ಬೆಂಗಳೂರು: 'ಪ್ರಧಾನಮಂತ್ರಿ ಮಾತೃತ್ವ ವಂದನಾ ಯೋಜನೆ' ಅಡಿಯಲ್ಲಿ, ಮೊದಲ ಬಾರಿಗೆ ಗರ್ಭಧರಿಸುವ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು 'ಪ್ರಧಾನ ಮಂತ್ರಿ ಗರ್ಭಾವಸ್ಥೆಯ ಸಹಾಯ ಯೋಜನೆ' ಎಂದೂ ಕರೆಯಲಾಗುತ್ತದೆ.


COMMERCIAL BREAK
SCROLL TO CONTINUE READING

ಮಾತೃವಂದನಾ ಯೋಜನೆ ಅಡಿ ಮೊದಲನೇ ಮಗುವಿಗೆ ಎರಡು ಕಂತುಗಳಲ್ಲಿ 5 ಸಾವಿರ ಹಣವನ್ನು ಹಾಗೂ ಎರಡನೇ ಹೆಣ್ಣು ಮಗುವಿಗೆ ಒಂದೇ ಕಂತಿ ನಲ್ಲಿ ಆರು ಸಾವಿರ ಹಣವನ್ನು ಪಡೆಯಬಹುದಾಗಿದೆ.


ತಾಯಿಯ ಆರೋಗ್ಯ ವರ್ಧನೆ ಹಾಗೂ ಪೂರಕ ಆಹಾರಕ್ಕಾಗಿ, ಆರೋಗ್ಯವಂತ ಮಗುವಿನ ಜನನಕ್ಕಾಗಿ ಸರ್ಕಾರದ ವತಿಯಿಂದ ನೀಡುವಂತಹ ಪ್ರೋತ್ಸಾಹ ಧನವಾಗಿರುತ್ತದೆ.ಈ ಮೊತ್ತವನ್ನು ನೇರ ನಗದು ವರ್ಗಾವಣೆಯ ಮೂಲಕ ಫಲಾನುಭವಿಯ ಆಧಾರ್ ನೋಂದಣಿಯಾದ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುವುದು.


ಇದನ್ನೂ ಓದಿ- ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳ ಆಹ್ವಾನ


ಈ ಸೌಲಭ್ಯವನ್ನು ಪಡೆಯಲು ಸರ್ಕಾರಿ ನೌಕರಳಲ್ಲದ ಗರ್ಭಿಣಿ ಮಹಿಳೆಯು ಅಂಗನವಾಡಿ ಕಾರ್ಯಕರ್ತೆಯನ್ನು 180 ದಿನಗಳೊಳಗೆ ಸಂಪರ್ಕಿಸಲು ಹಾಗೂ ಎರಡನೇ ಹೆಣ್ಣು ಮಗುವಿನ ಸೌಲಭ್ಯ ಪಡೆಯಲು ಮಗು ಜನಿಸಿದ ಮೂರು ಅಂಗನವಾಡಿ ಕಾರ್ಯಕರ್ತೆಯನ್ನು ಸಂಪರ್ಕಿಸಬಹುದು.


ಅಂಗನವಾಡಿ ಕಾರ್ಯಕರ್ತೆಯರಿಗೆ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಪೋನ್ ಮುಖಾಂತರ ಸ್ಥಳದಲ್ಲೇ ಅರ್ಜಿ ನೋಂದಣಿ ಮಾಡಲಾಗುತ್ತದೆ. ಆ ದಿಸೆಯಲ್ಲಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಕಾರ್ಡ್ ಮತ್ತು ಮಗುವಿನ ಲಸಿಕೆಯ ಮಾಹಿತಿಯ ಪ್ರತಿ, ಫಲಾನುಭವಿಗಳ ಆಧಾರ್ ಕಾರ್ಡ್ ಪ್ರತಿ, ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ನೋಂದಣಿ ಆಗಿರಬೇಕು.


ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನರೇಗಾ ಕಾರ್ಡ್, ಈಶ್ರಮ್ ಕಾರ್ಡ್, ಆಯುಷಮಾನ್ ಕಾರ್ಡ್ ಯಾವುದಾದರೂ ಒಂದು ಪ್ರತಿಯನ್ನು ನೀಡಬೇಕಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.