ಸಂವಿಧಾನ ಬದಲಿಸುತ್ತೇವೆ ಎನ್ನುವವರಿಗೆ ಮಾನಸಿಕ ಚಿಕಿತ್ಸೆ ಅಗತ್ಯ-ಅಣ್ಣಾ ಹಜಾರೆ
ಭಾರತದ ಸಂವಿಧಾನವನ್ನು ಬದಲಿಸುತ್ತೇವೆ ಎನ್ನುವವರಿಗೆ ಮಾನಸಿಕ ಚಿಕಿತ್ಸೆ ನೀಡಬೇಕಾಗಿದೆ ಎಂದು ಗಾಂಧಿವಾದಿ ಮತ್ತು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಭಾರತದ ಸಂವಿಧಾನವನ್ನು ಬದಲಿಸುತ್ತೇವೆ ಎನ್ನುವವರಿಗೆ ಮಾನಸಿಕ ಚಿಕಿತ್ಸೆ ನೀಡಬೇಕಾಗಿದೆ ಎಂದು ಗಾಂಧಿವಾದಿ ಮತ್ತು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇತ್ತೀಚೆಗೆ ಕೇಂದ್ರ ಮಂತ್ರಿ ಅನಂತಕುಮಾರ್ ಹೆಗಡೆಯವರು ಹೇಳಿದ ಸಂವಿಧಾನ ಬದಲಾವಣೆ ಕುರಿತಾದ ಧೋರಣೆಯನ್ನು ಖಂಡಿಸಿದ ಹಜಾರೆ ಭಾರತದದೇಶವು ಸಂವಿಧಾನದ ಆಶಯಗಳ ಮೇಲೆ ನಿಂತಿದೆ.ಆದ್ದರಿಂದಲೇ ಇಂದು ಎಲ್ಲ ಸರ್ಕಾರಗಳು ಅದಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ.ಆದ್ದರಿಂದ ಇಲ್ಲಿ ಸಂವಿಧಾನವನ್ನು ಬದಲಿಸುತ್ತೇವೆ ಎನ್ನುವ ಹೇಳಿಕೆಗಳು ನಗಣ್ಯವೆಂದು ಕೇಂದ್ರ ಸಚಿವರ ಮೇಲೆ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಮೋದಿ ಸರ್ಕಾರದ ನೋಟು ಬದಲಾವಣೆ ಪದ್ದತಿಯನ್ನು ಕಟುವಾಗಿ ಟೀಕಿಸಿದ ಹಜಾರೆ ಈ ನೋಟು ಬದಲಾವಣೆಯಿಂದ ಯಾವುದೇ ರೀತಿಯಿಂದ ಜನರಿಗೆ ಉಪಯೋಗವಾಗಿಲ್ಲ ಮತ್ತು ಭ್ರಷ್ಟಾಚಾರ ಕಡಿಮೆಯಾಗಿಲ್ಲ ,ಮತ್ತು ಅದನ್ನು ಕಡಿಮೆ ಮಾಡುವಲ್ಲಿ ಹೊರಟ ನರೇಂದ್ರ ಮೋದಿಯವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು