ಬೆಂಗಳೂರು : ಇಂದು (ಸೆ.27) ವಿಶ್ವ ಪ್ರವಾಸೋದ್ಯಮ ದಿನ. ನಮ್ಮ ದೇಶ ಪ್ರವಾಸಿ ತಾಣಗಳ ತವರು ಎಂದೇ ಹೇಳಬಹುದು. ಧಾರ್ಮಿಕ ಕ್ಷೇತ್ರಗಳಿಂದ ಹಿಡಿದು, ಕಣ್ಣಿಗೆ ಮುದ, ಹಬ್ಬ ನೀಡುವ ಪ್ರಾಕೃತಿಕ ತಾಣಗಳು ಸೇರಿದಂತೆ ಪ್ರವಾಸಿಗರ ಮನತಣಿಸುವಷ್ಟು ವಿಭಿನ್ನವಾದ ಪ್ರವಾಸಿ ತಾಣಗಳು ನಮ್ಮ ದೇಶದಲ್ಲಿದೆ.  ಕೊರೋನಾ ಮುಗಿದ ಮೇಲೆ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : BBK 9 Day 2 : ಸಂಬರಗಿ ಸವಾಲ್‌ಗೆ ಹೆಣ್ಮಕ್ಳು ಕೊಟ್ರು ಜವಾಬ್‌


2022 ರಲ್ಲಿ ರೀ ಥಿಂಕಿಂಗ್ ಟೂರಿಸಂ (ಪ್ರವಾಸೋದ್ಯಮದ ಬಗ್ಗೆ ಮತ್ತೆ ವಿಚಾರ ಮಾಡುವುದು) ಅಭಿವೃದ್ಧಿಗೆ ಪ್ರವಾಸೋದ್ಯಮ ಆಧಾರ ಸ್ತಂಭ ಎಂಬ ಆಲೋಚನೆ ಬೆಳಸುವುದು ಎಂಬ ಧ್ಯೇಯದೊಂದಿಗೆ ವಿಶ್ವ ಪ್ರವಾಸೋದ್ಯಮವನ್ನು ಆಚರಿಸಲಾಗುತ್ತಿದೆ. ವಿಶ್ವ ಪ್ರವಾಸೋದ್ಯಮಕ್ಕೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದು, ನಮ್ಮ ಪರಿಸರವನ್ನು ಉಳಿಸಿ ಬೆಳೆಸೋಣ, ಎಲೆಮರೆ ಕಾಯಿಯಂತೆ ಇರುವ ಪ್ರವಾಸಿತಾಣಗಳನ್ನು ಅಭಿವೃದ್ಧಿ ಪಡಿಸೋಣ ಎಂದು ಕರೆ ನೀಡಿದ್ದಾರೆ. 


"ಕೋವಿಡ್ ನಂತರದ ದಿನಗಳಲ್ಲಿ ಪ್ರವಾಸೋದ್ಯಮ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. ಕರ್ನಾಟಕ ಸರ್ಕಾರ "ಒಂದು ರಾಜ್ಯ - ಹಲವು ಜಗತ್ತು" ಎಂಬಂತೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಭರಪೂರ ಅವಕಾಶ ಕಲ್ಪಿಸಿದೆ. ವಿಶ್ವ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು. 


 



Koo App