`ಬಿಜೆಪಿಗೆ ರಾಷ್ಟ್ರ ಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯವಾದಂತಿದೆ`-ಸಿದ್ಧರಾಮಯ್ಯ
ದೇಶಪ್ರೇಮದ ನಾಟಕವಾಡುವ ಬಿಜೆಪಿಯವರಿಗೆ ರಾಷ್ಟ್ರಧ್ವಜ ಮತ್ತು ಈಶ್ವರಪ್ಪ ಅವರ ಸಚಿವ ಸ್ಥಾನ ಇವೆರಡರಲ್ಲಿ ಯಾವುದು ನಿಮ್ಮ ಆಯ್ಕೆ ಎಂಬ ಪ್ರಶ್ನೆಯನ್ನು ಇಟ್ಟಿದ್ದೆವು.ಬಿಜೆಪಿಗೆ ರಾಷ್ಟ್ರ ಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯವಾದಂತಿದೆ.ಈ ಘಟನೆಯಿಂದ ಬಿಜೆಪಿಯ ದೇಶಪ್ರೇಮದ ಹಿಂದಿರುವ ಸ್ವಾರ್ಥದ ಮುಖವಾಡ ಬಯಲಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕಿಡಿ ಕಾರಿದ್ದಾರೆ.
ಬೆಂಗಳೂರು: ದೇಶಪ್ರೇಮದ ನಾಟಕವಾಡುವ ಬಿಜೆಪಿಯವರಿಗೆ ರಾಷ್ಟ್ರಧ್ವಜ ಮತ್ತು ಈಶ್ವರಪ್ಪ ಅವರ ಸಚಿವ ಸ್ಥಾನ ಇವೆರಡರಲ್ಲಿ ಯಾವುದು ನಿಮ್ಮ ಆಯ್ಕೆ ಎಂಬ ಪ್ರಶ್ನೆಯನ್ನು ಇಟ್ಟಿದ್ದೆವು.ಬಿಜೆಪಿಗೆ ರಾಷ್ಟ್ರ ಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯವಾದಂತಿದೆ.ಈ ಘಟನೆಯಿಂದ ಬಿಜೆಪಿಯ ದೇಶಪ್ರೇಮದ ಹಿಂದಿರುವ ಸ್ವಾರ್ಥದ ಮುಖವಾಡ ಬಯಲಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: "ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ಅಸಹ್ಯ ರಾಜಕಾರಣದ ಪರಮಾವಧಿ"
ಸಿಂಧೂರ, ಹಿಜಾಬ್ ಎರಡೂ ನಮ್ಮ "ಸಂಸ್ಕೃತಿ ಮತ್ತು ನಂಬಿಕೆ". ಕುಂಕುಮ ಇಡುವುದರಿಂದ - ಹಿಜಾಬ್ ಧರಿಸುವುದರಿಂದ ಯಾರಿಗೂ ತೊಂದರೆ ಇಲ್ಲ. ಯಾರದೋ ಷಡ್ಯಂತ್ರಕ್ಕೆ ನಮ್ಮ ಸಂಸ್ಕೃತಿ ಮತ್ತು ನಂಬಿಕೆಗಳು ಬಲಿಯಾಗಬಾರದು.ಕೇಸರಿ ಶಾಲನ್ನು ಅಮಾನವೀಯ, ದ್ವೇಷ ಹರಡುವ ಕಾರಣಗಳಿಗೆ ಬಳಸಬಾರದು. ಕೇಸರಿ "ತ್ಯಾಗದ ಸಂಕೇತ", ಅದನ್ನು ದ್ವೇಷ ಸಾಧನೆಗೆ ಬಳಸುವುದೇ "ಧರ್ಮ ದ್ರೋಹ".ಎಳೆಯ ಮಕ್ಕಳಲ್ಲಿ ದ್ವೇಷ ತುಂಬುವವರು "ಜೀವ ವಿರೋಧಿಗಳು".ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಬಿಜೆಪಿಯ ನಿಲುವೇನು?: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ
ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವುದು ಬಿಜೆಪಿಯವರಿಗೆ ಸಣ್ಣ ವಿಷಯ ಇರಬಹುದು. ಆದರೆ ನಮಗೆ ಇದು ಬಹಳ ಗಂಭೀರವಾದ ಸಂಗತಿ. ರಾಷ್ಟ್ರಧ್ವಜ ಹಿಡಿದು ಲಕ್ಷಾಂತರ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. "ಹುತಾತ್ಮರ ತ್ಯಾಗ ವ್ಯರ್ಥವಾಗಲು ನಾವು ಬಿಡಲ್ಲ".ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನಸಲ್ಲಿ ದೇಶ ಪ್ರೇಮ, ದೇಶದ ಬಗ್ಗೆ ಗೌರವವಿದ್ದರೆ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಿ, ಅಧಿಕಾರಕ್ಕಿಂತ ದೇಶ ಮೊದಲು ಎಂದು ಸಾಬೀತು ಮಾಡಲಿ" ಎಂದು ಅವರು ಸವಾಲು ಹಾಕಿದರು.
ಇದನ್ನೂ ಓದಿ-ಧರಣಿ ಕೈ ಬಿಡದ ಕಾಂಗ್ರೆಸ್ : ಸೋಮವಾರದ ಬಳಿಕ ಸದನ ಅನಿರ್ದಿಷ್ಟಾವಧಿ ಗೆ ಮುಂದೂಡಲು ಸರ್ಕಾರ ತೀರ್ಮಾನ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.