ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯ ಚುನಾವಣಾ ಕಣ ಗರಿಗೆದರಿದೆ. ರಾಜಕೀಯ ನಾಯಕರ ಪಕ್ಷಾಂತರ ಪರ್ವ ಕೂಡ ಮುಂದುವರೆದಿದೆ. ಇತ್ತೀಚಿಗೆ ಜೆಡಿಎಸ್ ನ 7 ಜನ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಸೋಮವಾರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಲ್ತಾಫ್ ಖಾನ್ ಜೆಡಿಎಸ್ ಸೇರ್ಪಡೆಗೊಂಡಿದ್ದರು. ಇದರ ಬೆನ್ನಲ್ಲೇ ಬುಧವಾರ ಕಾಂಗ್ರೆಸಿನ 25 ಕಾರ್ಯಕತ್ರರು ಜೆಡಿಎಸ್ ಸೇರ್ಪಡೆಗೊಂಡಿದ್ದರು. ಇದೀಗ ಉತ್ತರ ಕರ್ನಾಟಕ ಭಾಗದಿಂದ ಗೆದ್ದು ಕ್ರೀಡಾ ಸಚಿವರಾಗಿದ್ದ ಆಲ್ಕೋಡು ಹನುಮಂತಪ್ಪ ಜೆಡಿಎಸ್ ತೊರೆಯಲು ಸಿದ್ದರಾಗಿದ್ದಾರೆ.


COMMERCIAL BREAK
SCROLL TO CONTINUE READING

ಹಿಂದುಳಿದ ವರ್ಗದಿಂದ ಬಂದು ಜೆಡಿಎಸ್ ನಲ್ಲಿ ಸ್ಥಾನ ಪಡೆದಿದ್ದ ಆಲ್ಕೋಡು ಹನುಮಂತಪ್ಪ, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ನಿಂದ ಟಿಕೆಟ್ ದೊರೆಯದ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಜೆಡಿಎಸ್ ಬಿಟ್ಟು ಅನ್ಯ ಪಕ್ಷದತ್ತ ಹೊರಡಲು ಮುಂದಾಗಿದ್ದಾರೆ.


ಆಲ್ಕೋಡು ಹನುಮಂತಪ್ಪ, ಈಗಾಗಲೇ ಸಿಎಂ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಬಿಜೆಪಿ ನಾಯಕರ ಜೊತೆಗೂ ಸಂಪರ್ಕದಲ್ಲಿದ್ದಾರೆ. ಯಾವ ಪಕ್ಷಕ್ಕೆ ಸೇರಬೇಕೆಂದು ಗೊಂದಲದಲ್ಲಿರುವ ಅವರು ಬೆಂಬಲಿಗರ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಯಾವ ಪಕ್ಷ ಸೇರಬೇಕೆಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.