ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗಣೇಶ ಹಬ್ಬದ ಸಂಭ್ರಮ ಮುಂದುವರೆದಿದೆ. ಈ ಹಿನ್ನೆಲೆ ಇಂದು ಸಿಲಿಕಾನ್ ಸಿಟಿಯ ಕೆಲವು ಪ್ರಮುಖ ರಸ್ತೆಗಳು ಬಂದ್ ಆಗಲಿವೆ. 4 ಮತ್ತು 5ನೇ ದಿನ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಮಾಡಿದ ನಂತರ ವಿಸರ್ಜನೆ ಕಾರ್ಯ ನಡೆಯಲಿದೆ. ಇಂದು ಅತೀಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ಸಾಧ್ಯತೆ ಇರುವುದರಿಂದ ಕೆಲ ರಸ್ತೆಗಳನ್ನು ಪೊಲೀಸ್ ಇಲಾಖೆ ಬಂದ್ ಮಾಡಿಸಿದೆ.  


COMMERCIAL BREAK
SCROLL TO CONTINUE READING

ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆ ಕೆಲ ರೋಡ್‍ಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ. ವಾಹನ ಪ್ರಯಾಣಕ್ಕೆ ಪೊಲೀಸ್ ಇಲಾಖೆ ಬದಲಿ ರಸ್ತೆಗಳ ವ್ಯವಸ್ಥೆ ಮಾಡಿದೆ. ಪೂರ್ವ ವಿಭಾಗದ ಕೆಲ ಸಂಚಾರಿ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚಾರ ನಿರ್ಬಂಧವಿರಲಿದ. ನಾಗವಾರ ಜಂಕ್ಷನ್‍ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಭಾಗಶಃ ಸಂಚಾರ ಬಂದ್ ಆಗಲಿದೆ. ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಕೆಲವೆಡೆ ರಸ್ತೆಯ 2 ಬದಿಯಲ್ಲಿ ವಾಹನಗಳ ಪಾರ್ಕಿಂಗ್‌ ನಿರ್ಬಂಧಿಸಲಾಗಿದೆ. ವಾಹನ ಸವಾರರು ಸಹಕರಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.


ಇದನ್ನೂ ಓದಿ: ಈದ್ಗಾ ಮೈದಾನ ಬಳಿ ಮತ್ತೆ ಗಣೇಶ ಕೂರಿಸೋ ವಿಚಾರಕ್ಕೆ ಗಲಾಟೆ : ಹಿಂದೂ ಕಾರ್ಯಕರ್ತರು ಪೊಲೀಸ್‌ ವಶಕ್ಕೆ


ಯಾವೆಲ್ಲಾ ರಸ್ತೆಗಳು ಬಂದ್? & ಬದಲಿ ಮಾರ್ಗ  


ನಾಗವಾರ ಭಾಗ


  • ಥಣಿಸಂದ್ರ ಟು ಶಿವಾಜಿನಗರ ಜಂಕ್ಷನ್‌ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ನಾಗವಾರ ಜಂಕ್ಷನ್‌ನಿಂದ ಸಂಚಾರ

  • ಹೆಣ್ಣೂರು ಜಂಕ್ಷನ್-ಸಿದ್ದಪ್ಪ ರೆಡ್ಡಿ ಜಂಕ್ಷನ್-ಅಯೋಧ್ಯ ಜಂಕ್ಷನ್ ಲಿಂಗರಾಜಪುರಂ

  • ಐಟಿಸಿ ಫೈ ಓವರ್ ಮೂಲಕ ರಾಬರ್ಟ್‌ನ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಂಡು ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪಬಹುದು

  • ನಾಗವಾರ ಕಡೆ ಬರುವವರು ಹೀಗೆ ಬನ್ನಿ… ಶಿವಾಜಿನಗರದ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆ, ಕೋಲ್ಸ್ ರಸ್ತೆ,  ವೀಲರ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆ ಸಂಚರಿಸಲು ಅವಕಾಶ

  • ಆರ್.ಟಿ.ನಗರದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಪುಷ್ಪಾಂಜಲಿ ಟಾಕೀಸ್ ಬಳಿ ಎಡ ತಿರುವು ಪಡೆದು ವೀರಣ್ಣಪಾಳ್ಯ ಜಂಕ್ಷನ್‌ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.


ವಾಹನ ಪಾರ್ಕಿಂಗ್ ನಿರ್ಬಂಧಿಸಿರುವ ಸ್ಥಳಗಳು


  • ಪಾಟರಿ ಸರ್ಕಲ್‍ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್‍ನಿಂದ ಗೋವಿಂದಪುರ ಪೊಲೀಸ್ ಠಾಣೆಯವರೆಗೆ

  • ಹೆಚ್.ಬಿ.ಆರ್.ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‍ನಿಂದ ನರೇಂದ್ರ ಟೆಂಟ್, ಜಂಕ್ಷನ್‍ವರೆಗೆ ವಾಹನ ಸಂಚಾರ ನಿರ್ಬಂಧವಿರಲಿದೆ


ಇದನ್ನೂ ಓದಿ: ವೀರಾಧಿವೀರರೇ, ಸಿಡಿ ಶೂರರೇ, ಲಿಂಬಾವಳಿ ವಿರುದ್ಧ ನಿಮ್ಮ ಕ್ರಮ ಏನು..? : ಕಾಂಗ್ರೆಸ್‌ ಆಕ್ರೋಶ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.