ಬೆಂಗಳೂರು: ಡಿ. 31 ರ ರಾತ್ರಿ ನಗರದ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆಯಬೇಕಿದ್ದ ಸನ್ನಿ ನೈಟ್ ಕಾರ್ಯಕ್ರಮಕ್ಕೆ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ. ಅಲ್ಲದೇ, ಮೂರು ಕಾರಣಗಳನ್ನು ಆಧರಿಸಿ ಸನ್ನಿ ನೈಟ್ ಕಾರ್ಯಕ್ರಮವನ್ನು ನಿರಾಕರಿಸಲಾಗಿದೆ  ಎಂದು ಅವರು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಸನ್ನಿ ನೈಟ್ ಕಾರ್ಯಕ್ರಮ ನಿರಾಕರಣೆಗೆ ಕಾರಣವಾದ ಮೂರು ಮುಖ್ಯ ಅಂಶಗಳು...


* ಸನ್ನಿ ನೈಟ್ ಕಾರ್ಯಕ್ರಮಕ್ಕಾಗಿ ಸ್ಥಳೀಯ ಪ್ರಾಧಿಕಾರದಿಂದಾಗಲೀ ಅಥವಾ ಸಂಬಂಧಿಸಿದ ಇಲಾಖೆಯಿಂದಾಗಲೀ ಅನುಮತಿ ಪಡೆದಿಲ್ಲ.
* ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸ್ಪಷ್ಟ ವಿವರಣೆ ನೀಡಿಲ್ಲ.
* ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಅವಶ್ಯಕತೆ ಇದೆ. ಆಯೋಜಕರು ಕಾರ್ಯಕ್ರಮಕ್ಕೆ ಎಂಟು ಸಾವಿರ ಟಿಕೇಟ್ಗಳನ್ನು ಮಾತ್ರ ಕೊಡುವುದಾಗಿ ಹೇಳಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚು ಜನ ಸೇರೋ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. 


ಈ ಎಲ್ಲಾ ಕಾರಣಗಳಿಂದಾಗಿ ಸನ್ನಿ ನೈಟ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.