ಬೆಂಗಳೂರು: ದೇಶದಲ್ಲೆಡೆ ಓಮಿಕ್ರಾನ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲ್ಲೆಯಲ್ಲಿ ಅನೇಕ ರಾಜ್ಯಗಳು ಈಗ ಕೊರೊನಾ ನಿರ್ಬಂಧ ಕ್ರಮಕ್ಕೆ ಮುಂದಾಗಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Paytm New Cash Back Offer: ಪ್ರಿ-ಪೇಯ್ಡ್ ಪ್ಲಾನ್ ರೀಚಾರ್ಜ್‌ನಲ್ಲಿ 1000 ರೂ.ವರೆಗೆ ಕ್ಯಾಶ್ ಬ್ಯಾಕ್ ಪಡೆಯಿರಿ


ಅದರಲ್ಲಿ ಈಗ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಆಚರಣೆ ಹಿನ್ನಲೆಯಲ್ಲಿ ಜನ ಸಂದಣಿ ಹೆಚ್ಚಾಗುವುದರ ಆಪಾಯದ ಹಿನ್ನಲೆಯಲ್ಲಿ ಈಗ ಬೆಂಗಳೂರು ಪೋಲಿಸ್ ಆಯುಕ್ತ ಕಮಲ್ ಪಂತ್ ಅವರು ಸಾರ್ವಜನಿಕವಾಗಿ ಹೊಸ ಆಚರಣೆಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.


ಈಗ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಮಾರ್ಗಸೂಚಿಗಳನ್ನು ನೀಡಿದ್ದಾರೆ ಅದರ ಪ್ರಕಾರ ಎಲ್ಲವೂ ನಡೆಯಲಿದೆ. ಪಬ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಶೇ 50 ರಷ್ಟು ಸ್ಥಳಾವಕಾಶದೊಂದಿಗೆ ತೆರೆಯಲಿವೆ.ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.


ಇದನ್ನೂ ಓದಿ-ಡಿ.1ರೊಳಗೆ ಈ ಮಹತ್ವದ ಕೆಲಸ ಪೂರ್ಣಗೊಳಿಸಿ: ಸರ್ಕಾರದಿಂದ 7 ಲಕ್ಷ ರೂ. ಸಿಗಲಿದೆ


ಕಳೆದ ವರ್ಷದಂತೆ ಈ ಬಾರಿಯೂ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಲಿದೆ, ಅನಾವಶ್ಯಕ ಓಡಾಟ ಸುತ್ತಾಟಕ್ಕೆ ನಗರದಲ್ಲಿ ಅವಕಾಶ ಇರಲ್ಲ ಪೊಲೀಸ್ ಇಲಾಖೆ ಕಳೆದ ಬಾರಿಯಂತೆ ಈ ಬಾರಿಯೂ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಪೋಲಿಸ್ ಆಯುಕ್ತರು ಹೇಳಿದ್ದಾರೆ.


ಜನರನ್ನ ನಿಯಂತ್ರಿಸಲು ಬೆಂಗಳೂರಿನಲ್ಲಿ ಡಿ. 30, 31 ಜ.1 ರಂದು ನೈಟ್ ಕರ್ಫ್ಯೂ ಸಾಧ್ಯತೆ ಇದೆ ಎನ್ನಲಾಗಿದೆ, ಒಂದು ವೇಳೆ ನೈಟ್ ಕರ್ಪ್ಯೂ ಜಾರಿಯಾದಲ್ಲಿ ಐಪಿಸಿ ಸೆಕ್ಷನ್ 144 ಅಡಿಯಲ್ಲ್ಲಿ ನಿಷೇದಾಜ್ಞೆ ಜಾರಿಗೆ ಬರಲಿದೆ.


ಇದನ್ನೂ ಓದಿ-ಡಿ.1ರೊಳಗೆ ಈ ಮಹತ್ವದ ಕೆಲಸ ಪೂರ್ಣಗೊಳಿಸಿ: ಸರ್ಕಾರದಿಂದ 7 ಲಕ್ಷ ರೂ. ಸಿಗಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.