ಬೆಂಗಳೂರು: ನೆಲ, ಜಲ, ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Gujarat Election Result 2022 : ರವೀಂದ್ರ ಜಡೇಜಾ ಪತ್ನಿ ಭರ್ಜರಿ ಗೆಲವು!


ಮಹಾರಾಷ್ಟ್ರದ ಸಂಸದರು ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ ಎನ್ನುವ ವಿಚಾರವನ್ನು ಮಾಧ್ಯಮದವರು ಪ್ರಸ್ತಾಪಿಸಿದ್ದಕ್ಕೆ ಉತ್ತರಿಸಿದ ಅವರು” ಅಹಮದಾಬಾದ್ ಹೋಗುತ್ತಿದ್ದೇನೆ ಗಡಿ ವಿಚಾರವನ್ನು ವರಿಷ್ಠರ ಜೊತೆಗೆ ಮಾತನಾಡುತ್ತೇನೆ.ನೆಲ, ಜಲ, ಗಡಿ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಆಗಲ್ಲ, ಯಾರು ಯಾರಿಗೆ ಬೇಕಾದರೂ ದೊರು ನೀಡಲಿ ಅದಕ್ಕೆ ನಮಗೆ ಸಂಬಂಧ ಇಲ್ಲ.ನಮ್ಮ ರಾಜ್ಯದ ಹಿತವನ್ನು ಕಾಪಾಡುವುದು ಮುಖ್ಯ. ಆ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ" ಎಂದು ಹೇಳಿದರು.


ಇದನ್ನೂ ಓದಿ : Assembly Election Result 2022 : ಗುಜರಾತ್‌ನಲ್ಲಿ 1985 ರ ಕಾಂಗ್ರೆಸ್‌ ದಾಖಲೆ ಮುರಿದ ಬಿಜೆಪಿ!


ಮೀಸಲಾತಿ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು ಮೀಸಲಾತಿಗೆ ಹಲವರು ಬೇಡಿಕೆ ಮಾಡ್ತಿದಾರೆ.ಮೀಸಲಾತಿ ಕೊಡಲು ಏನು ಸಾಧ್ಯವಿದೆಯೋ ಅದನ್ನೆಲ್ಲ ಮಾಡ್ತಿದ್ದೇವೆ.ಮುಂದೆ ನೋಡೋಣ, ಇವೆಲ್ಲ ಸಹಜವಾದ ಸಂಗತಿಗಳು ಎಂದು ಅವರು ಉತ್ತರಿಸಿದ್ದಾರೆ.


ಚುನಾವಣಾ ತಯಾರಿಗೆ ಬಗ್ಗೆ ಮಾತನಾಡಿದ ಅವರು” ನಮ್ಮ ಚುನಾವಣೆ ತಯಾರಿ ಚೆನ್ನಾಗಿದೆ.ನೂರಕ್ಕೆ ನೂರು 140 ಕ್ಕೂ ಹೆಚ್ಚು ಸ್ಥಾನಗಳನ್ನು ಇಲ್ಲಿ ಗೆಲ್ತೇವೆ.ಬಿಜೆಪಿಯ ನ್ನು ಮತ್ತೆ ಅಧಿಕಾರಕ್ಕೆ ತರ್ತೇವೆ ಎಂದು ಅವರು ಭರವಸೆಯನ್ನು ವ್ಯಕ್ತಪಡಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.