ಬೆಂಗಳೂರು:  ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ತನಿಖೆಗಾಗಿ ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಎಸಿಪಿ ಪ್ರಕಾಶ್, ನಿರಂಜನ ಅರಸ್ ಹಾಗು ಎಸಿಪಿ ವೇಣುಗೋಪಾಲ ನೇತ್ರತ್ವದಲ್ಲಿ ತಂಡಗಳು ರಚನೆಗೊಂಡಿದೆ. ಐದು ಮಂದಿ ಇನ್ಸ್‌ಪೆಕ್ಟರ್ಗಳು, ಆರು ಮಂದಿ ಸಬ್ ಇನ್ಸ್‌ಪೆಕ್ಟರ್ಗಳನ್ನು ತನಿಖೆಗಾಗಿ ನೇಮಕ ಮಾಡಲಾಗಿದೆ ಹಾಗೂ 20 ಮಂದಿ ಕ್ರೈಂ ಪೇದೆಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ ಎಂದು ಪೋಲೀಸ್ ಆಯುಕ್ತರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಹಿರಿಯ ಪತ್ರಕರ್ತೆಯ ಹತ್ಯೆ ತನಿಖೆಯನ್ನು ಚುರುಕುಗೊಳಿಸಿರುವ ಮೂರು ವಿಶೇಷ ತಂಡಗಳು ಮೊಬೈಲ್ ಕರೆಗಳ ಲೋಕೇಷನ್ ಪರಿಶೀಲನೆ ನಡೆಸಿವೆ. ಗೌರಿ ಲಂಕೇಶ್ ಅವರ ಮನೆ ಹಾಗೂ ಸುತ್ತಮುತ್ತಲಿನ ಮೊಬೈಲ್ ಟವರ್ ಕರೆಗಳ ಪರಿಶೀಲನೆ ನಡೆಸಲಾಗಿದ್ದು, ರಾತ್ರಿ ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ವ್ಯಾಪ್ತಿಯ ಕರೆಗಳ ಪರಿಶೀಲನೆಯನ್ನೂ ಸಹ ನಡೆಸಿವೆ.  


ಮತ್ತೊಂದು ತನಿಖಾ ತಂಡದಿಂದ ನೆರೆಹೊರೆಯವರ ವಿಚಾರಣೆ ಬಿರುಸಿನಿಂದ ಸಾಗಿದ್ದು ಘಟನೆ ನಡೆದ ಸಂದರ್ಭದಲ್ಲಿ ಬಂದ ಸುತ್ತಮುತ್ತಲಿನ ನಿವಾಸಿಗಳಿಂದ ಹಾಗೂ ಮನೆಯಲ್ಲಿದ್ದ ಕೆಲಸದವರಿಂದಲೂ ಮಾಹಿತಿ ಕಲೆ ಹಾಕಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೌರಿ ಲಂಕೇಶ್ ಬಳಸುತ್ತಿದ್ದ ಮೊಬೈಲ್ ಹಾಗೂ ಮನೆ ಕೆಲಸದವರ ಮೊಬೈಲ್ ವಶಕ್ಕೆ ಪಡೆದು ರಾತ್ರಿಯಿಂದಲೇ ಪರಿಶೀಲನೆ ನಡೆಸಲಾಗಿದೆ. 


ಗೌರಿ ಲಂಕೇಶ್ ಹತ್ಯೆಗೈದಿರುವ ಆರೋಪಿಗಳು ಬಳಕೆ ಮಾಡಿದ್ದ ಬೈಕ್ ಪತ್ತೆ ಹಚ್ಚುತ್ತಿರುವ ಪೊಲೀಸರು ರಾತ್ರಿ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಪರಿಶೀಲನೆ ನಡೆಸಿದ್ದಾರೆ. ನಗರದಿಂದ ಹೊರಹೋಗುತ್ತಿರುವ ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಿ ನಂತರ ಬಿಡಲಾಗುತ್ತಿದೆ. ಪ್ರಮುಖವಾಗಿ ಮೈಸೂರು ರಸ್ತೆ ಹಾಗೂ ನೈಸ್ ರಸ್ತೆಯಲ್ಲಿ ರಾತ್ರಿಯಿಡಿ ಪೋಲಿಸರಿಂದ ಕಾರ್ಯಾಚರಣೆ ನಡೆಲಾಗಿದೆ ಜೊತೆಗೆ ಮೈಸೂರು ರಸ್ತೆ ಹಾಗೂ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಿಸಿಟಿವಿಗಳನ್ನು ಪರಿಶೀಲಿಸಲಾಗಿತ್ತಿದೆ ಎಂದು ಪೋಲೀಸ್ ಇಲಾಖೆ ತಿಳಿಸಿದೆ. ಹಂತಕರು ಬೆಂಗಳೂರು ನಗರದಲ್ಲೆ ಉಳಿದಿರುವ ಸಾದ್ಯತೆ ಇದೆ ಎಂದೂ ಸಹ ಇಲಾಖೆ ಅನುಮಾನ ವ್ಯಕ್ತಪಡಿಸಿದೆ.


ತಾಂತ್ರಿಕ ಅಂಶಗಳ ಆಧಾರದ ಮೇಲೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರಿಗೆ ಸಿಸಿಟಿವಿ ಫೋಟೇಜೇಗಳು ಮುಖ್ಯ ಅಧಾರವಾಗಿವೆ. ಗೌರಿ ಲಂಕೇಶ್ ಅವರ ಮನೆಯ ಸಿಸಿಟಿವಿ ಫೋಟೇಜ್ ನಲ್ಲಿ ಘಟನೆಯ ಭೀಕರ ದೃಶ್ಯಗಳು ಸೆರೆಯಾಗಿವೆ. ಮನೆಯ ಸಿಸಿಟಿವಿ ಹೊರತು ಪಡಿಸಿ, ಏರಿಯಾದ ಅಗತ್ಯ ಸಿಸಿಟಿವಿ ಫೂಟೇಜ್ ವಶಕ್ಕೆ ತೆಗೆದುಕೊಂಡಿರೋ ತನಿಖಾ ತಂಡ ದುಷ್ಕರ್ಮಿಗಳನ್ನು ಕಂಡ ಕೂಡಲೇ ಗಾಬರಿಯಾಗಿರುವ ಗೌರಿ ಲಂಕೇಶ್, ಹಂತಕರ ಕೈಯಲ್ಲಿದ್ದ ಪಿಸ್ತೂಲ್ ಕಂಡು ಭೀತಿಗೊಳಗಾಗಿದ್ದು, ಇದೇ ವೇಳೆ ಗೌರಿ ಲಂಕೇಶ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಕೆಲವೇ ಕ್ಷಣಗಳಲ್ಲಿ ಗೌರಿ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿರುವ ದೃಶ್ಯವು ಸಿಸಿಟಿವಿಯಲ್ಲಿ ದೊರೆತಿದೆ ಎಂದು ತಿಳಿಸಿದೆ. 


ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿರುವುದು ಒಬ್ಬ ಆಗಂತುಕ ಮಾತ್ರ, ಗೌರಿ ಲಂಕೇಶ್ ಗೇಟ್ ತೆಗೆಯುತ್ತಿದ್ದಂತೆ ಗುಂಡು ಹಾರಿಸಿದ ಕಿಡಿಗೇಡಿ ತಪ್ಪಿಸಿಕೊಳ್ಳಲು ಮನೆ ಒಳಗೆ ಓದಲು ಪ್ರಯತ್ನಿಸಿದ್ದಾನೆ ಹಾಗೂ ಗೌರಿ ಲಂಕೇಶ್ ಕುಸಿದು ಬೀಳುತ್ತಿದ್ದ ಹಾಗೆ ಹತ್ತಿರಕ್ಕೆ ಬಂದು ಗೌರಿಯ ಎದೆಗೆ ದುಷ್ಕರ್ಮಿ ಗುಂಡಿಕ್ಕಿ ಕೊಳ್ಳುತ್ತಿರುವ ಇಷ್ಟೂ ದೃಶ್ಯಗಳು  ಗೌರಿ ಲಂಕೇಶ್ ಮನೆಯ ಸಿಸಿಟಿವಿಯಲ್ಲಿ ಎಂದು ತನಿಖಾ ತಂಡ ತಿಳಿಸಿದೆ.


ಆಗಂತುಕ ಹೆಲ್ಮೆಟ್ ಧರಿಸಿ ಬಂದು ಗುಂಡು ಹಾರಿಸಿರೋದು ಪತ್ತೆಯಾಗಿದ್ದು, ಎರಡು ಡಿಯೋ ಬೈಕ್ ನಲ್ಲಿ ಬಂದ ಆಗಂತಕರಿಂದ ಕೃತ್ಯ ನಡೆದಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಘಟನೆ ವೇಳೆ ವಿದ್ಯುತ್ ಕಡಿತದ ಹಿನ್ನೆಲೆಯಲ್ಲಿ ಸರಿಯಾಗಿ ಚಿತ್ರೀಕರಣಗೊಂಡಿಲ್ಲ ಎಂದಿರುವ ತನಿಖಾ ತಂಡ, ಕಿಡಿಗೇಡಿಗಳು ಎರಡು ಅಡಿ ಅಂತರದಲ್ಲಿ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸುಮಾರು 8- 10 ಅಡಿ ಶೂಟ್ ಮಾಡಿ ಆ ತಕ್ಷಣವೇ ಸ್ಥಳದಿಂದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಂತಕರ ಮುಖ ಸ್ಪಷ್ಟವಾಗಿ ಕಾಣದೆ ಇರುವುದು ಪೋಲೀಸರ ತನಿಖೆಗೆ ದೊಡ್ಡ ಸವಾಲಾಗಿದೆ ಎಂದು ತಂಡ ಹೇಳಿದೆ. 


ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ತನಿಖೆಗೆ ಸಂಬಂಧ ಪಟ್ಟಂತೆ ಗೌರಿ ಲಂಕೇಶ್ ತಮ್ಮ ಕಚೇರಿಯಿಂದ ಮನೆಗೆ ಹೊರಟಿರುವ ಮಾರ್ಗದ ಸಿಸಿ ಟಿವಿ ದೃಶ್ಯಗಳನ್ನು ಸಂಗ್ರಹ ಮಾಡಿರುವ ತನಿಖಾ ತಂಡ ಗಾಂಧಿಬಜಾರ್ ನಿಂದ ಆರ್ ಆರ್ ನಗರದ ತಮ್ಮ ಮನೆಗೆ ಹೋಗಿರುವ ಮಾರ್ಗದ ಎಲ್ಲಾ ಸಿಸಿ ಟಿವಿಗಳ ಪರಿಶೀಲನೆ ನಡೆಸುತ್ತಿದೆ. ನೆನ್ನೆ ಸಂಜೆ 6:30ಕ್ಕೆ ಕಚೇರಿಯಿಂದ ಮನೆಗೆ ಹೊರಟಿದ್ದ ಗೌರಿ ಲಂಕೇಶ್ ರನ್ನು ಮಾರ್ಗ ಮದ್ಯೆ ಯಾರಾದರು ಹಿಂಬಾಲಿಸಿದ್ದಾರೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದೆ.


ಹಂತಕರು ಗೌರಿ ಲಂಕೇಶ್ ಮನೆ ಪತ್ತೆ ಹಚ್ಚಲು ಸ್ಥಳೀಯರ ಮಾಹಿತಿ ಪಡೆದಿರುವ ಶಂಕೆ ವ್ಯಕ್ತ ಪಡಿಸಿರುವ ಶಂಕೆ ಆಧಾರದ ಮೇಲೆ ಕೆಲವರ ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಆರ್ ಆರ್ ನಗರದ ಕೆಲವು ಅಪರಾಧ ಹಿನ್ನೆಲೆಯುಳ್ಳವರನ್ನು ವಿಚಾರಣೆಗೆ ಒಳಪಡಿಸಿದ್ದು 9 ಜನ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.