂಡ ವಾಟಾಳ್; ಸರ್ಕಾರ ಅಂಗನವಾಡಿ ಕಾರ್ಯಕರ್ತರು ಎಂಬ ಹೆಸರನ್ನು ಬದಲಿಸಬೇಕು, ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುವ ಅವರನ್ನು ಕಾರ್ಯಕರ್ತರು ಎಂದು ಹೇಳುವುದು ಸರಿಯಲ್ಲ, ಅದರ ಬದಲಿಗೆ ಬೇರೆ ಒಂದು ಹೆಸರನ್ನು ಸರ್ಕಾರ ಕೊಡಬೇಕು ಎಂದು ಅಭಿಪ್ರಾಯಪಟ್ಟರು.


ಪ್ರಸಾದ್ ರಾಜ್ಯಸಭೆಗೆ ಹೋಗಲಿ: ರಾಜಕೀಯದಿಂದ ವಿ.ಶ್ರೀನಿವಾಸಪ್ರಸಾದ್ ನಿವೃತ್ತರಾಗಬಾರದು, ಅವರು ನಿವೃತ್ತರಾದರೇ ಅವರ ಪಕ್ಷಕ್ಕೆ ನಷ್ಟ, ರಾಜ್ಯಸಭೆಗೆ ಅವರನ್ನು ಆಯ್ಕೆ ಮಾಡಿ ಕಳುಹಿಸಿ ಇನ್ನೂ 6 ವರ್ಷ ಅವರ ಸೇವೆಯನ್ನು ಪಡೆಯಬೇಕು ಇದರತ್ತ ಅವರ ನಾಯಕರು, ಅವರ ಪಕ್ಷ ಯೋಚಿಸಲಿ ಎಂದರು.


ಜಿಲ್ಲಾಡಳಿತ ಜಿಲ್ಲೆಯ ರಜತೋತ್ಸವ ಮಾಡದಿದ್ದರಿಂದ ಅಸಮಾಧಾನಗೊಂಡ ಕನ್ನಡಪರ ಹೋರಾಟಗಾರರು ಬೆಳ್ಳಿಹಬ್ಬ ಕಾರ್ಯಕ್ರಮ ಮಾಡಿ ಗಮನ ಸೆಳೆದರು. ಸಂಸದ ವಿ.ಶ್ರೀನಿವಾಸಪ್ರಸಾದ್, ದಲಿತ ಮುಖಂಡ ವೆಂಕಟರಮಣಸ್ವಾಮಿ ಇದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.