Basavaraj Bommai : ಅಂತರ ರಾಜ್ಯ ಪ್ರಯಾಣಿಕರಿಗೆ `ಕೋವಿಡ್ ನೆಗೆಟಿವ್` ಕಡ್ಡಾಯ!
ನಾವು ವಿಶೇಷವಾಗಿ ರಾಜ್ಯದ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ಬೆಂಗಳೂರಿನ ಆನೇಕಲ್ (ತಮಿಳುನಾಡಿನ ಗಡಿ) ಮತ್ತು ಮಂಗಳೂರು (ಕೇರಳದ ಗಡಿ) ಬಳಿ ನಿರ್ಬಂಧಗಳನ್ನು ಹೇರಿದ್ದೇವೆ` ಎಂದರು.
ಬೆಂಗಳೂರು : ಅಂತರ ರಾಜ್ಯದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ(Basavaraj Bommai), ನಾವು ಪ್ರಮುಖ ರಸ್ತೆಗಳನ್ನು ಮಾತ್ರವಲ್ಲದೆ ಕಳೆದ ಬಾರಿ ಮಾಡಿದಂತೆ ಸಣ್ಣ ರಸ್ತೆಗಳನ್ನು ಸಹ ಬ್ಯಾರಿಕೇಡ್ ಮೂಲಕ ಬಂದ್ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ : Karnataka Govt : ಚಾಮರಾಜನಗರ ಆಕ್ಸಿಜನ್ ದುರಂತ : ಸರ್ಕಾರದಿಂದ ಸಂತ್ರಸ್ತರಿಗೆ ₹ 2 ಲಕ್ಷ ಪರಿಹಾರ!
ನಾವು ವಿಶೇಷವಾಗಿ ರಾಜ್ಯದ ಗಡಿ(State Borders) ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ಬೆಂಗಳೂರಿನ ಆನೇಕಲ್ (ತಮಿಳುನಾಡಿನ ಗಡಿ) ಮತ್ತು ಮಂಗಳೂರು (ಕೇರಳದ ಗಡಿ) ಬಳಿ ನಿರ್ಬಂಧಗಳನ್ನು ಹೇರಿದ್ದೇವೆ' ಎಂದರು.
ಇದನ್ನೂ ಓದಿ : Sadananda Gowda : ಬ್ಲಾಕ್ ಫಂಗಸ್ ಸೋಂಕಿಗೆ ರಾಜ್ಯಕ್ಕೆ 1,600 ಬಾಟಲಿ ಔಷಧಿ..!
ಕೇಂದ್ರದ ನಿರ್ದೇಶನದಂತೆ, ಅಂತರ ರಾಜ್ಯ ಪ್ರಯಾಣಿಕರು ಕರ್ನಾಟಕ(Karnataka)ವನ್ನು ಪ್ರವೇಶಿಸಬೇಕಾದರೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಹೇಳಿದ್ದಾರೆ.
ಇದನ್ನೂ ಓದಿ : Heavy Rainfall : ರಾಜ್ಯದಲ್ಲಿ ಮೇ 25 ರವರೆಗೆ ಗುಡುಗು ಸಿಡಿಲು ಸಹಿತ ಭಾರೀ ಮಳೆ : ಹವಾಮಾನ ಇಲಾಖೆ
ಕೋವಿಡ್(Covid-19) ಹರಡುವುದನ್ನು ನಿಯಂತ್ರಿಸಲು ಜಿಲ್ಲೆಗಳಲ್ಲಿ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಹೇರುವಂತೆ ಪೊಲೀಸರು ಸೇರಿದಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿಲಾಗಿದೆ. ಲಾಕ್ ಡೌನ್ ಗೆ ಬದ್ಧರಾಗಿರಬೇಕು ಎಂದು ಅವರು ಜನರಿಗೆ ಮನವಿ ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.