ಬೆಂಗಳೂರು: ಬೇಸಿಗೆಯ ಬಿರು ಬಿಸಿಲಿನ ಮಧ್ಯ ರಾಜ್ಯದ ಹಲವಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ.  ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಬುಧವಾರ ಮಧ್ಯಾಹ್ನದಿಂದ ಭಾರೀ ಮಳೆಯಾಗಿದೆ.


COMMERCIAL BREAK
SCROLL TO CONTINUE READING

ಭಾರತ ಹವಾಮಾನ ಇಲಾಖೆ (India Meteorological Department) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಸೆಲ್ (ಕೆಎಸ್‌ಎನ್‌ಡಿಎಂಸಿ) ಹೇಳಿರುವ ಪ್ರಕಾರ,  ಮುಂದಿನ ನಾಲ್ಕು ದಿನಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ, ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳಾಂಗಣದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಗಾಳಿ  30 ರಿಂದ 40 ಕಿ.ಮೀ ವೇಗದಲ್ಲಿದೆ. 


ಇದನ್ನೂ ಓದಿ: 2021ರಲ್ಲಿ ಇದೆ ಮೊದಲ ಭಾರಿ ರಾಜ್ಯದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು..!


ಈ ಕುರಿತು ಮಾತನಾಡಿರುವ ಐಎಂಡಿ ಬೆಂಗಳೂರಿನ ನಿರ್ದೇಶಕ ಜಿಎಸ್ ಪಾಟೀಲ್(GS Patil), ಕರ್ನಾಟಕದ ಉತ್ತರ ಒಳ ಭಾಗದ ಮೇಲೆ ಚಂಡಮಾರುತದ ಮೇಲ್ಭಾಗದ ವಾಯು ಪರಿಚಲನೆ ವ್ಯವಸ್ಥೆಯು ಸಮುದ್ರ ಮಟ್ಟದಿಂದ 1.5 ಕಿ.ಮೀ.ವರೆಗೆ ವಿಸ್ತರಿಸಿದೆ. ಹಾಸನ, ಶಿವಮೊಗ್ಗ, ಚಿಕ್ಕಮಂಗಳೂರು , ದಕ್ಷಿಣ ಕನ್ನಡ ಮತ್ತು ಹಾವೇರಿ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಬುಧವಾರ ಸಂಜೆಯವರೆಗೆ 60 ಮಿ.ಮೀ.ಗಿಂತ ಹೆಚ್ಚಿನ ಮಳೆಯಾಗಿದೆ.


ಇದನ್ನೂ ಓದಿ: Karnataka Govt: ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯ ಸರ್ಕಾರಕ್ಕೆ ₹ 152 ಕೋಟಿ ನಷ್ಟ!


ಕಳೆದ ಕೆಲವು ತಿಂಗಳುಗಳಿಂದ ಸುಡುವ ಬಿಸಿಲಿನಿಂದ ತತ್ತರಿಸುತ್ತಿರುವ ಜನರಿಗೆ ಈ ಮಳೆ(Rainfall)ಯಿಂದ  ಸಮಾಧಾನವಾಗಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಪೂರ್ವ ಬೆಂಗಳೂರಿನ ಮನೋರಾಯಣ ಪಾಳ್ಯದಲ್ಲಿ 13.5 ಮಿ.ಮೀ ಮಳೆಯಾದರೆ, ಎಚ್‌ಎಸ್‌ಆರ್ ಲೇಔಟ್, ರಾಮಮೂರ್ತಿ ನಗರ, ಹೊರಮಾವು ಮತ್ತು ಮಧ್ಯ ಬೆಂಗಳೂರಿನ ಕೆಲವು ಭಾಗಗಳಲ್ಲಿ ಕಡಿಮೆ  ಮಳೆಯಾಗಿದೆ. ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಇದನ್ನೂ ಓದಿ: Bus Strike: ಸಾರಿಗೆ ನೌಕರರ ಮುಷ್ಕರಕ್ಕೆ 6 ದಿನಗಳಲ್ಲಿ 60 ಬಸ್ಸುಗಳು ಬಲಿ..!


ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು(Kodagu), ಹಾಸನ, ಚಿಕ್ಕಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ  ಭಾರಿ ಮಳೆಯಾಗುವ ಮುನ್ಸೂಚನೆಯಿಂದ ಇಂದು 'ಯಲ್ಲೋ ಅಲರ್ಟ್' ಘೋಷಣೆ ಮಾಡಲಾಗಿದೆ.


ಇದನ್ನೂ ಓದಿ: CBSE 10ನೇ ತರಗತಿ ಪರೀಕ್ಷೆ ರದ್ದಾದ ಬೆನ್ನಲೇ SSLC ಪರೀಕ್ಷೆಗಳ ಬಗ್ಗೆ ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.