ಬಳ್ಳಾರಿ: ಖ್ಯಾತ ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್‍ಅನ್ನು ಪುಂಡರು ಹೊಡೆದು ಹಾಕಿದ್ದಾರೆ. ಶನಿವಾರ ರಾತ್ರಿ ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಈ ಘಟನೆ ನಡೆದಿದೆ.  


COMMERCIAL BREAK
SCROLL TO CONTINUE READING

ಬಳ್ಳಾರಿ ಉತ್ಸವದ ಹಿನ್ನೆಲೆ ಕಾರ್ಯಕ್ರಮಕ್ಕೆ ಸಿಂಗರ್ ಮಂಗ್ಲಿ ಬಂದಿದ್ದರು. ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೇದಿಕೆ ಮೇಲೆ ಹಾಡುಗಳನ್ನು ಹೇಳಿ ವಾಪಸ್ ತೆರಳುವಾಗ ಮಂಗ್ಲಿ ನೋಡಲು ಯುವಕರು ಮುಗಿಬಿದ್ದಿದ್ದರು.


ಇದನ್ನೂ ಓದಿ: Bengaluru Student Murder :ʼನನ್ನ ಲವ್‌ ಮಾಡಿ ಇನ್ನೊಬ್ಬನ ಜೊತೆ ಓಡಾಡಿದ್ರೆ ಬಿಟ್ಬಿಡಬೇಕಾ ಸರ್..!ʼ


ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್‍ಗೆ ನುಗ್ಗಿದ ಪುಂಡರು ದಾಂಧಲೆ ನಡೆಸಿದ್ದರು. ಕೂಡಲೇ ಪೋಲಿಸರಿಂದ ಲಘು ಲಾಟಿ ಪ್ರಹಾರ ನಡೆದಿದೆ. ಆ ವೇಳೆ ಮಂಗ್ಲಿ ಹೋಗುತ್ತಿದ್ದ ಕಾರಿಗೆ ಪುಂಡರು ಕಲ್ಲು ಎಸೆದು ದುರ್ವರ್ತನೆ ತೋರಿದ್ದಾರೆ.


ಬಳ್ಳಾರಿ ಉತ್ಸವದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಸೇರಿದಂತೆ ಹಲವು ಕಲಾವಿದರು ಭಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ಇದನ್ನೂ ಓದಿ: ಆರೋಗ್ಯಯುತ ಜೀವನಕ್ಕೆ ಯೋಗಾಸನ ರಹದಾರಿ: ಸಚಿವ ಆರ್.ಅಶೋಕ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.