ಕಲಬುರಗಿ: ಒಂದೆಡೆ ಇಂದಿನ ಯುವ ಪೀಳಿಗೆ ಯಾವುದೇ ಕೆಲಸವನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ. ಆದರೆ ಕಲಬುರಗಿಯ ರೈತ ಬಸವನಪ್ಪ ಪಾಟೀಲ್ ತಮ್ಮ 91 ನೇ ವಯಸ್ಸಿನಲ್ಲಿಯೂ ದಿನನಿತ್ಯ ಜಮೀನಿನಲ್ಲಿ ಕೆಲಸಮಾಡುತ್ತಾರೆ. ಅದುವೇ ಒಂದೆರಡು ತಾಸಲ್ಲ, ನಿತ್ಯ ಎಂಟು ಗಂಟೆಗಿಂತ ಹೆಚ್ಚು ಕೆಲಸ ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಈ ವಯಸ್ಸಿನಲ್ಲಿ ಜಮೀನಿನಲ್ಲಿ ಕೆಲಸ ಮಾಡುವ ಬಗ್ಗೆ ಮಾತನಾಡಿದ ಬಸವನಪ್ಪ ಪಾಟೀಲ್, ನಾನು ದಿನಾ ಬೆಳಿಗ್ಗ 10 ಗಂಟೆಯಿಂದ ಸಂಜೆ 6 ರವರೆಗೆ ಕೆಲಸ ಮಾಡುತ್ತೇನೆ. ಹೀಗಾಗಿಯೇ ನಾನು ಕಾಯಿಲೆಗಳಿಂದ ದೂರ ಇದ್ದೇನೆ ಎಂದು ತಮ್ಮ ಕೆಲಸದ ಬಗ್ಗೆ ಹೆಮ್ಮೆಯಿಂದ ನುಡಿದರು.


ಸರಳ ಜೀವನದ ಪ್ರಯೋಜನಗಳನ್ನು ಒತ್ತಿ ಹೇಳಿದ ಪಾಟೀಲ್ ಅವರು "ನಾನು ರೊಟ್ಟಿ ಮತ್ತು ಮೊಸರು ತಿನ್ನುತ್ತೇನೆ.  ಹಾಲು ಕುಡಿಯುತ್ತೇನೆ. ಬಹುಶಃ ನಾನು ಚಟುವಟಿಕೆಯಿಂದ ಇರುವುದರಿಂದಲೇ ಎಂದಿಗೂ ಅನಾರೋಗ್ಯಕ್ಕೆ ಒಳಗಾಗಿಲ್ಲ" ಎಂದರು.


"ಬಸವನಪ್ಪ ಪಾಟೀಲ್, ತಮಗೆ ಆರು ಜನ ಮಕ್ಕಳಿದ್ದಾರೆ. ಆದರೆ ಅವರ್ಯಾರೂ ಕೃಷಿಯಲ್ಲಿ ತೊಡಗಿಲ್ಲ" ಎಂದು ಮಾಹಿತಿ ನೀಡಿದರು.


ನೀವು ಯುವಕರಿಗೆ ಏನು ಸಂದೇಶ ನೀಡಲು ಬಯಸುವಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವನಪ್ಪ ಪಾಟೀಲ್ 'ಇಂದಿನ ಯುವ ಜನತೆ ಯಾರ ಮಾತನ್ನೂ ಕೇಳಿಸಿಕೊಳ್ಳುವುದಿಲ್ಲ' ಎಂದರು.


[With ANI Inputs]