ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆರೆಯೊಂದರಲ್ಲಿ ಮೀನುಗಳ ಮಾರಣ ಹೋಮವಾಗಿದೆ. ಕಳೆದು ಎರಡು ದಿನಗಳಿಂದ ಸಾವಿರಾರು ಮೀನುಗಳು ಸಾವನ್ನಪ್ಪುತ್ತಿವೆ. ಕನಕ‌ಪುರ ರಸ್ತೆಯ ಕುಪ್ಪಾರೆಡ್ಡಿ ಕೆರೆಯಲ್ಲಿ ಮೀನುಗಳ ಮಾರಣ ಹೋಮವಾಗುತ್ತಿದ್ದು, ಇದಕ್ಕೆಲ್ಲಾ ಕಾರಣ ಕೆಮಿಕಲ್ ನೀರಿನ ಮಿಶ್ರಣ ಎಂದು ಸ್ಥಳೀಯ ದೂರಿದ್ದಾರೆ.


COMMERCIAL BREAK
SCROLL TO CONTINUE READING

ಸ್ವಚ್ಚಂದದಿಂದ ಜೀವನ ನಡೆಸುತ್ತಿದ್ದ ಮೀನುಗಳಿಗೆ ಇದೀಗ ಸಾವು ಎದುರಾಗಿದ್ದು, ಸ್ಥಳೀಯ ಅಧಿಕಾರಿಗಳ ಬೇಜವಬ್ದಾರಿಗೆ ಇದೆಲ್ಲಾ ಕಾರಣ ಎನ್ನಲಾಗ್ತಿದೆ. ಪ್ರತಿ ವರ್ಷಕ್ಕೊಮ್ಮೆ ಆದರೂ ಕೆರೆ, ಪರಿಸರ ಸಂರಕ್ಷಣೆ ಸಂಬಂಧ ವೀಕ್ಷಣೆಗೆ ಅಧಿಕಾರಿಗಳು ಬರಬೇಕು. ಆದ್ರೆ ಯಾರೊಬ್ಬರೂ ಇತ್ತ ಸುಳಿಯುವುದೇ ಇಲ್ಲ ಎಂದು ಆರೋಪಿಸಲಾಗ್ತಿದೆ.


ಇದನ್ನೂ ಓದಿ: ಬಿಜೆಪಿ ಸರ್ಕಾರದ 40% ಕಮೀಷನ್ ಭ್ರಷ್ಟಾಚಾರ ನಿಸರ್ಗದಿಂದಲೇ ಬಯಲು: ಕಾಂಗ್ರೆಸ್


ಅಲ್ಲದೇ ಈ ಕುಪ್ಪಾರೆಡ್ಡಿ ಕೆರೆ ಸಾಕಷ್ಟು ವರ್ಷಗಳ ಇತಿಹಾಸವಿದೆ.‌ ಇದುವರೆಗೂ ಯಾವುದೇ ರೀತಿ ಸಮಸ್ಯೆ ಇರಲಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ತ್ಯಾಜ್ಯ ತಂದು ಸುರಿಯಲಾಗ್ತಿದೆ. ಇಷ್ಟೆಲ್ಲಾ ಆಗ್ತಿದ್ರೂ ಸ್ಥಳೀಯ ಪ್ರತಿನಿಧಿ ಆಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.